• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋ ಪೂಜೆ ಮಾಡಿಬಿಟ್ಟರೆ ಮುಗಿದುಹೋಯ್ತೇ? ಕಷ್ಟ ಸುಖವನ್ನೂ ನೋಡಿ...

|

ಬೆಂಗಳೂರು, ಡಿಸೆಂಬರ್ 11: ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ವಿರೋಧದ ನಡುವೆ ಗೋಹತ್ಯೆ ನಿಷೇಧ ಕಾಯ್ದೆ ಅಂಗೀಕಾರವಾಗಿದೆ. ಈ ಬೆಳವಣಿಗೆಯನ್ನು ವಿರೋಧಿಸಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರು ಸದನದಲ್ಲಿ ಏಕಾಏಕಿ ವಿಧೇಯಕ ತಂದರು. ಸಾಧಕ ಬಾಧಕಗಳನ್ನು ಗಮನಿಸದೇ ಕಾಯ್ದೆಗೆ ಅಂಗೀಕಾರ ನೀಡಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಗೋಮಾತೆ ಮೇಲೆ ಪ್ರಮಾಣ ಮಾಡಿ: ಯಡಿಯೂರಪ್ಪಗೆ ಸಿದ್ದರಾಮಯ್ಯ ಸವಾಲು!

ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಈಗಾಗಲೇ ಜಾರಿಯಲ್ಲಿದೆ. 1964ರ ಕಾಯ್ದೆಗೆ ಅನೇಕ ತಿದ್ದುಪಡಿ ಮಾಡಿದ್ದಾರೆ. ಆ ಕಾಯ್ದೆಯಲ್ಲಿ ಯಾವ ಪ್ರಾಣಿ ವಧೆ ಮಾಡಬಹುದೆಂದು ತಿಳಿಸಿದೆ. 12 ವರ್ಷ ತುಂಬಿದ್ದರೆ ಅಂಥವನ್ನು ವಧೆ ಮಾಡಬಹುದು. ಗೊಡ್ಡಾದರೆ, ಹಾಲು ಕರೆಯದಿದ್ದರೆ ವಧೆ ಮಾಡಬಹುದು. ಪ್ರಾಣಿ ರೋಗಗ್ರಸ್ಥವಾಗಿದ್ದರೆ ತಿನ್ನಲು ಯೋಗ್ಯವಲ್ಲ. ಈ ಎಲ್ಲಾ ಅಂಶಗಳು ಆ ಕಾಯ್ದೆಯಲ್ಲಿವೆ. ಕಾಯ್ದೆಯ ತಿದ್ದುಪಡಿಗೂ ಮುನ್ನ ಯಾವುದೇ ಅಧ್ಯಯನ ಮಾಡಿಲ್ಲ. ಅಧ್ಯಯನ ಮಾಡಿರುವ ವರದಿಯನ್ನೂ ನೋಡಿಲ್ಲ ಎಂದು ಆಪಾದಿಸಿದ್ದಾರೆ.

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

"ವೈಜ್ಞಾನಿಕವಾಗಿ ಅಧ್ಯಯನ ಮಾಡದೇ ಕಾಯ್ದೆ ತಂದಿದ್ದಾರೆ"

