ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶ್ರೀನಿವಾಸ ವೈದ್ಯ ವಸುಧೇಂದ್ರರ ಕಥೆ ಆಧಾರಿತ ನಾಟಕ ನೋಡಿ

By Mahesh
|
Google Oneindia Kannada News

ಬೆಂಗಳೂರು, ಜೂ.29: ಶ್ರೀನಿವಾಸ ವೈದ್ಯ ಹಾಗೂ ವಸುಧೇಂದ್ರ ರವರ ಸಣ್ಣಕಥೆಗಳ ಆಧಾರಿತ ರಂಗಪ್ರಯೋಗ ರಂಗಶಂಕರದಲ್ಲಿ ವಟಿ ಕುಟೀರ ತಂಡದಿಂದ ಪ್ರದರ್ಶನಗೊಳ್ಳುತ್ತಿದೆ.

ರೆಕ್ಕೆ ಪುಕ್ಕಗಳಿಲ್ಲದೆ ಮನುಜ ಹಾರಾಡುತ್ತಾನೆ, ಇನ್ನೇನಾದರು ಆತನ ಕೈಯಲ್ಲಿ ಎಲ್ಲವು ಆಗುವಂತಿದ್ದರೆ ಆ ಭಗವಂತನು ಸೋತು ಶರಣಾಗುತ್ತಿದ್ದನೇನೋ. ನಾನು ನನ್ನದು ಎನ್ನುವ ನಾಗಾಲೋಟದಲ್ಲಿ ತನ್ನತನವನ್ನೇ ಮರೆತಿರುವ ಮಾನವ ತಾ ನಡೆದಾಡಿದ ಹಾದಿ, ತೊದಲಿನಿಂದ ಕಲೆತ ಮಾತು, ಕಲಿತ ವಿಧ್ಯಾಬುದ್ದಿ ಎಲ್ಲವು ತಾನಾಗಿ ಕಲಿತವನಂತೆ ಮೆರೆಯುತ್ತಿದ್ದಾನೆ.

ಬೆಳವಣಿಗೆಯ ನೆಪದಲ್ಲಿ ಕಾಲಚಕ್ರದೊಂದಿಗೆ ಶರವೇಗದಲ್ಲಿ ಉರುಳಿಹೋಗುತ್ತಿರುವ ನನ್ನವರು ಎಂಬ ಬಂಧನದಿಂದ ದಿನೆ ದಿನೇ ದೂರ ಹೋಗುತ್ತಿದ್ದಾನೆ, ಮೌನದಲ್ಲಿ ಮಾತನ್ನು ಹುಡುಕುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾನೆ. ಆಸೆಯೆಂಬ ಬಿಸಿಲು ಕುದುರೆಯ ಬೆನ್ನಟ್ಟಿ ಬದಲಾವಣೆ, ಜಾಗತೀಕರಣವೆಂಬ ನೆಪವ ಹೇಳುತ್ತಾ, ತಾನು ಮಾಡುತ್ತಿರುವ ತಪ್ಪನ್ನು ಒಪ್ಪಿಕೊಳ್ಳದ ಸ್ಥಿತಿ ತಲುಪಿದ್ದಾನೆ. [ನಾಟಕ ವಿಮರ್ಶೆ: ಶ್ರದ್ಧಾ, ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು]

Shraddha mattu Stainless Steel Kannada play at Rangashankara

ತಾರಾಗಣ: ಗಣೇಶ್ ಶಣೈ, ಪ್ರಾಚೀ ದೇಶಪಾಂಡೆ, ಕೀರ್ತಿಭಾನು, ಹರೀಶ್ ಸೋಮಯಾಜಿ, ಕಿರಣ್ ವಟಿ.
ಸ್ಥಳ: ರಂಗಶಂಕರ, ಜೆಪಿ ನಗರ ಬೆಂಗಳೂರು
ಶೋ ದಿನಾಂಕ: ಜುಲೈ 1, 2015, 7.30PM
ಟಿಕೆಟ್ ಗಾಗಿ: ಕಿರಟ್ ವಟಿ: 9880695659
ಟಿಕೆಟ್ ಬುಕ್ಕಿಂಗ್ ಆನ್ ಲೈನ್ : bookurevent.com ಗೆ ಭೇಟಿ ಕೊಡಿ

ಮೌಲ್ಯಗಳ ಮರೆತಿರುವ ಈ ಕಾಲದಲ್ಲಿ ಈ ರಂಗ ಪ್ರಯೋಗ ಸ್ವಾಗತಾರ್ಹ, ವಸುಧೇಂದ್ರ ಅವರ ಸ್ಟೇನ್ ಲೆಸ್ ಸ್ಟೀಲ್ ಪಾತ್ರೆ ಹಾಗು ಶ್ರೀನಿವಾಸ್ ವೈದ್ಯರ ಶ್ರದ್ಧಾ.

