ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಸಾಕ್ಷಿ ಬೇಕೇ? ಸಿದ್ದರಾಮಯ್ಯ

|
Google Oneindia Kannada News

ಬೆಂಗಳೂರು, ಜುಲೈ 7: ''ಹೆಚ್ಚು ಹೆಚ್ಚು ಪರೀಕ್ಷೆ ಮಾಡಿದರೆ ದೇಶದಲ್ಲಿ ಹೆಚ್ಚು ಕೊರೊನಾ ಸೋಂಕಿತರು ಪತ್ತೆಯಾಗುತ್ತಾರೆ. ಇಲ್ಲವಾದಲ್ಲಿ ಸೋಂಕು ಇದ್ದರೂ ವರದಿಯಾಗುವುದಿಲ್ಲ'' ಎಂದು ಈ ಹಿಂದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದರು.

ಇದೀಗ, ಟ್ರಂಪ್ ಅವರ ಅಭಿಪ್ರಾಯವನ್ನು ಕರ್ನಾಟಕ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಎತ್ತಿ ಹಿಡಿದ್ದಾರೆ. ಕೊವಿಡ್ ಪರೀಕ್ಷೆಯಲ್ಲಿ ರಾಜ್ಯ ಸರ್ಕಾರದ ವಿಫಲತೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ: ಸಿದ್ದರಾಮಯ್ಯ ಆರೋಪಕ್ಕೆ ಕೊನೆಗೂ ಉತ್ತರಿಸಿದ ಸಿಎಂವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ: ಸಿದ್ದರಾಮಯ್ಯ ಆರೋಪಕ್ಕೆ ಕೊನೆಗೂ ಉತ್ತರಿಸಿದ ಸಿಎಂ

ಅಗತ್ಯಕ್ಕಿಂತ ಕಡಿಮೆ ಮಟ್ಟದಲ್ಲಿ ಕೊವಿಡ್ ಪರೀಕ್ಷೆಯಾಗುತ್ತಿದೆ. ಹೆಚ್ಚು ಪರೀಕ್ಷೆ ಮಾಡಲು ಸರ್ಕಾರ ಏಕೆ ಹಿಂದೇಟು ಹಾಕುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ಬಗ್ಗೆ ಸ್ಪಷ್ಟ ನಿರ್ಧಾರದ ಕೈಗೊಳ್ಳದ ಸರ್ಕಾರವನ್ನು 'ಕೊಲೆಗಡುಕ ಸರ್ಕಾರ' ಎಂದು ಟೀಕಿಸಿದ್ದಾರೆ.

ಇದು ಕೊಲೆಗಡುಕ ಸರ್ಕಾರ

ಇದು ಕೊಲೆಗಡುಕ ಸರ್ಕಾರ

''ಕೊರೊನಾ ಸೋಂಕುಪರೀಕ್ಷೆ ಹೆಚ್ಚು ನಡೆಸಿದರೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ. ಆಗ‌ ಅದೇ ಪ್ರಮಾಣದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಕರ್ನಾಟಕ ಸರ್ಕಾರ ಸೋಂಕುಪರೀಕ್ಷೆ ಹೆಚ್ಚು ನಡೆಸುತ್ತಿಲ್ಲ. ಜನರ ಸಾವಿಗೆ ಕಾರಣವಾದ ಸರ್ಕಾರವನ್ನು ಕೊಲೆಗಡುಕ ಸರ್ಕಾರ ಎಂದು ಕರೆದರೆ ತಪ್ಪಾದೀತೇ?'' ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ರಾಜ್ಯ ಸರ್ಕಾರದ ಅಯೋಗ್ಯತೆಗೆ ಬೇರೆ ಸಾಕ್ಷಿ ಬೇಕೇ?

ರಾಜ್ಯ ಸರ್ಕಾರದ ಅಯೋಗ್ಯತೆಗೆ ಬೇರೆ ಸಾಕ್ಷಿ ಬೇಕೇ?

