• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈನಂತೆ ಬೆಂಗಳೂರು ಮಲ್ಟಿಪ್ಲೆಕ್ಸ್ ಸಂಸ್ಕೃತಿಗೆ ಒಗ್ಗಬೇಕೇ?

|

"ಬೆಂಗಳೂರು ನಗರದ ರಾತ್ರಿ ಜೀವನ ಶೈಲಿಯನ್ನು ಮುಂಬೈ ಹಾಗೂ ಚೆನ್ನೈ ನಗರದಲ್ಲಿರುವಷ್ಟು ಪೊಲೀಸ್ ಪಡೆ ನಮ್ಮಲ್ಲಿಲ್ಲ. ಹೊಸ ವರ್ಷಾಚರಣೆ ಅವಧಿಯಲ್ಲಿ ನಡೆಯುವ ಕ್ರೈಂಗಳನ್ನು ಆದಷ್ಟು ಕಡಿಮೆ ಮಾಡಲಾಗಿದೆ. ಕ್ರೈಂ ರೇಟ್ ತಗ್ಗಿದ ಮಾತ್ರಕ್ಕೆ 1 ಗಂಟೆ ತನಕ ಬಾರ್ ಓಪನ್ ಮಾಡಲು ಅನುಮತಿ ನೀಡಲು ಪೊಲೀಸ್ ಇಲಾಖೆ ಸಿದ್ಧವಿಲ್ಲ" ಎಂದು ನಾಲ್ಕೈದು ವರ್ಷಗಳ ಹಿಂದೆ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ಹೇಳಿದ್ದರು. ಇಂದಿಗೂ ಪರಿಸ್ಥಿತಿ ಬದಲಾಗಿಲ್ಲ, ರಾತ್ರಿಯಿಡಿ ಬೆಂಗಳೂರನ್ನು ಎಚ್ಚರವಾಗಿಟ್ಟರೂ, ಎಲ್ಲರನ್ನು ಕಾಯಲು ಬೇಕಾದ ಪೊಲೀಸ್ ಪಡೆ ಇಲ್ಲಿಲ್ಲ. ಈ ನಡುವೆ ಮುಂಬೈನಂತೆ ಬೆಂಗಳೂರು ಕೂಡಾ 24X7 ಗಂಟೆ ಎಚ್ಚರವಾಗಿರಬೇಕೆ? ಬೇಡವೇ? ಎಂಬುದರ ಬಗ್ಗೆ ಚರ್ಚೆ ನಡೆದಿದೆ.

ಜನವರಿ 27ರಿಂದ ಮುಂಬೈ ನಗರಿ ನಿದ್ದೆಗೆ ಕತ್ತರಿ ಬೀಳಲಿದ್ದು, ಬೃಹನ್ ಮುಂಬೈನ ಶಾಪಿಂಗ್ ಮಾಲ್, ಮಲ್ಟಿಪ್ಲೆಕ್ಸ್ ರೌಂಡ್ ದ ಕ್ಲಾಕ್ ಕಾರ್ಯ ನಿರ್ವಹಿಸಲಿವೆ. ಆದರೆ, ಕಾಸ್ಮೋಪಾಲಿಟನ್ ಸಂಸ್ಕೃತಿಗೆ ಒಗ್ಗಿಕೊಂಡಿರುವ ಬೆಂಗಳೂರು ಇಂಥ ಮಲ್ಟಿಪ್ಲೆಕ್ಸ್ ಗೆ ಒಗ್ಗಿಕೊಳ್ಳುವುದು ತಕ್ಷಣಕ್ಕೆ ಕಷ್ಟ, ನಗರದಲ್ಲಿ ಇನ್ನೂ ಕ್ರೈಂ ರೇಟ್ ತಗ್ಗಿಲ್ಲ, ರೌಂಡ್ ದಿ ಕ್ಲಾಕ್ ಮಳಿಗೆಗಳು ತೆರೆಯುವಂತೆ ಬೇಡಿಕೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಮದ್ಯ'ರಾತ್ರಿ ಅವಧಿ ವಿಸ್ತರಣೆ ಪೊಲೀಸರಿಗೆ ಸವಾಲು

