ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಂತು ಬೆಂಗಳೂರಿಗೂ ಬಂತು 'ಕಿಸ್ ಆಫ್ ಲವ್'!

By Prasad
|
Google Oneindia Kannada News

ಬೆಂಗಳೂರು, ನ. 17 : ಸಾರ್ವಜನಿಕವಾಗಿ ಮೂತ್ರ ಮಾಡಲು ಅವಕಾಶವಿದೆ, ಸಾರ್ವಜನಿಕವಾಗಿ ಮೂಲೆಮೂಲೆಯಲ್ಲಿ ಉಗುಳಲು ಅವಕಾಶವಿದೆ, ಸಾರ್ವಜನಿಕವಾಗಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ, ಆದರೆ, ಸಾರ್ವಜನಿಕವಾಗಿ ಪರಸ್ಪರ ಒಪ್ಪಿಗೆಯಿಂದ ಒಬ್ಬರನ್ನೊಬ್ಬರು ಏಕೆ ಚುಂಬಿಸಬಾರದು?

ಇದು ಪ್ರೇಮಿಗಳ ವಿರುದ್ಧ ನೈತಿಕ ಪೊಲೀಸ್ ಗಿರಿಯನ್ನು ನಡೆಸುತ್ತಿರುವುದನ್ನು ವಿರೋಧಿಸುವ ಗುಂಪು ಕೇಳುತ್ತಿರುವ ಪ್ರಶ್ನೆ. 2008ರಲ್ಲಿ 'ಪಿಂಕ್ ಚಡ್ಡಿ' ಚಳವಳಿಯಲ್ಲಿ ಸಕ್ರಿಯಪಾತ್ರ ವಹಿಸಿದ್ದ ರಚಿತಾ ತನೇಜಾ ಎಂಬ 23 ವರ್ಷದ ಮಾನವ ಹಕ್ಕು ಹೋರಾಟಗಾರ್ತಿ ಬೆಂಗಳೂರಿನಲ್ಲಿ 'ಕಿಸ್ ಆಫ್ ಲವ್' ಚಳವಳಿಯ ನೇತೃತ್ವ ವಹಿಸುತ್ತಿದ್ದಾರೆ.

ಕೊಚ್ಚಿಯಲ್ಲಿ ಆರಂಭವಾಗಿ ದೇಶದಾದ್ಯಂತ ಹಬ್ಬಿಕೊಳ್ಳುತ್ತಿರುವ 'ಕಿಸ್ ಆಫ್ ಲವ್' ಜ್ವರ ಈಗ ಬೆಂಗಳೂರಿಗೂ ಅಮರಿಕೊಳ್ಳಲಿದೆ. ನವೆಂಬರ್ 22ರ ಶನಿವಾರ ಅಥವಾ ಅದರ ಮುಂದಿನ ಶನಿವಾರ ಸಂಜೆ 4 ಗಂಟೆಗೆ ತುಟಿಗೆ ತುಟಿಗಳು ಬೆರೆಯಲಿವೆ, ಗಲ್ಲದ ಮೇಲೆ ಗುಲಾಬಿ ಅಧರಗಳು ಚಿತ್ತಾರ ಬಿಡಿಸಲಿವೆ. ಇದಕ್ಕಾಗಿ ಫೇಸ್ ಬುಕ್ ಪುಟ ಕೂಡ ಹುಟ್ಟಿಕೊಂಡಿದೆ. [ಕೊಚ್ಚಿಯಲ್ಲಿ ಕಿಸ್ ಡೇ]

Should Kiss of Love be allowed in Bengaluru

ಸುಮಾರು 150ಕ್ಕೂ ಹೆಚ್ಚು ಜೋಡಿಗಳು 'ಕಿಸ್ ಆಫ್ ಲವ್'ನಲ್ಲಿ ಭಾಗವಹಿಸಲಿವೆ. ಮೊದಲು ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸ್ಥಳದ ಅಭಾವದ ಕಾರಣ, ಪ್ರತಿಭಟನೆ ನಡೆಸಲು ಪ್ರಶಸ್ತ ಸ್ಥಳವಾಗಿರುವ ಪುರಸಭೆಯ ಮುಂದೆ ಗಂಡು-ಹೆಣ್ಣು, ಗಂಡು-ಗಂಡು, ಹೆಣ್ಣು-ಹೆಣ್ಣು ಜೋಡಿಗಳು ತಬ್ಬಿಕೊಳ್ಳಲಿವೆ, ಮುತ್ತಿನ ಸುರಿಮಳೆ ಸುರಿಸಲಿವೆ.

ಇಂಥದೊಂದು ಮುಕ್ತ ಪ್ರೇಮ ಅಭಿವ್ಯಕ್ತಪಡಿಸುವ ಯೋಜನೆಯ ಕುರಿತು ಆಯೋಜಕರು ರಕ್ಷಣೆಗಾಗಿ ನಮಗೆ ಇನ್ನೂ ಸಂಪರ್ಕಿಸಿಲ್ಲ. ಸಂಪರ್ಕಿಸಿದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ. [ಕಿಸ್ ಪಡೆದಾಗ ಯಾವತ್ತೂ ತಲೆತಿರುಗಿರ್ಲಿಲ್ಲ]

ಶ್ರೀರಾಮಸೇನೆ ವಿರೋಧ : ಇಂಥ ಅಸಹ್ಯಕರ ಸಂಸ್ಕೃತಿ ಬೆಳೆಯಲು ಖಂಡಿತ ಅವಕಾಶ ನೀಡುವುದಿಲ್ಲ. 'ಕಿಸ್ ಆಫ್ ಲವ್' ಎಂಬ ಸಮಾಜ ವಿರೋಧಿ ಅಭಿಯಾನವನ್ನು ಖಂಡಿಸುವುದಾಗಿ ಮತ್ತು ಪ್ರತಿರೋಧಿಸುವುದಾಗಿ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಅವಕಾಶ ನೀಡಬೇಕಾ? : ನಾಲ್ಕು ಗೋಡೆಗಳ ನಡುವೆ ಖಾಸಗಿಯಾಗಿ ಪ್ರೇಮಿಗಳ ನಡುವೆ ನಡೆಯಬೇಕಾದ ವ್ಯವಹಾರಕ್ಕೆ ಅವಕಾಶ ನೀಡಬೇಕೆ ಬೇಡವೆ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಕಿಸ್ ಆಫ್ ಲವ್ ಪ್ರತಿರೋಧಿಸುವ ಪ್ರತಿಭಟನಾಕಾರರನ್ನು ಬಂಧಿಸಬೇಕಾ ಅಥವಾ ಮುಕ್ತವಾಗಿ ಚುಂಬಿಸುವ ಪ್ರೇಮಿಗಳನ್ನು ಬಂಧಿಸಬೇಕಾ? ನೀವು ಹೇಳಿ.

English summary
Should Kiss of Love be allowed in Bengaluru? People who are opposing moral policing have decided to conduct Kiss of Love movement in Bengaluru on November 22nd or next week. Are you game for it? Sri Ram Sena, which had protested against Pink Chaddi, has decided to oppose it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X