ಕಾನೂನು ತರಬೇಕಾದರೆ ಸಾಧಕ, ಬಾಧಕಗಳನ್ನು ನೋಡಬೇಕು. ಕೇವಲ ಭಾವನಾತ್ಮಕವಾಗಿ ಇದನ್ನು ತಂದಿದ್ದಾರೆ. ಜನರ ಭಾವನೆಗಳನ್ನು ಕೆರಳಿಸಲು ಈ ಕಾಯ್ದೆ ತಂದಿದ್ದಾರೆ. ವೈಜ್ಞಾನಿಕವಾಗಿ ಅಧ್ಯಯನ ಮಾಡದೇ ಈ ಕಾಯ್ದೆ ತಂದಿದ್ದಾರೆ. ಈಗ ವಿಧೇಯಕವನ್ನು ಕಾನೂನು ಮಾಡಲು ಹೊರಟಿದ್ದಾರೆ. ಜನರ ಸಮಸ್ಯೆಗಳನ್ನು ನೋಡಿಲ್ಲ ಎಂದು ರಾಜ್ಯ ಸರ್ಕಾರದ ನಡೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಮೂರೂವರೆ ಕೋಟಿ ಕರು ಹಾಕುವ ಜಾನುವಾರು ಇವೆ. ಗಂಡು ಕರು 10 ವರ್ಷ ಬದುಕಲಿದೆ. 34 ಕೋಟಿ ಹೋರಿಗಳು ಪ್ರತಿವರ್ಷ ಸಿಗುತ್ತವೆ. 6 ಕೋಟಿ ಹಸುಗಳು ಹಾಲು ನಿಲ್ಲಿಸುತ್ತವೆ. ಒಟ್ಟು 27 ಕೋಟಿ ಜಾನುವಾರು ಅನುತ್ಪಾದಕವಾಗುತ್ತವೆ. 2012ರ ಪಶುಗಣತಿಯಂತೆ 25,75805 ಕುಟುಂಬಗಳು ಹಸುಗಳನ್ನು ಸಾಕುತ್ತಿವೆ. ಪ್ರತಿದಿನ 79.35 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಇಷ್ಟು ರಾಸುಗಳಿಗೆ ಮೇವು ಎಷ್ಟು ಬೇಕಾಗುತ್ತದೆ? ಇದನ್ನೆಲ್ಲಾ ಎಲ್ಲಿ ತರೋಕೆ ಸಾಧ್ಯ ಎಂದು ಪ್ರಶ್ನಿಸಿದರು.

"ರೈತರಿಗೆ ಇದು ದೊಡ್ಡ ಪೆಟ್ಟು ನೀಡಲಿದೆ"

ಕಾಯ್ದೆ ತರುವ ಮುನ್ನ ಯೋಚಿಸಬೇಕು.ಬರಗಾಲ ಬಂದರೆ ರಾಸು ಸಾಕುವುದು ಹೇಗೆ? ಈಗಲೇ ಹೊರರಾಜ್ಯಗಳಿಂದ 40% ಮೇವು ತರಿಸಿಕೊಳ್ಳುತ್ತೇವೆ. ಒಂದು ಪಶುವಿಗೆ ಪ್ರತಿದಿನ ಆರು ಕೆ.ಜಿ.ಮೇವು ಬೇಕಿದೆ. ಕಳೆದ 20 ವರ್ಷಗಳಲ್ಲಿ 15 ವರ್ಷ ಬರಗಾಲವಿತ್ತು. ಬರಗಾಲದಲ್ಲಿ ರೈತರು ಜೀವನ ನಡೆಸೋದೇ ಕಷ್ಟ. ಇಂಥ ಸಂದರ್ಭದಲ್ಲಿ ಗೋಹತ್ಯೆ ಕಾನೂನು ತಂದಿದ್ದಾರೆ.

ಗೋ ಶಾಲೆಗಳಲ್ಲಿ ಇರುವ ಹಸುವಿಗೆ ಮೇವಿಲ್ಲ. ಗೋ ಶಾಲೆಗೆ ಕೊಟ್ಟರೆ ಇವರೇ ಶುಲ್ಕ ಕಟ್ಟಬೇಕು. ಕೊಟ್ಟ ಹಸುವಿನ ನಿರ್ವಹಣೆಗೆ ಹಣ ನೀಡಬೇಕು. ರೈತರು ಕಷ್ಟದಲ್ಲಿದ್ದಾರೆ, ಜೀವನ ನಡೆಸೋದು ಕಷ್ಟ. ಮುದಿ ಹಸು ಸಾಕೋಕೆ ‌ದುಡ್ಡು ಕೊಡಿ ಅಂದರೆ ಎಲ್ಲಿಂದ ತರುವುದು? ಗೋ ಮಾತೆ ಅಂತ ಪೂಜೆ ಮಾಡಿದರೆ ಆಗೋಯ್ತೇ?