ತಾಯಿ ತಂದೆ ಇಬ್ಬರು ಕಣ್ಣಿಗೆ ಕಾಣುವ ದೇವರು ಎನ್ನುವ ಹಿರಿಯರ ನಾಣ್ನುಡಿಯನ್ನು ಆಧುನಿಕತೆಗೆ ಸಿಲುಕಿ ಬದಲಾಗಿದೆ, ತಂದೆ, ತಾಯಿಯನ್ನು ಮೂಲೆಗುಂಪಾಗಿಸಿ ರಜ ಸಿಕ್ಕಾಗಲೆಲ್ಲ ದೇವರನ್ನು ಹುಡುಕುತ್ತ ಊರು ಕೇರಿಯಾದಿಗೆ ಹುಡುಕುತ್ತಾ ಸಾಗಿದ್ದಾನೆ. ಈ ರಂಗ ಪ್ರಯೋಗದ ಸಾರ್ಥಕತೆ ತಂದೆ ತಾಯಿಯನ್ನು ಪ್ರೀತಿಸುವವರು ಪ್ರತಿಯೊಬ್ಬರೂ ನೋಡಿದಾಗ ಮಾತ್ರ.

ಮಡದಿಯಾಗಿ ಹೊಸ ಮನೆ ಸೇರುವ ಹೆಣ್ಣು, ಆ ಮನೆಯ ಸೊಸೆಯಾಗಿ ಬೆಳಗುವ ನಂದಾದೀಪವಾಗಿ, ಅಮ್ಮನಾಗಿ, ಅಜ್ಜಿಯಾಗಿ ಆಯಾ ಪಾತ್ರಗಳಿಗೆ ಒಗ್ಗಿಕೊಳ್ಳುವಂತೆ ಅವಳ ಸುತ್ತ ಹುಟ್ಟಿ ನಿಲ್ಲುವ ಸಮಸ್ಯೆಗಳನ್ನು ಎದೆ ಗುಂದದೆ ಹೇಗೆ ನಿಭಾಯಿಸುತ್ತಾಳೆ, ಹಾಗೆಯೇ ರೈಲಿನಲ್ಲಿ ತಿರುಪತಿಗೆ ಹೋಗುವಾಗ ಕಳೆದು ಹೋದ ಲೋಟವನ್ನು ಮರೆಯುವುದೇ ಇಲ್ಲ. ಫಳ ಫಳ ಹೊಳೆಯುವ ಪಾತ್ರೆಗಳಲ್ಲಿ ತನ್ನ ಬದುಕಿನ ಸಾರ್ಥಕತೆ ಕಂಡುಕೊಳ್ಳುವ ಅಮ್ಮ ತಾನಿರಲಿ ಬಿಡಲಿ ನಮ್ಮ ಮನದಲ್ಲಿ ನಮ್ಮೊಂದಿಗೆ ಸದಾ ಇರುತ್ತಾಳೆ.

ಅಪ್ಪ ಬರಲಿ ಇರು ನೀ ಮಾಡಿದ್ದು ಹೇಳ್ತೀನಿ ಅಂದಾಗ ಎಲ್ಲಾ ಮಕ್ಕಳು ಹೆದರುವುದು ಸಹಜ, ಗಡಸು ಸ್ವಭಾವ, ಕೋಪಿಷ್ಠ, ಬಹಳ ಶಿಸ್ತು ಎನ್ನುವ ಪದಗಳೇ ಅಪ್ಪನನ್ನು ಪ್ರತಿಬಿಂಬಿಸುವುದು ಸಹಜ ಆದರೆ ಅದರ ಹಿಂದೊಂದು ಪ್ರೀತಿಸುವ ಮನಸಿದೆ, ಆಶಿಸುವ ಹೃದಯವಿದೆ, ಪ್ರೋತ್ಸಾಹಿಸುವ ಶ್ರೀಮಂತಿಕೆ ಇದೆ ಎನ್ನುವುದು ಅರಿಯದೆ ಹೋಗಿದ್ದೇವೆ. ಚಳಿಯಿರಲಿ, ಮಳೆಯಿರಲಿ, ಸುಡುವ ಬಿಸಿಲೆ ಇರಲಿ ನಮ್ಮನ್ನು ರಕ್ಷಿಸುವ ಅಪ್ಪನ ಆ ಔದಾರ್ಯತೆ ನಮ್ಮನ್ನು ಸೋಕಿದಾಗ ಅವರ ತ್ಯಾಗದ ಮುಂದೆ ನಾವು ಕುಬ್ಜರಾಗಿಬಿಡುತ್ತೇವೆ.

English summary
Shraddha mattu Stainless Steel Kannada play at Rangashankara."Shradhdha," based on a short story by Srinivasa Vaidya, explores the relationship between the son and his disciplinarian and autocratic father. "Stainless Steel paathregaLu," based on Vasudhendra's story with the same name, explores the mother's obsession with stainless steel utensils, as seen through the eyes of her son.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X