ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ, ಕುಮಾರಸ್ವಾಮಿ ಬುಟ್ಟಿಯಲ್ಲಿರುವ ಹಲ್ಲಿಲ್ಲದ ಹಾವು: ಶೋಭಾ

|
Google Oneindia Kannada News

Recommended Video

CM Yediyurappa campaigning BJP candidate Shivaram Hebbar in mundagoda.

ಬೆಂಗಳೂರು,ನವೆಂಬರ್ 28: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಬುಟ್ಟಿಯಲ್ಲಿರುವ ಹಲ್ಲಿಲ್ಲದ ಹಾವು ಎಂದು ಸಂಸದೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರ ಕೈಲಿ ಅಧಿಕಾರವೂ ಇಲ್ಲ ಏನೂ ಇಲ್ಲ,ಕೇವಲ ಆರು ಜನ ಗೆದ್ದರೂ ನಮಗೆ ಬಹುಮತ ಸಿಗುತ್ತದೆ.ಕ್ಷೇತ್ರದ ಅಭಿವೃದ್ಧಿ ಗಾಗಿ 15 ಜನರೂ ಗೆದ್ದು ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಬುಸುಗುಟ್ಟುವುದು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ

ಬುಸುಗುಟ್ಟುವುದು ಬಿಟ್ಟು ಏನೂ ಮಾಡಲು ಸಾಧ್ಯವಿಲ್ಲ

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹಲ್ಲಿಲ್ಲದ ಹಾವು ಬುಟ್ಟಿಯಲ್ಲಿ ಹಾಕಿರುವ ಹಾವು.ಬುಸುಗುಟ್ಟುವುದು ಬಿಟ್ಟು ಅವರಿಂದ ಏನು ಮಾಡಲು ಸಾಧ್ಯವಿಲ್ಲ.ಅವರಿಗೆ ಅಧಿಕಾರವಿಲ್ಲ.ಅದೇ ಬಿಜೆಪಿ ಅಧಿಕಾರದಲ್ಲಿದೆ.ಹದಿನೈದು ಜನರಲ್ಲಿ ಏಳು ಮಂದಿ ಗೆದ್ದು ಬಂದರೂ ಬಿಜೆಪಿ ಸರ್ಕಾರ ಉಳಿಯುತ್ತೆ‌ ಹದಿನೈದಕ್ಕೆ ಹದಿನೈದು ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದರು.

 ಸೋಮಶೇಖರ್ ಅಭಿವೃದ್ಧಿ ಮುಂದುವರೆಸಿದ್ದಾರೆ

ಸೋಮಶೇಖರ್ ಅಭಿವೃದ್ಧಿ ಮುಂದುವರೆಸಿದ್ದಾರೆ

ನಾನು ಪ್ರಾರಂಭಿಸಿದ್ದ ಅಭಿವೃದ್ದಿ ಕಾಮಗಾರಿಗಳನ್ನು ಸೋಮಶೇಖರ್ ಮುಂದುವರಿಸಿದ್ದಾರೆ‌.ಆದರೆ ಯಶವಂತಪುರ ಕ್ಷೇತ್ರಕ್ಕೆ ಮತ್ತಷ್ಟು ಅಭಿವೃದ್ದಿ ಕೆಲಸಗಳು ಆಗಬೇಕು.ಅದಕ್ಕೆ ಯಡಿಯೂರಪ್ಪನವರ ಕೈ ಬಲಪಡಿಸಬೇಕು‌.ಎಸ್.ಟಿ.ಸೋಮಶೇಖರ್ ಗೆಲ್ಲಬೇಕು. ಎಂದು ಹೇಳಿದರು.

ಬೈ ಎಲೆಕ್ಷನ್ ನಂತರ ಕಾಂಗ್ರೆಸ್ ಖಾಲಿ, ಸಿದ್ದರಾಮಯ್ಯ ನಿರುದ್ಯೋಗಿ: ಕಟೀಲ್ಬೈ ಎಲೆಕ್ಷನ್ ನಂತರ ಕಾಂಗ್ರೆಸ್ ಖಾಲಿ, ಸಿದ್ದರಾಮಯ್ಯ ನಿರುದ್ಯೋಗಿ: ಕಟೀಲ್

 ಕೇವಲ ಆರು ಜನ ಗೆದ್ದರೂ ನಮಗೆ ಬಹುಮತ ಸಿಗುತ್ತೆ

ಕೇವಲ ಆರು ಜನ ಗೆದ್ದರೂ ನಮಗೆ ಬಹುಮತ ಸಿಗುತ್ತೆ

ಸಿದ್ದರಾಮಯ್ಯ, ಕುಮಾರಸ್ವಾಮಿ ಬುಟ್ಟಿಯಲ್ಲಿ ಹಾಕಿರುವ ಹಲ್ಲಿಲ್ಲದ ಹಾವು, ಅವರ ಕೈಲಿ ಅಧಿಕಾರವೂ ಇಲ್ಲ ಏನೂ ಇಲ್ಲ,ಕೇವಲ ಆರು ಜನ ಗೆದ್ದರೂ ನಮಗೆ ಬಹುಮತ ಸಿಗುತ್ತದೆ.ಕ್ಷೇತ್ರದ ಅಭಿವೃದ್ಧಿ ಗಾಗಿ 15 ಜನರೂ ಗೆದ್ದು ಬರ್ತಾರೆ.

 ಯಶವಂತಪುರದಲ್ಲಿ ಕಣದಲ್ಲಿರುವವರು ಯಾರು?

ಯಶವಂತಪುರದಲ್ಲಿ ಕಣದಲ್ಲಿರುವವರು ಯಾರು?

ಯಶವಂತಪುರ ಸೇರಿ ಒಟ್ಟು 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ ರಂದು ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿ ಅಭ್ಯರ್ಥಿಯಾಗಿ ಎಸ್‌ಟಿ ಸೋಮಶೇಖರ್, ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಗರಾಜ್, ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯೀಗೌಡ ಕಣದಲ್ಲಿದ್ದಾರೆ.

English summary
MP Shobha Karandlaje says Siddaramaiah And Kumaraswamy A Toothless Snake In The Basket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X