ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೆಟ್ರೋಲ್ ಮತ್ತು ಡಿಸೇಲ್ ಏರಿಕೆ ಖಂಡಿಸಿದ ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜೂನ್ 10: ಸತತ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಸತತವಾಗಿ ಏರಿಕೆಯಾಗಿರುವುದನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ.

Recommended Video

ಡಿಕೆಶಿ ಪದಗ್ರಹಣ ಮತ್ತೋಮ್ಮೆ ಮುಂದೂಡಲಾದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು | Siddaramaiah | DKS

''ಸತತ ನಾಲ್ಕು ದಿನದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ 2 ರೂಪಾಯಿ ಹೆಚ್ಚಿಸಲಾಗಿದೆ. ಕಚ್ಚಾ ತೈಲ ದರ ಏರಿಕೆಯಾಗುತ್ತಿದ್ದಂತೆ ಸಾಮಾನ್ಯರ ಮೇಲೆ ಹೊರೆ ಹಾಕುವುದನ್ನು ಮೋದಿ ಬಹಳ ವೇಗವಾಗಿ ಮಾಡ್ತಾರೆ. ಅದೇ ಕಚ್ಚಾ ತೈಲಾ ಬದರ ಇಳಿಕೆಯಾದಾಗ ಬೆಲೆ ಇಳಿಸುವುದಕ್ಕೆ ಹಠ ಮಾಡ್ತಾರೆ.

ಪೆಟ್ರೋಲ್, ಡೀಸೆಲ್ ದರ ಸತತ ನಾಲ್ಕನೇ ದಿನ ಏರಿಕೆಪೆಟ್ರೋಲ್, ಡೀಸೆಲ್ ದರ ಸತತ ನಾಲ್ಕನೇ ದಿನ ಏರಿಕೆ

ಇಂಧನ ಬೆಲೆ ಹೆಚ್ಚುತ್ತಿರುವಾಗ ಬೇಡಿಕೆ ಸುಧಾರಿಸುತ್ತದೆ ಎಂದು ನಾವು ಹೇಗೆ ನಿರೀಕ್ಷಿಸಲು ಸಾಧ್ಯ?'' ಎಂದು ಪ್ರಶ್ನಿಸಿದ್ದಾರೆ.

ಬುಧವಾರ ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಹಚ್ಚಳವಾಗಿದೆ. ಡಿಸೇಲ್ ಬೆಲೆಯಲ್ಲಿ 45 ಪೈಸೆ ಹೆಚ್ಚಳವಾಗಿದೆ.

Siddaramaiah Condemns Petrol And Diesel Increase

ಸುದೀರ್ಘ ಲಾಕ್‌ಡೌನ್‌ ಇದ್ದ ಕಾರಣ ಸುಮಾರು 83 ದಿನಗಳ ಬಳಿಕ ಜೂನ್ 7 ರಂದು ಮೊದಲ ಸಲ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಲಾಯಿತು. ನಂತರ ಜೂನ್ 8, ಜೂನ್ 9 ಹಾಗೂ ಜೂನ್ 10 ಸಹ ಬೆಲೆ ಏರಿಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 75.77 ರೂಪಾಯಿ ಹಾಗೂ ಡಿಸೇಲ್ ಬೆಲೆ 68.09 ರೂಪಾಯಿ ನಿಗದಿಯಾಗಿದೆ.

English summary
Congress leader siddaramaiah condemns petrol and diesel Increase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X