ಬೆಂಗಳೂರಿನ ರಾತ್ರಿ ಅವಧಿ ವಿಸ್ತರಣೆಗೆ ಪರ ವಿರೋಧ ಪ್ರತಿಕ್ರಿಯೆಗಳು ಬಂದಿತ್ತು. ಈಗಲೂ ಪರಿಸ್ಥಿತಿ ಇದೇ ರೀತಿ ಇದೆ. ಪೊಲೀಸ್, ಪ್ರವಾಸೋದ್ಯಮ, ಅಬಕಾರಿ ಇಲಾಖೆ ಜತೆ ಸಭೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರಬೇಕಾಗುತ್ತದೆ. ಸಾರ್ವಜನಿಕರು, ಮಾಧ್ಯಮದವರ ಸಲಹೆ ಸೂಚನೆಗಳನ್ನು ಗೃಹ ಸಚಿವಾಲಯ ಪಡೆಯಬೇಕಾಗುತ್ತದೆ.

ಬೆಂಗಳೂರಿನಲ್ಲಿ ಕುಡುಕರಿಂದ ಬೇಡಿಕೆ

ಬೆಂಗಳೂರಿನಲ್ಲಿ ಕುಡುಕರಿಂದ ಬೇಡಿಕೆ

ದೇಶದ ಪಬ್ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಂಗಳೂರಿನ ರಾತ್ರಿ ಅವಧಿ ಈಗಾಗಲೇ ಹೆಚ್ಚಾಗಿದೆ. ಕಾಸ್ಮೋಪಾಲಿಟನ್ ಸಂಸ್ಕೃತಿ ಹೊಂದುವ ಮೂಲಕ ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ಯಾನ ನಗರಿಯನ್ನು ರಾತ್ರಿ ಎಲ್ಲಾ ಎಚ್ಚರವಿಡುವ ಪ್ರಸ್ತಾವನೆಗೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಸಕಾರಾತ್ಮಕ ಸ್ಪಂದನೆ ಬಂದಿತ್ತು. ಆದರೆ, ನಂತರ ಬೆಂಗಳೂರಿಗೂ ಸ್ವಲ್ಪ ರೆಸ್ಟ್ ಬೇಕು ಎಂದು ಮಾಲ್, ಪಬ್ ಅವಧಿಯನ್ನು ಬದಲಾಯಿಸದಿರಲು ಸರ್ಕಾರ ನಿರ್ಧರಿಸಿತು.

ಬಹಳ ಹಿಂದಿನಿಂದಲೂ ಬೇಡಿಕೆ ಇದೆ

ಬಹಳ ಹಿಂದಿನಿಂದಲೂ ಬೇಡಿಕೆ ಇದೆ

ಬೆಂಗಳೂರು ನಗರ ವ್ಯಾಪ್ತಿಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ ಗಳು ರಾತ್ರಿ 1 ಗಂಟೆವರೆಗೂ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂಬ ಬೇಡಿಕೆ ಬಹಳ ಹಿಂದಿನಿಂದಲೂ ಬೇಡಿಕೆ ಇದೆ.

ಬೆಂಗಳೂರಿನಲ್ಲಿ ಪಬ್, ಬಾರ್ ಅಂಡ್ ರೆಸ್ಟೋರೆಂಟ್ ಗಳು ರಾತ್ರಿ 11 ಗಂಟೆಗೆ ಬಾಗಿಲು ಮುಚ್ಚಬೇಕಾಗುತ್ತದೆ. ರಾತ್ರಿ 1 ಗಂಟೆ ತನಕ ಬಾರ್ ಅವಧಿ ವಿಸ್ತರಣೆ ಮಾಡಲು ನಗರ ಪೊಲೀಸರು ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿದೆ.

ಪೊಲೀಸರ ವಿರೋಧವೇಕೆ?

ಪೊಲೀಸರ ವಿರೋಧವೇಕೆ?

