ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದ್ಯದಂಗಡಿ ತೆರೆದ ಸರ್ಕಾರದ ನಿರ್ಧಾರವನ್ನ ಖಂಡಿಸಿದ ಸಿದ್ಧರಾಮಯ್ಯ

|
Google Oneindia Kannada News

ಬೆಂಗಳೂರು, ಮೇ 5: ಮದ್ಯ ಮಾರಾಟದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಖಂಡಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Recommended Video

ನನಗೆ ನಾನೇ ಹೈ ಕಮಾಂಡ್ ಎಷ್ಟೇ ನೋವಿದ್ರೂ ಸಿದ್ದರಾಮಯ್ಯ ಮುಖ ನೋಡ್ಕೊಂಡು ಸುಮ್ನಿದ್ವಿ | Shivanand | Siddaramaiah

''ಮದ್ಯದಂಗಡಿ ತೆರೆದದ್ದು @CMofKarnataka ಅವರ ಅವಸರದ ಮತ್ತು ಪೂರ್ವ ಸಿದ್ದತೆಯಿಲ್ಲದ ನಿರ್ಧಾರ. ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ. ಇದರಿಂದಾಗಿ ಕೊರೋನಾ ಸೋಂಕು ಉಲ್ಭಣಿದರೆ ಅದರ ಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ.'' ಎಂದು ಸಿದ್ಧರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮದ್ಯದ ಬೆಲೆಯನ್ನು 50ರಷ್ಟು ಏರಿಕೆ ಮಾಡಿದ ಆಂಧ್ರ ಪ್ರದೇಶ ಮದ್ಯದ ಬೆಲೆಯನ್ನು 50ರಷ್ಟು ಏರಿಕೆ ಮಾಡಿದ ಆಂಧ್ರ ಪ್ರದೇಶ

ಈ ಹಿಂದೆ ಮದ್ಯ ನಿಷೇಧದ ಬಗ್ಗೆ ಪ್ರತಿಕ್ರಿಯೆ ನೀಡಿದ ವೇಳೆ, ಸರ್ಕಾರ ಮದ್ಯ ಮಾರಾಟ ಮಾಡಲಿ ಎಂದು ಸಿದ್ಧರಾಮಯ್ಯ ಹೇಳಿದ್ದರು. ಆದರೆ, ಈಗ ಮದ್ಯ ಮಾರಾಟ ಮಾಡುವ ಸಮಯದಲ್ಲಿ ಸರ್ಕಾರ ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.

Siddaramaiah Tweets About Liquor Selling

ಮದ್ಯದಂಗಡಿ ಮುಂದೆ ದೊಡ್ಡ ಕ್ಯೂಗಳು ಇದ್ದವು. ಎಷ್ಟೋ ಕಡೆ ಸಾಮಾಜಿಕ ಅಂತರ ಕಾಪಾಡಿಲ್ಲ. ಕೊರೊನಾ ಬಾರದಂತೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದರಿಂದ ಮತ್ತೆ ಕೊರೊನಾ ಹೆಚ್ಚಾದರೆ, ಅದರ ಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ ಎಂದಿದ್ದಾರೆ.

ಆರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿ ಇಟ್ಟುಕೊಂಡು ನಿನ್ನೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಮೊದಲೇ ದಿನವೇ 45 ಕೋಟಿ ಮದ್ಯ ಮಾರಾಟವಾಗಿದೆ.

English summary
Opposition party leader Siddaramaiah tweets about liquor selling in karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X