ರಾಜ್ಯದಲ್ಲಿ ಕೊವಿಡ್ ಪರೀಕ್ಷಾ ಕೇಂದ್ರಗಳಿರುವುದು ಕೇವಲ 59. ಅವುಗಳ ದಿನದ ಪರೀಕ್ಷಾ ಸಾಮರ್ಥ್ಯ 31,116. ಈಗ ಪ್ರತಿದಿನ ನಡೆಯುತ್ತಿರುವುದು ಕೇವಲ 13, 910 ಪರೀಕ್ಷೆ ಮಾತ್ರ. ಅಂದರೆ‌ ಒಟ್ಟು ಸಾಮರ್ಥ್ಯದ ಶೇಕಡಾ 44.7 ರಷ್ಟು ಮಾತ್ರ ಬಳಕೆ. ರಾಜ್ಯ ಸರ್ಕಾರದ ಅಯೋಗ್ಯತೆಗೆ ಬೇರೆ ಸಾಕ್ಷಿ ಬೇಕೇ?

ಬಿಜೆಪಿ ಸರ್ಕಾರ ಜೀವಂತವಾಗಿದೆಯೇ? ಸಿದ್ದರಾಮಯ್ಯ ಟೀಕಾ ಪ್ರಹಾರಬಿಜೆಪಿ ಸರ್ಕಾರ ಜೀವಂತವಾಗಿದೆಯೇ? ಸಿದ್ದರಾಮಯ್ಯ ಟೀಕಾ ಪ್ರಹಾರ

ಏಕೆ ಹೆಚ್ಚು ಪರೀಕ್ಷೆ ಮಾಡ್ತಿಲ್ಲ?

ಏಕೆ ಹೆಚ್ಚು ಪರೀಕ್ಷೆ ಮಾಡ್ತಿಲ್ಲ?

''ಕೊರೊನಾ ನಿಯಂತ್ರಣಕ್ಕೆ ಇರುವ ಏಕೈಕ ಮಾರ್ಗ ಎಂದರೆ ಸೋಂಕು ಪರೀಕ್ಷೆ ಎನ್ನುವುದನ್ನು ವಿಶ್ವದಾದ್ಯಂತ ವೈದ್ಯರು-ತಜ್ಞರು ಹೇಳುತ್ತಲೇ ಇದ್ದಾರೆ. ಕೊರೊನಾ ಓಡಿಸಲು ಜಾಗಟೆ ಬಾರಿಸಿದ ಅಯೋಗ್ಯ ಸರ್ಕಾರಕ್ಕೆ ಸೋಂಕು ಪರೀಕ್ಷೆಯನ್ನು ಸರಿಯಾಗಿ ನಡೆಸಬೇಕೆಂದು ಮಾತ್ರ ಗೊತ್ತಾಗಿಲ್ಲ'' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಯಾರಿಗೆ ಮತ್ತು ಯಾಕೆ ಹೆದರುತ್ತಿದೆ?

ಸರ್ಕಾರ ಯಾರಿಗೆ ಮತ್ತು ಯಾಕೆ ಹೆದರುತ್ತಿದೆ?

ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಎಂದು ದಿನಕ್ಕೆರಡು ಬಾರಿ ಸಿಎಂ ಮತ್ತು ಸಚಿವರು ಅಬ್ಬರಿಸುತ್ತಿದ್ದಾರೆ. ಸ್ಯಾಂಪಲ್‌ಗಾಗಿ ಒಂದೆರಡು ಆಸ್ಪತ್ರೆಗಳ ವಿರುದ್ಧ 'ಕಠಿಣ ಕ್ರಮ' ಕೈಗೊಳ್ಳಬಾರದೇಕೆ? ಸರ್ಕಾರ ಯಾರಿಗೆ ಮತ್ತು ಯಾಕೆ ಹೆದರುತ್ತಿದೆ?

English summary
Karnataka has capacity to test about 31,000 samples a day. But only about 14,000 samples are tested which is less than 50% of the capacity. Why are we still not testing at full capacity? - siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X