ನಾವು ಸಂಕ್ರಾಂತಿಯಲ್ಲಿ ಪೂಜೆ ಮಾಡ್ತೇವೆ. ದೀಪಾವಳಿ ಹಬ್ಬದಲ್ಲೂ ಎಡೆ ಹಾಕ್ತೇವೆ. ಸಾಕುವವರು ಅವಕ್ಕೆ ಪೂಜೆ ಮಾಡ್ತಾರೆ. ಯಾರು ಸಾಕೋದಿಲ್ಲ ಅವರು ಈ ಕಾನೂನು ತರ್ತಾರೆ. ಇದು ರೈತರ ಮೇಲೆ ಮತ್ತಷ್ಟು ಸಂಕಷ್ಟ ತಂದಿಡಲಿದೆ. ರೈತರು ಹಸು ಸಾಕೋದಕ್ಕೂ ಮುಂದೆ ಕಷ್ಟವಾಗಲಿದೆ ಎಂದು ಎಚ್ಚರಿಕೆ ಕೊಟ್ಟರು.

ಗೋ ಹತ್ಯೆ ನಿಷೇಧ: ಕಲಾಪ ಬಹಿಷ್ಕರಿಸಲು ಕಾಂಗ್ರೆಸ್ ನಿರ್ಧಾರ!

"ಉದ್ಯಮ ಕುಸಿತ ಖಚಿತ"

ಚರ್ಮೋದ್ಯಮದಲ್ಲಿ 25 ಲಕ್ಷ ಮಂದಿ ತೊಡಗಿದ್ದಾರೆ. 8 ಲಕ್ಷ ಪರಿಶಿಷ್ಟರು ಚರ್ಮ ಸುಲಿಯುವ ಕೆಲಸ ಮಾಡ್ತಾರೆ. ಇವರೆಲ್ಲರ ಜೀವನ ಇದರ ಮೇಲೆ ನಿಂತಿದೆ. ಇವರೆಲ್ಲರೂ ಎಲ್ಲಿಗೆ ಹೋಗಬೇಕು? ಇದು ರೈತರ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು. ಚರ್ಮೋದ್ಯಮದಲ್ಲಿ ನಮ್ಮದು ಜಗತ್ತಿನಲ್ಲಿ ಎರಡನೇ ಸ್ಥಾನ. ಇರುವವರಿಗೆ ಉದ್ಯೋಗ ನೀಡೋಕೆ ಆಗ್ತಿಲ್ಲ. ಇದರಿಂದ ಇನ್ನಷ್ಟು ಉದ್ಯೋಗ ಕಳೆದುಕೊಳ್ಳಲಿರುವುದು ಖಚಿತ ಎಂದು ಹೇಳಿದ್ದಾರೆ.

  ಡಿಕೆಶಿ ಹಾಗು ಕುಮಾರಸ್ವಾಮಿ ಕುತಂತ್ರ ಮಾಡಿ ನನ್ನನ್ನು ಸೋಲಿಸಿದರು | CP Yogeshwar | Oneindia Kannada

  "ತಜ್ಞರ ಸಮಿತಿ ರಚನೆ ಮಾಡಿ"

  ಕಾಯ್ದೆ ತರುವ ಮುನ್ನ ತಜ್ಙರ ಸಮಿತಿ‌ ರಚನೆ ಮಾಡಿ. ಜನರ ಮುಂದೆ ಪರಿಶೀಲನೆಗಿಡಿ. ಕ್ರಾಸ್ ಬೀಡ್ ಗಂಡುಕರುಗಳನ್ನು ನೀವೇ ಕೊಂಡುಕೊಳ್ಳಿ. ಬೀಫ್ ಎಕ್ಸ್ ಫೋರ್ಟ್ ಬ್ಯಾನ್ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. ಕೇರಳ, ಗೋವಾದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಇದೆಯಾ? ಉತ್ತರ ಭಾರತದಲ್ಲಿ ಏಕೆ ಕಾನೂನು ಇಲ್ಲ? ಇವರದ್ದು ಅವೈಜ್ಞಾನಿಕ ಕಾನೂನು. ದುಷ್ಪರಿಣಾಮಗಳಿಗೆ ನಮ್ಮ‌ ವಿರೋಧವಿದೆ ಎಂದು ಸವಾಲು ಹಾಕಿದರು.

  English summary
  Opposition Leader Siddaramaiah and DK Shivakumar held a pressmeet on prevention of slaughter and Preservation of Cattle Bill on friday.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X