ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರರಾಜ್ಯದಲ್ಲಿ ಸಿಲುಕಿರುವ ಕನ್ನಡಿಗರನ್ನು ರಕ್ಷಿಸಿ: ಸಿದ್ದರಾಮಯ್ಯ ಆಗ್ರಹ

|
Google Oneindia Kannada News

ಬೆಂಗಳೂರು, ಮೇ 8: ವಲಸೆ ಕಾರ್ಮಿಕರಿಗೆ ರೈಲು ಬಂದ್ ಮಾಡಿದ್ದ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದರು. ರೈಲು ನಿಲ್ಲಿಸಿದ ಕಾರಣ ವಲಸೆ ಕಾರ್ಮಿಕರು ಹೆದ್ದಾರಿಗಳ ಮೂಲಕ ಪತ್ನಿ, ಮಕ್ಕಳು ಹಾಗೂ ಕುಟುಂಬದ ಜೊತೆ ನಡೆದುಕೊಂಡು ಹೋಗಲು ಆರಂಭಿಸಿದರು. ಇದು ತೀವ್ರ ಟೀಕೆಗೆ ಗುರಿಯಾಗಿತ್ತು.

ಒಂದು ಕಡೆ ವಲಸೆ ಕಾರ್ಮಿಕರ ಸಂಕಷ್ಟ ಆದರೆ, ಮತ್ತೊಂದೆಡೆ ರಾಜ್ಯಕ್ಕೆ ಬರಬೇಕೆಂದು ಕಾತುರದಿಂದ ಕಾಯುತ್ತಿರುವ ಹೊರರಾಜ್ಯದ ಕನ್ನಡಿಗರು. ಸಾವಿರಾರು ಸಂಖ್ಯೆಯಲ್ಲಿ ರಾಜ್ಯದ ಹೊರೆಗೆ ಹೋಗಿದ್ದ ಕನ್ನಡಿಗರು ಕರ್ನಾಟಕಕ್ಕೆ ಬರಲಾಗದೆ ಕಷ್ಟಕ್ಕೆ ಸಿಲುಕಿದ್ದಾರೆ.

ಸಿಎಂ ಘೋಷಿಸಿದ ಕೊರೊನಾ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯರಿಗೆ ದೂರು! ಸಿಎಂ ಘೋಷಿಸಿದ ಕೊರೊನಾ ಪ್ಯಾಕೇಜ್ ಬಗ್ಗೆ ಸಿದ್ದರಾಮಯ್ಯರಿಗೆ ದೂರು!

ಕೂಡಲೇ ಅಂತವರನ್ನು ರಾಜ್ಯಕ್ಕೆ ಕರೆತರುವ ಕೆಲಸ ಮಾಡಬೇಕೆಂದು ಸರ್ಕಾರಕ್ಕೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಮುಂದೆ ಓದಿ....

ಗಡಿಯೊಳಗೆ ಅನುಮತಿಸಿ

ಗಡಿಯೊಳಗೆ ಅನುಮತಿಸಿ

''ಬೇರೆ ರಾಜ್ಯಗಳಲ್ಲಿ ಸಾವಿರಾರು ಕನ್ನಡಿಗರು ರಾಜ್ಯಕ್ಕೆ ಬರಲು ಕಾಯುತ್ತಿದ್ದಾರೆ. ಅವರಿಗೆ ಬರಲು ಪ್ರಯಾಣಕ್ಕೆ ವ್ಯವಸ್ಥೆ ಮಾಡುವ ಜೊತೆಯಲ್ಲಿ ಈಗಾಗಲೇ ಬಂದು ಗಡಿಗಳಲ್ಲಿ ಕಾಯುತ್ತಿರುವವರನ್ನು ಸತಾಯಿಸದೆ ಒಳಗೆ ಬರಮಾಡಿಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಊರುಗಳಿಗೆ ಕಳಿಸುವ ವ್ಯವಸ್ಥೆ ಮಾಡಬೇಕು'' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

