ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಮಗಳ ಮೇಲೆ ಆಸಿಡ್ ದಾಳಿ ಮಾಡಿದವನನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು!

|
Google Oneindia Kannada News

ಬೆಂಗಳೂರು, ಮೇ. 14: "ಅಲ್ಲೆಲ್ಲೋ ತೆಲಂಗಾಣದಲ್ಲಿ ಡಾಕ್ಟರ್ ಹೆಣ್ಣು ಮಗಳ ಮೇಲೆ ರೇಪ್ ಮಾಡಿದಕ್ಕೆ ಅವರನ್ನು ಅಲ್ಲೇ ಶೂಟ್ ಮಾಡಿ ಮಲಗಿಸಿದ್ರು. ನನ್ನ ಮಗಳ ವಿಚಾರದಲ್ಲಿ ಅಂತಹ ನ್ಯಾಯ ನಿರೀಕ್ಷಿಸಿದ್ದೆ, ಸುಮ್ಮನೆ ಕಾಲಿಗೆ ಗುಂಡು ಹೊಡೆದ್ರೆ ಪ್ರಯೋಜನವಿಲ್ಲ. ಅವನನ್ನು ನಮಗೆ ಒಪ್ಪಿಸಲಿ ಜನರೇ ನ್ಯಾಯ ತೀರ್ಮಾನ ಮಾಡುತ್ತಾರೆ"..

ಆಸಿಡ್ ದಾಳಿಗೆ ಒಳಗಾಗಿರುವ ಸಂತ್ರಸ್ತ ಯುವತಿಯ ತಂದೆಯ ಮುಗ್ಧತೆಯ ಆಕ್ರೋಶದ ಮಾತುಗಳಿವು. ಎಷ್ಟ ಚಂದವಿದ್ದ ನನ್ನ ಮಗಳು ಜೀವನ ಪರ್ಯಂತ ನರಳಬೇಕು. ಅದೇ ರೀತಿ ಅವನು ಕೊರಗಬೇಕಿತ್ತು. ಅವನು ಎಲ್ಲೋ ಇದ್ದ ಅರೆಸ್ಟ್ ಮಾಡಿದ್ದಾರೆ ಸಂತೋಷ. ಆದ್ರೆ ಅವನು ತಪ್ಪಿಸಿಕೊಂಡು ಹೋಗುವಾಗ ಒಂದು ಕಾಲಿಗೆ ಗುಂಡು ಹೊಡೆದಿದ್ದಾರೆ. ಮೂರು ದಿನ ವಾಸಿ ಮಾಡಿಕೊಂಡು ಓಡಾಡ್ತಾನೆ. ಅವನು ಜೀವನ ಪರ್ಯಂತ ಹಾಸಿಗೆ ಹಿಡಿಯಬೇಕಿತ್ತು. ಅ ತರ ಪೊಲೀಸರು ಬುದ್ಧಿ ಕಲಿಸಿಬಿಡಬೇಕಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಆಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್ ಕಾಲಿಗೆ ಗುಂಡೇಟುಆಸಿಡ್ ದಾಳಿ ಪ್ರಕರಣ: ಆರೋಪಿ ನಾಗೇಶ್ ಕಾಲಿಗೆ ಗುಂಡೇಟು

ಆವನನ್ನು ಇನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಜೈಲಿಗೆ ಕಳಿಸುತ್ತಾರೆ. ಮೂರು ದಿನ ಆದ ಮೇಲೆ ಹೇಗೋ ಬರ್ತಾನೆ. ಆದ್ರೆ, ನನ್ನ ಮಗಳು ನೋವು. ಡ್ಯಾಡಿ ಅವನಿಗೆ ಏನು ಪನಿಷ್ಮೆಂಟ್ ಕೊಟ್ಟಿದ್ದಾರೆ ಎಂದು ದಿನಾ ಕೇಳ್ತಾಳೆ. ಇಲ್ಲಮ್ಮ ಅವನನ್ನು ಅರೆಸ್ಟ್ ಮಾಡಿದ್ದಾರೆ ಪೋಲೀಸರು ನೋಡ್ಕೋತಾರೆ ಅಂತ ಸಮಾಧಾನ ಪಡಿಸುತ್ತಿದ್ದೇವೆ ಎಂದು ನೋವು ತೋಡಿಕೊಂಡರು.

shot and killed to acid attacker: victim girl father

ಆಸಿಡ್ ದಾಳಿ ಮಾಡಿ ನನ್ನ ಮಗಳ ಜೀವನವನ್ನೇ ನಾಶ ಮಾಡಿದ. ನನ್ನ ಕಂದ ಜೀವನ ಪರ್ಯಂತ ಕೊರಗಬೇಕು. ಡ್ಯಾಡಿ ನನ್ನ ಮುಖ ನೋಡಬಹುದಾ ಎಂದು ಕೇಳುತ್ತಾಳೆ. ಏನು ಅಂತ ಹೇಳೋದು. ಅವಾಗ ಆಂಧ್ರ ದಲ್ಲಿ ಆಯ್ತಲ್ಲಾ, ಯಾರೋ ಹೆಣ್ಣು ಮಗಳನ್ನು ರೇಪ್ ಮಾಡಿದ್ರು ಅಂತ ಗುಂಡಿಟ್ಟು ಪೊಲೀಸರೇ ಶಿಕ್ಷೆ ಕೊಟ್ರು. ನನ್ನ ಮಗಳ ವಿಚಾರದಲ್ಲಿ ಅ ಆತರ ನ್ಯಾಯ ಸಿಗಬೇಕಿತ್ತು. ಈ ದೇಶದಲ್ಲಿ ಹೆಣ್ಣು ಮಕ್ಕಳು ಧೈರ್ಯವಾಗಿ ಓಡಾಡುವರು ಎಂದು ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತ ಯುವತಿಯ ತಂದೆ ತನ್ನ ಆಕ್ರೋಶವನ್ನು ಮಾಧ್ಯಮಗಳ ಜತೆ ತೋಡಿಕೊಂಡಿದ್ದಾರೆ.

shot and killed to acid attacker: victim girl father

ಪೊಲೀಸರು ಕಷ್ಟ ಪಟ್ಟು ಬಂಧಿಸಿದ್ದಾರೆ. ಆದರೆ, ಕಠಿಣ ಶಿಕ್ಷೆ ಕೊಟ್ಟು ಅವರೇ ನಮಗೆ ನ್ಯಾಯ ಕೊಡಿಸಬೇಕಿತ್ತು. ನನ್ನ ಮಗಳಂತೆ ಅವನು ಕೊರಗಿ ಸಾಯೋದನ್ನು ನಾವು ಕಣ್ಣಾರೆ ನೋಡಬೇಕಿತ್ತು. ಈಗಲೂ ಅವನನ್ನು ನಮ್ಮ ಕೈಗೆ ಕೊಟ್ಟರೆ ಸಾಕು, ಸಾರ್ವಜನಿಕರಿಗೆ ಪಾಠ ಕಲಿಸುತ್ತಾರೆ ಎಂದು ಹೇಳಿದರು.

English summary
Acid attack case: Victim girl Father statement about injustice in her daughter acid attack case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X