ಹೊಸ ವರ್ಷಾಚರಣೆ ಅವಧಿಯಲ್ಲಿ ನಡೆಯುವ ಕ್ರೈಂಗಳನ್ನು ಆದಷ್ಟು ಕಡಿಮೆ ಮಾಡಲಾಗಿದೆ. ಆದರೆ, ಬೆಂಗಳೂರು ನಗರದ ರಾತ್ರಿ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಮುಂಬೈ ಹಾಗೂ ಚೆನ್ನೈ ನಗರದಲ್ಲಿರುವಷ್ಟು ಪೊಲೀಸ್ ಪಡೆ ನಮ್ಮಲ್ಲಿಲ್ಲ. 2014ರಲ್ಲಿ ಮೂರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದ 'ನೈಟ್‌ ಲೈಫ್' ಅನ್ನು ನಂತರ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು. 2015ರ ಜೂನ್ 6ರಂದು ಇದರ ಅವಧಿ ಮುಕ್ತಾಯಗೊಂಡಿತ್ತು. ಈಗ ಪುನಃ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲಾಯಿತು.

2014ರಲ್ಲಿ ಸರ್ಕಾರ ಒಪ್ಪಿಗೆ ನೀಡಿತ್ತು

2014ರಲ್ಲಿ ಸರ್ಕಾರ ಒಪ್ಪಿಗೆ ನೀಡಿತ್ತು

ಉದ್ಯಾನ ನಗರಿಯಲ್ಲಿ ಮಧ್ಯರಾತ್ರಿ 1 ಗಂಟೆಯ ವರೆಗೆ ಪಬ್, ಬಾರ್, ರೆಸ್ಟೋರೆಂಟ್ ಕಾರ್ಯನಿರ್ವಹಿಸಲು 2014ರಲ್ಲಿ ಸರ್ಕಾರ ಒಪ್ಪಿಗೆ ನೀಡಿತ್ತು. ಆದರೆ, ಶನಿವಾರ ಮತ್ತು ಭಾನುವಾರ ಮಾತ್ರ ಈ ಸೇವೆ ಲಭ್ಯವಿರುತ್ತದೆ ಎಂದು ಸ್ಪಷ್ಟಪಡಿಸಿತ್ತು.

ತಡರಾತ್ರಿ 1 ಗಂಟೆಯ ತನಕ ನೈಟ್ ಲೈಫ್ ಅವಧಿ ವಿಸ್ತರಣೆ ಆಗುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಗೆ ಸವಾಲಾಗಿದೆ. ಸಿಬ್ಬಂದಿ ಕೊರತೆ ಹಿನ್ನಲೆಯಲ್ಲಿ 2 ಸಾವಿರ ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಿಕೊಳ್ಳಲು ಚಿಂತನೆ ನಡೆಸಲಾಗುತ್ತಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸಿದೆ

ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸಿದೆ

ತಡರಾತ್ರಿ 1ಗಂಟೆಯ ವರೆಗೆ ಬಾರ್, ಪಬ್ ಅವಧಿ ವಿಸ್ತರಿಸುವ ಸರ್ಕಾರದ ನಿರ್ಧಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿಬಣ) ವಿರೋಧ ವ್ಯಕ್ತಪಡಿಸಿತ್ತು. ಅಂದು ವಿರೋಧ ಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಇಂದು ಬಿಜೆಪಿ ಸರ್ಕಾರವೇ ಅಧಿಕಾರವೇ ಅಧಿಕಾರದಲ್ಲಿದೆ. ನೈಟ್ ಲೈಫ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಕರವೇ, ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು ಮಹಾನಗರಗಳಲ್ಲಿ ಹೆಚ್ಚಾಗುತ್ತಿದೆ. ನಮ್ಮ ಸಂಸ್ಕೃತಿಗೆ ವಿರೋಧವಾದ ಇಂತಹ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಆರಂಭಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

English summary
In Bengaluru Bars and restaurants will remain open till 1 am every Friday and Saturday, and hotels and eateries till 1 am on all working days. Should Bengaluru eateries, malls, multiplexes remain open 24x7.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X