ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧಿಕಾರಿಗೆ ಬೆದರಿಕೆ: ಶಾಸಕ ರೇವೂರ ವಿರುದ್ಧ ಕೇಸ್ ದಾಖಲಿಸಲು ಸಿದ್ದರಾಮಯ್ಯ ಆಗ್ರಹ

|
Google Oneindia Kannada News

ಬೆಂಗಳೂರು, ಮೇ.29: ಅಧಿಕಾರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಲಬುರಗಿ ಶಾಸಕ‌ ದತ್ತಾತ್ರೇಯ ರೇವೂರು ವಿರುದ್ಧ ಕ್ರಮ ಜರುಗಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Recommended Video

ಜನಗಳಿಗೆ ಮೋಸ ಮಾಡುತ್ತಿರೊ ನಾಯಕರಿಗೆ ಶಿಕ್ಷೆ ಆಗಬೇಕು | Oneindia Kannada

ಕಲಬುರಗಿಯ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಮೇಶ್ ಸಂಗ ಅವರಿಗೆ ವರ್ಗಾವಣೆಯ ಬೆದರಿಕೆಯೊಡ್ಡಿ ಹಣಕ್ಕಾಗಿ ಪೀಡಿಸಿದ ಶಾಸಕ ದತ್ತಾತ್ರೇಯ ರೇವೂರ ವಿರುದ್ಧ ತಕ್ಷಣ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕಲಬುರಗಿ: ಬಿಸಿಎಂ ಅಧಿಕಾರಿಗೆ ಶಾಸಕ ರೇವೂರು ಬೆಂಬಲಿಗರಿಂದ ಬೆದರಿಕೆ ಕರೆಕಲಬುರಗಿ: ಬಿಸಿಎಂ ಅಧಿಕಾರಿಗೆ ಶಾಸಕ ರೇವೂರು ಬೆಂಬಲಿಗರಿಂದ ಬೆದರಿಕೆ ಕರೆ

'ಶಾಸಕ ದತ್ತಾತ್ರೇಯ ಅವರು ತಾನು ಬೆದರಿಕೆಯೊಡ್ಡಿದ್ದು ಮಾತ್ರವಲ್ಲ ಹಾದಿಮನಿ ಎಂಬ ಕಾರ್ಪೋರೇಟರ್‌ನಿಂದಲೂ ಬೆದರಿಕೆ ಹಾಕಿಸಿದ್ದಾರೆ. ಇದು ಭ್ರಷ್ಟಾಚಾರ ಎಸಗಿದ ಮತ್ತು ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಗಂಭೀರ ಆರೋಪವಾಗಿದೆ. ಈ ಬಗ್ಗೆ ಅಧಿಕಾರಿ ರಮೇಶ್ ಸಂಗ ನೀಡುವ ದೂರನ್ನು ದಾಖಲಿಸಿ ಕ್ರಮಕೈಗೊಳ್ಳಬೇಕು' ಎಂದು ತಿಳಿಸಿದ್ದಾರೆ.

Siddaramaiah demands to take action against kalaburagi MLA Dattatraya Patil revoor

'ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಕಮಿಷನರ್‌ಗೆ ಮಾತನಾಡಿದ್ದೇನೆ. ರಮೇಶ್ ಸಂಗ ಅವರ ದೂರನ್ನು ದಾಖಲಿಸಿ, ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ಬೆದರಿಕೆ ಹಾಕಿದ ಕಾರ್ಪೋರೇಟರನ್ನು ಸಹ ಬಂಧಿಸುವಂತೆ ತಿಳಿಸಿದ್ದೇನೆ' ಎಂದರು.

ಇದು ಜಾಮೀನು ರಹಿತ ಪ್ರಕರಣ. ಭ್ರಷ್ಟಾಚಾರ, ಕರ್ತವ್ಯಕ್ಕೆ ಅಡ್ಡಿಪಡಿಸಿದಕ್ಕೆ ಕಾನೂನಿನಡಿಯಲ್ಲಿ ಸೂಕ್ತ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

English summary
Congress senior Leader siddaramaiah demand to take action against kalaburagi MLA Dattatreya revoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X