• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಲ್ಲಿ ಮೇ 31ರವರೆಗೆ ಮೆಟ್ರೋ ಸಂಚಾರ ಇಲ್ಲ

|

ಬೆಂಗಳೂರು, ಮೇ 19: ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಸದ್ಯಕ್ಕೆ ಆರಂಭವಾಗುತ್ತಿಲ್ಲ. ಮೇ 31ರವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.

ಕೊರೊನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ 4.0 ಜಾರಿಯಲ್ಲಿದ್ದು, ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕೆಎಸ್ಆರ್‌ಟಿಸಿ ಹಾಗೂ ಬಿಎಂಟಿಸಿ ಸಂಚಾರ ಶುರುವಾಗಿದೆ. ಆದರೆ, ಮೆಟ್ರೋ ಸಂಚಾರಕ್ಕೆ ಇರುವ ನಿರ್ಬಂಧ ಹಾಗೆಯೇ ಮುಂದುವರೆಯಲಿದೆ. 18 ಮೇ 2020 ರಿಂದ 31 ಮೇ 2020 ರವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೇ 31ರ ನಂತರ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಿದರೂ, ಕೆಲವು ನಿಯಮಗಳನ್ನು ಹಾಕಲಾಗುತ್ತದೆ. ಒಂದು ರೈಲಿನಲ್ಲಿ ಕಡಿಮೆ ಪ್ರಯಾಣಿಕರಿರಬೇಕು, ಎಲ್ಲ ಪ್ರಯಾಣಿಕರಿಗೆ ಥರ್ಮಲ್‌ ಸ್ಕ್ಯಾ‌ನಿಂಗ್‌ ಮಾಡುವುದು ಸೇರಿದಂತೆ ಕೊರೊನಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್‌ ಕಡ್ಡಾಯ ಮಾಡುವ ಚಿಂತನೆಯೂ ನಡೆದಿದೆ. ಟೋಕನ್ ಒಬ್ಬರ ಕೈಯಿಂದ ಮತ್ತೊಬ್ಬರಿಗೆ ಹೋಗುತ್ತಿದ್ದು, ಇದರಿಂದ ವೈರಸ್‌ ಹರಡುವ ಸಾಧ್ಯತೆ ಇದೆ. ಕೊರೊನಾದಿಂದ ದೂರ ಇರಲು ಸ್ಮಾರ್ಟ್ ಕಾರ್ಡ್‌ ಬಳಸುವುದು ಉತ್ತಮವಾಗಿದೆ. ಮೆಟ್ರೋ ಸಂಚಾರದ ಶುರು ಮಾಡುವ ಬಗ್ಗೆ ಅಧಿಕೃತ ದಿನಾಂಕ ಇನ್ನು ನಿಗದಿಯಾಗಿಲ್ಲ. ಆದರೆ, ಮೇ 31ರವರೆಗೆ ಮೆಟ್ರೋ ಸಂಚಾರ ಇರುವುದಿಲ್ಲ.

English summary
Namma metro train services shut down of till May 31st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more