ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಈಶ್ವರಪ್ಪ ನಿವಾಸದಲ್ಲಿ ಅಗ್ನಿ ಅನಾಹುತ: ಸುಟ್ಟು ಕರಕಲಾದ ಕೋಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 17: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ನಿವಾಸದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ.

ಕುಮಾರ ಪಾರ್ಕ್‌ನ 2ರಲ್ಲಿರುವ ಈಶ್ವರಪ್ಪ ವಸತಿ ಗೃಹದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಸೋಮವಾರ ರಾತ್ರಿ 10 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಇಡೀ ಬಂಗಲೆಯ ವೈರಿಂಗ್‌ಗಳು ಮತ್ತು ವುಡ್ ವರ್ಕ್‌ ಭಾಗಶಃ ಸುಟ್ಟು ಕರಕಲಾಗಿವೆ.

ರಾತ್ರಿ 10 ಗಂಟೆ ಸುಮಾರಿಗೆ ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪರವರ ಸರ್ಕಾರಿ ವಸತಿ ಗೃಹ ಕುಮಾರ ಪಾರ್ಕನ 2ರಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ಇಡೀ ಬಂಗಲೆಯ ವಿದ್ಯುತ್ ಲೈನ್‌ಗೆ ಬೆಂಕಿ ತಗುಲಿತ್ತು.

ಒಂದು ಕೊಠಡಿ ಸಂಪೂರ್ಣ ಸುಟ್ಟು ಹೋಗಿದ್ದು, ಯಾರಿಗೂ ಏನೂ ಹಾನಿಯಾಗಿಲ್ಲ. ಭಾರಿ ಅಪಾಯದಿಂದ ಸಚಿವ ಈಶ್ವರಪ್ಪ ಹಾಗೂ ಪತ್ನಿ ಪಾರಾಗಿದ್ದಾರೆ.

ಸ್ವಲ್ಪ ಯಾಮಾರಿದ್ರೂ ಅಪಾಯ ಗ್ಯಾರಂಟಿ

ಸ್ವಲ್ಪ ಯಾಮಾರಿದ್ರೂ ಅಪಾಯ ಗ್ಯಾರಂಟಿ

ಸಚಿವ ಈಶ್ವರಪ್ಪ ಹಾಗೂ ಅವರ ಪತ್ನಿ ಭಾರಿ ಅಪಾಯದಿಂ ಪಾರಾಗಿದ್ದಾರೆ ಸ್ವಲ್ಪ ಯಾಮಾರಿದ್ದರೂ ಅಪಾಯವಾಗುತ್ತಿತ್ತು. ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಚಿವರು ಮಲಗುವ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ

ಸಚಿವರು ಮಲಗುವ ಕೋಣೆಯಲ್ಲಿ ಕಾಣಿಸಿಕೊಂಡ ಬೆಂಕಿ

ಸಚಿವರು ಮಲಗುವ ಕೋಣೆಯ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಸಿ ಸ್ವಿಚ್ ಹಾಕುತ್ತಿದ್ದಂತೆಯೇ ಒಮ್ಮೆಲೆ ಎಸಿ ಹತ್ತಿ ಉರಿದಿದೆ. ತಕ್ಷಣ ಭದ್ರತಾ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದರು. ಬಳಿಕ ಸಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ಅಳಿಯ ಸಂತೋಷ್‌ಗೆ ವಿಷಯ ತಿಳಿಸಿದ್ರು

ಅಳಿಯ ಸಂತೋಷ್‌ಗೆ ವಿಷಯ ತಿಳಿಸಿದ್ರು

ತಕ್ಷಣವೇ ಅಳಿಯ ಸಂತೋಷ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿಗೆ ಸಂತೋಷ್ ಮಾಹಿತಿ ನೀಡಿದ್ದರು. ರಾತ್ರಿ 10.30 ರ ಸುಮಾರಿಗೆ ಸಂಭವಿಸಿದ ಅಗ್ನಿ ಅವಘಡ‌ ಸಂಭವಿಸಿದೆ. ಕ್ಷಣ ಮಾತ್ರದಲ್ಲಿ ಸಂಪೂರ್ಣ ರೂಮ್ ಸುಟ್ಟು ಭಸ್ಮವಾಗಿದೆ.

ರೂಂನಲ್ಲಿದ್ದ ಎಲ್ಲಾ ವಸ್ತುಗಳೂ ಸುಟ್ಟು ಕರಕಲು

ರೂಂನಲ್ಲಿದ್ದ ಎಲ್ಲಾ ವಸ್ತುಗಳೂ ಸುಟ್ಟು ಕರಕಲು

ರೂಂ ನಲ್ಲಿದ್ದ ಬೆಡ್,ಎಸಿ,ಬಟ್ಟೆಗಳು,ಕಬೋರ್ಡ್,ಸೋಫಾ,ಕರ್ಟನ್ ಎಲ್ಲವೂ ಸುಟ್ಟು ಭಸ್ಮವಾಗಿವೆ ಆದರೆ ಯಾರಿಗೂ ಯಾವುದೇ ರೀತಿಯ ಅಪಾಯವಾಗಿಲ್ಲ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಈಶ್ವರಪ್ಪ ಹಾಗೂ ಪತ್ನಿ ರೂಮಿನಿಂದ ಹೊರಗಡೆ ಓಡಿ ಬಂದಿದ್ದರು.

English summary
Short Circuit at Minister KS Eshwarappa Residence in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X