ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೈದ್ಯಕೀಯ ಸಾಮಾಗ್ರಿ ಖರೀದಿಯಲ್ಲಿ ಸರ್ಕಾರದಿಂದ 2,200 ಕೋಟಿ ಭ್ರಷ್ಟಾಚಾರ

|
Google Oneindia Kannada News

ಬೆಂಗಳೂರು, ಜುಲೈ 3: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ಒದಗಿಸಿರುವ ಉಪಕರಣಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು ಈ ಬಗ್ಗೆ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ.

Recommended Video

China warns UK ,ಬ್ರಿಟಿಷರಿಗೂ ಹಾಂಗ್ ಕಾಂಗ್ ವಿಚಾರದಲ್ಲಿ ಎಚ್ಚರಿಕೆ ಕೊಟ್ಟ ಚೀನಾ | Oneindia Kannada

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು ಮೂರು ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿದೆ. ಯಾವುದಕ್ಕೆ ಎಷ್ಟು ವೆಚ್ಚವಾಗಿದೆ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಪ್ರಕಟಿಸಬೇಕು. ಜೊತೆಗೆ ಕೊರೊನಾ ನಿರ್ವಹಣೆ, ಖರ್ಚು, ವೆಚ್ಚ ಕುರಿತು ನಿಗಾ ವಹಿಸಲು ಸರ್ವಪಕ್ಷಗಳನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಜೀವಂತವಾಗಿದೆಯೇ? ಸಿದ್ದರಾಮಯ್ಯ ಟೀಕಾ ಪ್ರಹಾರಬಿಜೆಪಿ ಸರ್ಕಾರ ಜೀವಂತವಾಗಿದೆಯೇ? ಸಿದ್ದರಾಮಯ್ಯ ಟೀಕಾ ಪ್ರಹಾರ

ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜೊತೆಗೆ ಉಪಕರಣಗಳ ಖರೀದಿಯಲ್ಲಿ 2200 ಕೋಟಿ ರೂ.ಗಳ ಅವ್ಯವಹಾರವಾಗಿದೆ. ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ಹಣ ನೀಡಿ ಉಪಕರಣಗಳನ್ನು ಖರೀದಿಸಲಾಗಿದೆ. ಇಷ್ಟೂ ಹಣವನ್ನು ಲಪಟಾಯಿಸಲಾಗಿದೆ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವವರು ಯಾರು ಎಂಬುದನ್ನು ತನಿಖೆ ಮೂಲಕ ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ ಪ್ರಕಾರ, ಸರ್ಕಾರ ಭ್ರಷ್ಟಾಚಾರ ಮಾಡಿರುವ ಲೆಕ್ಕಾಚಾರ ಇಲ್ಲಿದೆ. ಮುಂದೆ ಓದಿ...

3320 ಕೋಟಿ ರೂ ಖರ್ಚು ಮಾಡಿದೆ

3320 ಕೋಟಿ ರೂ ಖರ್ಚು ಮಾಡಿದೆ

ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಈ ವರೆಗೆ 3320 ಕೋಟಿ ರೂ. ಖರ್ಚು ಮಾಡಿದೆ. ಆದರೆ, 815 ಕೋಟಿಗೆ ಲೆಕ್ಕವೇ ಇಲ್ಲ. ಉಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಎರಡು ಪಟ್ಟು ಹೆಚ್ಚಿಗೆ ಹಣ ನೀಡಿ ಖರೀದಿ ಮಾಡಲಾಗಿದೆ. ಇದಕ್ಕೆ ಕಾರಣವೇನು? ಇದನ್ನು ಅವ್ಯವಹಾರ ಎನ್ನದೆ ಏನೆಂದು ಕರೆಯಬೇಕು'' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹಣಕಾಸು ಇಲಾಖೆಯಿಂದಲೇ ಆಕ್ಷೇಪ

ಹಣಕಾಸು ಇಲಾಖೆಯಿಂದಲೇ ಆಕ್ಷೇಪ

ಉಪಕರಣಗಳ ಖರೀದಿ ಕುರಿತು ಹಣಕಾಸು ಇಲಾಖೆಯೇ ಆಕ್ಷೇಪ ವ್ಯಕ್ತಪಡಿಸಿದೆ. ಹೆಚ್ಚಿನ ದರ ನೀಡಿ ಏಕೆ ಉಪಕರಣಗಳನ್ನು ಖರೀದಿ ಮಾಡಿದಿರಿ ಎಂದು ಪ್ರಶ್ನೆ ಮಾಡಿದೆ. ಕೊರೊನಾದಿಂದ ಜನ ನರಳುತ್ತಿರುವ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆಸುತ್ತಿರುವ ಇವರು ಮನುಷ್ಯರೇ? ಅಧಿಕಾರ ನಡೆಸುತ್ತಿರುವವರಿಗೆ ಮಾನವೀಯತೆ ಎಂಬುದು ಏನಾದರೂ ಇದೆಯೇ? ಎಂದು ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ವೆಂಟಿಲೇಟರ್‌ಗೆ ಎಷ್ಟು ಹಣ ಆಗಿದೆ?

ವೆಂಟಿಲೇಟರ್‌ಗೆ ಎಷ್ಟು ಹಣ ಆಗಿದೆ?

ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದು ಹೇಳಿರುವ ಸಿದ್ದರಾಮಯ್ಯ ಅದಕ್ಕೆ ವಿವರ ಸಹ ನೀಡಿದ್ದಾರೆ. ಸಿದ್ದರಾಮಯ್ಯ ಲೆಕ್ಕದಲ್ಲಿ ಸರ್ಕಾರ 1000 ವೆಂಟಿಲೇಟರ್ ಖರೀದಿ ಮಾಡಿದೆ. ಅದಕ್ಕೆ ತಗುಲಿರುವ ವೆಚ್ಚ ಒಂದಕ್ಕೆ 4 ಲಕ್ಷದಂತೆ ಮಾರುಕಟ್ಟೆಯಲ್ಲಿ ಒಟ್ಟು 40 ಕೋಟಿ. ಆದರೆ, ಸರ್ಕಾರ ನೀಡಿರುವ ಹಣ 120 ಕೋಟಿ ಎಂದು ಆರೋಪಿಸಿದ್ದಾರೆ.

ಪಿಪಿಇ ಕಿಟ್ ಖರೀದಿಗೆ ಎಷ್ಟು ಹಣ?

ಪಿಪಿಇ ಕಿಟ್ ಖರೀದಿಗೆ ಎಷ್ಟು ಹಣ?

* 4,89,000 ಪಿಪಿಇ ಕಿಟ್‌ಗಳನ್ನು ರಾಜ್ಯ ಸರ್ಕಾರ ಖರೀದಿಸಿದೆ. ಅದರ ಬೆಲೆ, ಒಂದಕ್ಕೆ 995ರಂತೆ ಮಾರುಕಟ್ಟೆಯಲ್ಲಿ ಒಟ್ಟು 48.65 ಕೋಟಿ ರೂಪಾಯಿ. ಆದರೆ, ಸರ್ಕಾರ ನೀಡಿರುವುದು 150 ಕೋಟಿ ಎಂದು ದೂರಿದ್ದಾರೆ.

* 10 ಲಕ್ಷ ಮಾಸ್ಕ್ ಖರೀದಿಸಿದೆ. ಒಂದಕ್ಕೆ 200 ರೂಪಾಯಿಯಂತೆ ಮಾರುಕಟ್ಟೆಯಲ್ಲಿ ಒಟ್ಟು ಬೆಲೆ 20 ಕೋಟಿ. ಆದರೆ, ಸರ್ಕಾರ ನೀಡಿರುವುದು 40 ಕೋಟಿ.

* 10 ಲಕ್ಷ ಸರ್ಜಿಕಲ್ ಗ್ಲೋವ್ಸ್ ಗೆ 20 ಕೋಟಿ. ಆದರೆ, ಸರ್ಕಾರ ನೀಡಿರುವುದು 40 ಕೋಟಿ.

ಕೊರೊನಾ ಪರೀಕ್ಷಗೆ ಎಷ್ಟು ಖರ್ಚಾಗಿದೆ

ಕೊರೊನಾ ಪರೀಕ್ಷಗೆ ಎಷ್ಟು ಖರ್ಚಾಗಿದೆ

* 5000 ಆಮ್ಲಜನಕ ಸಿಲಿಂಡರ್ಸ್ ಬೆಲೆ ಮಾರುಕಟ್ಟೆಯಲ್ಲಿ 43 ಕೋಟಿ. ಆದರೆ, ಸರ್ಕಾರ 80 ಕೋಟಿ ನೀಡಿದೆ.

* 20 ಲಕ್ಷ ಪರೀಕ್ಷೆ ಗ್ಲೋವ್ಸ್ ಗೆ ಮಾರುಕಟ್ಟೆಯಲ್ಲಿ 40 ಕೋಟಿ. ಆದರೆ, ಸರ್ಕಾರ ನೀಡಿರುವುದು 65 ಕೋಟಿ.

* 6.2 ಲಕ್ಷ ಜನರಿಗೆ ಕೊವಿಡ್ ಪರೀಕ್ಷೆ ಮಾಡಲಾಗಿದೆ. ಅದಕ್ಕೆ ತಗುಲಿರುವ ವೆಚ್ಚ 248 ಕೋಟಿ. ಆದರೆ, ಸರ್ಕಾರ ನೀಡಿರುವುದು 530 ಕೋಟಿ.

* ಸೋಂಕಿತರ ದಿನದ ಖರ್ಚು (ಕ್ವಾರಂಟೈನ್‌) 100 ಕೋಟಿ ಆಗಿದೆ. ಆದರೆ, 525 ಕೋಟಿ ಲೆಕ್ಕ ನೀಡಿದೆ.

* ಹ್ಯಾಂಡ್ ಸ್ಯಾನಿಟೈಸರ್ ಗೆ 80 ಕೋಟಿ ನೀಡಿದೆ.

* ಸೋಪ್ ಗೆ 10 ಕೋಟಿ ನೀಡಿದೆ.

* ಇತರೆ ಖರ್ಚು 600 ಕೋಟಿಯಾಗಿದೆ. ಆದರೆ ಸರ್ಕಾರ 1737 ಕೋಟಿಯ ಲೆಕ್ಕ ನೀಡಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

English summary
Congress Seinor Leader Siddaramaiah Alleges Massive Corruption Of Rs 2,200 Cr By Karnataka Govt On Purchasing Covid-19 Items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X