56000 ಅರ್ಜಿಗಳು ಸಲ್ಲಿಕೆ

56000 ಅರ್ಜಿಗಳು ಸಲ್ಲಿಕೆ

''ಕೊರೊನಾ ಸಂಕಷ್ಟದಿಂದ ಹೇರಿಕೆಯಾಗಿದ್ದ ಲಾಕ್‌ಡೌನ್‌ ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲಾಗಿದೆ. ಹಾಗಾಗಿ, ಅನ್ಯ ರಾಜ್ಯಗಳಲ್ಲಿರುವ ಸುಮಾರು 56000 ಕನ್ನಡಿಗರು ರಾಜ್ಯಕ್ಕೆ ಬರಲು ಪಾಸುಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮುಂಬೈ ಮುಂತಾದ ದೊಡ್ಡ ನಗರಗಳಲ್ಲಿ ಅಸಂಖ್ಯಾತ ಜನರು ಸಿಲುಕಿಕೊಂಡಿದ್ದಾರೆ. ಬಹಳಷ್ಟು ಮಂದಿ ಗಡಿವರೆಗೂ ಬಂದು ಕಾಯುತ್ತಿದ್ದಾರೆ. ಇಂತವರನ್ನು ಜಿಲ್ಲಾಡಳಿತ ರಾಜ್ಯದ ಒಳಗೆ ಅನುಮತಿಸದೆ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ. ರಾಜ್ಯ ಗೌರವ ಮತ್ತು ಜನರ ಆರೋಗ್ಯ ರಕ್ಷಿಸಬೇಕಾಗಿರುವುದು ಸರ್ಕಾರದ ಕರ್ತವ್ಯ'' ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ಸಿಎಂ ಪ್ಯಾಕೇಜ್‌ ಬಗ್ಗೆ ಸಿದ್ಧರಾಮಯ್ಯ ಟೀಕೆಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ: ಸಿಎಂ ಪ್ಯಾಕೇಜ್‌ ಬಗ್ಗೆ ಸಿದ್ಧರಾಮಯ್ಯ ಟೀಕೆ

ವಲಸೆ ಕಾರ್ಮಿಕರನ್ನು ಬೀದಿಗೆ ಬಿಟ್ಟಿರುವುದು ಸರಿಯಲ್ಲ

ವಲಸೆ ಕಾರ್ಮಿಕರನ್ನು ಬೀದಿಗೆ ಬಿಟ್ಟಿರುವುದು ಸರಿಯಲ್ಲ

''ಬೆಂಗಳೂರು ನಗರವೂ ಸೇರಿದಂತೆ ನಮ್ಮ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳಿಗೆ ಬೆವರಧಾರೆಯೆರೆದ ವಲಸೆ ಕಾರ್ಮಿಕರನ್ನು ಕಷ್ಟಕಾಲದಲ್ಲಿ ಕೈಬಿಟ್ಟು ಬೀದಿಗೆ ತಳ್ಳಿರುವ ಮುಖ್ಯಮಂತ್ರಿ ನಡೆ ಅಮಾನವೀಯವಾದುದು. ತಕ್ಷಣ ತಪ್ಪು ತಿದ್ದಿಕೊಂಡು ಬೀದಿಯಲ್ಲಿರುವ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರ ಊರುಗಳಿಗೆ ಕಳಿಸಲು ವ್ಯವಸ್ಥೆ ಮಾಡಬೇಕು. ಅಲ್ಲಿಯವರೆಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕು'' ಎಂದು ಬೇಡಿಕೆಯಿಟ್ಟಿದ್ದಾರೆ.

ಕೊರೊನಾ ಪರೀಕ್ಷೆಗೆ ಒಳಪಡಿಸಿ

''ಬೀದಿಯಲ್ಲಿರುವ ವಲಸೆ ಕಾರ್ಮಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ರೋಗ ಲಕ್ಷಣಗಳಿದ್ದರೆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಅವಶ್ಯ ಇರುವಷ್ಟು ರೈಲುಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಬೇಕು. ಅವರಿರುವ ಜಾಗದಿಂದ ರೈಲ್ವೆ ನಿಲ್ದಾಣದ ವರೆಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಬೇಕು'' ಎಂದು ಟ್ವೀಟ್ ಮಾಡಿದ್ದಾರೆ.

English summary
Karnataka opposition leader Siddaramaiah demand to allow stranded kannadigas to state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X