ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಬೆಂಗಳೂರು ಪ್ರದಕ್ಷಿಣೆ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಜೂ.15 : ಬೆಂಗಳೂರಿನ ಅಭಿವೃದ್ಧಿ ಕೆಲಸಗಳ ಪರಿಶೀಲನೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ನಗರ ಪ್ರದಕ್ಷಿಣೆ ನಡೆಸಿದರು. ಆನೆಪಾಳ್ಯ, ಶಾಂತಿನಗರ, ವಿವೇಕನಗರ, ದೊಮ್ಮಲೂರು ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು.

ಸಿದ್ದರಾಮಯ್ಯ ಅವರು ಪ್ರತಿ ಶನಿವಾರ ನಗರ ಪ್ರದಕ್ಷಿಣೆ ನಡೆಸುತ್ತಿದ್ದರು. ಆದರೆ, ಜೂನ್ 13ರಂದು ಬೇರೆ-ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಸೋಮವಾರ ನಗರ ಪ್ರದಕ್ಷಿಣೆ ನಡೆಸಿದರು. ಪ್ರದಕ್ಷಿಣೆ ವೇಳೆ ಅವರಿಗೆ ಲೋಬಿಪಿ ಉಂಟಾಗಿದ್ದರಿಂದ ಬಾಣಸವಾಡಿ, ಕೆಜಿ ಹಳ್ಳಿ ಪ್ರವಾಸ ಮೊಟಕುಗೊಳಿಸಿ ಗೃಹ ಕಚೇರಿ ಕೃಷ್ಣಾಗೆ ವಾಪಸ್ ಬಂದರು.

siddaramaiah

ಬೆಂಗಳೂರು ಪ್ರದಕ್ಷಿಣೆಯ ಮುಖ್ಯಾಂಶಗಳು

* ಮೊದಲು ಆನೆಪಾಳ್ಯಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ರಸ್ತೆ ಅಗಲೀಕರಣ ಕಾಮಗಾರಿಯನ್ನು ವೀಕ್ಷಿಸಿದರು. ನಂತರ ಶಾಂತಿನಗರಕ್ಕೆ ಬಂದ ಸಿಎಂ ಬಳಿ ನಂದನ್ ಬಡಾವಣೆ ಜನರು ಮೂಲಸೌಕರ್ಯ ಒದಗಿಸುವಂತೆ ಮನವಿ ಮಾಡಿದರು. [ಮೇ 15ರ ಬೆಂಗಳೂರು ಪ್ರದಕ್ಷಿಣೆಯಲ್ಲಿ ಏನಾಯ್ತು?]

* ಈಜಿಪುರಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಮನೆ ಕಳೆದುಕೊಂಡವರು ಮನೆ ನೀಡುವಂತೆ ಮನವಿ ಮಾಡಿದರು. ಸರ್ಕಾರ ಸಂತ್ರಸ್ತರಿಗೆ ನೀಡಿ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. [ಬೆಂಗಳೂರು ರೌಂಡ್ಸ್ : ಪೀಣ್ಯ ಅಭಿವೃದ್ಧಿಗೆ 100 ಕೋಟಿ ನೆರವು]

* ದೊಮ್ಮಲೂರಿಗೆ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಬಯೋಗ್ಯಾಸ್ ಘಟಕದ ಕಾಮಗಾರಿಯನ್ನು ವೀಕ್ಷಿಸಿದರು. ಹಲಸೂರಿನಲ್ಲಿ ಬಿಬಿಎಂಪಿ ಆಸ್ಪತ್ರೆಗೆ ಭೇಟಿ ನೀಡಿದರು.

ನಗರ ಪ್ರದಕ್ಷಿಣೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, 'ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ಯಾರೂ ಟೆಂಡರ್‌ಗೆ ಬಂದಿಲ್ಲ ಆದ್ದರಿಂದ ಮತ್ತೊಮ್ಮೆ ಟೆಂಡರ್ ಕರೆಯಲು ಸೂಚನೆ ನೀಡಿದ್ದೇನೆ' ಎಂದು ಹೇಳಿದರು.

'ಬೆಂಗಳೂರು ನಗರದಲ್ಲಿ ಸೇನೆಗೆ ಸೇರಿದ ಜಮೀನು ಸಾಕಷ್ಟು ಕಡೆ ಇದೆ. ಈ ಜಮೀನಿನಲ್ಲಿ ಬಡವರು ವಾಸ ಮಾಡುತ್ತಿದ್ದಾರೆ. ಈ ಮನೆಗಳನ್ನು ತೆರವುಗೊಳಿಸುವಂತೆ. ನೋಟಿಸ್ ನೀಡಲಾಗಿದೆ. ಈ ಕುರಿತು ರಕ್ಷಣಾ ಸಚಿವರ ಜೊತೆ ಮಾತುಕತೆ ನಡೆಸುತ್ತೇನೆ' ಎಂದು ಸಿದ್ದರಾಮಯ್ಯ ತಿಳಿಸಿದರು.

English summary
Karnataka Chief Minister Siddaramaiah inspected Bengaluru (Bangalore) city development works on Monday, June 15 by Bengaluru rounds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X