ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಮತ್ತೊಂದು ಬಡಾವಣೆ ವ್ಯಾಪಾರಿಗಳಿಂದ ಲಾಕ್ ಡೌನ್

|
Google Oneindia Kannada News

ಬೆಂಗಳೂರು, ಜುಲೈ 08 : ಬೆಂಗಳೂರು ನಗರದಲ್ಲಿನ ಮತ್ತೊಂದು ಬಡಾವಣೆಯಲ್ಲಿ ಸ್ವಯಂ ಘೋಷಿತ ಲಾಕ್ ಡೌನ್ ಜಾರಿಗೊಂಡಿದೆ. 15 ದಿನಗಳ ಕಾಲ ಅಂಗಡಿಗಳನ್ನು ಮುಚ್ಚಿ ಲಾಕ್ ಡೌನ್‌ಗೆ ಬೆಂಬಲ ನೀಡುತ್ತೇವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಕೆಂಗೇರಿ ಸಮೀಪದ ಉಲ್ಲಾಳದ ವ್ಯಾಪಾರಿಗಳು ಬುಧವಾರದಿಂದ 15 ದಿನಗಳ ಕಾಲ ಸ್ವಯಂ ಪ್ರೇರಿತ ಲಾಕ್ ಡೌನ್ ಮಾಡುತ್ತಿದ್ದಾರೆ. ಮಂಗಳವಾರವೇ ಅಂಗಡಿಗಳ ಮುಂದೆ ಕರಪತ್ರಗಳನ್ನು ಅಂಟಿಸಿ ಜನರಿಗೆ ಲಾಕ್ ಡೌನ್ ಕುರಿತು ಮಾಹಿತಿ ನೀಡಲಾಗಿತ್ತು.

ಹೆಚ್ಚುತ್ತಿರುವ ಸೋಂಕು; ಬೆಂಗಳೂರಲ್ಲಿ 2 ದಿನದ ಲಾಕ್ ಡೌನ್? ಹೆಚ್ಚುತ್ತಿರುವ ಸೋಂಕು; ಬೆಂಗಳೂರಲ್ಲಿ 2 ದಿನದ ಲಾಕ್ ಡೌನ್?

"ನಮ್ಮ ಗ್ರಾಹಕರೇ ನಮಗೆ ಮುಖ್ಯ. ಅವರ ಆರೋಗ್ಯದ ಬಗ್ಗೆ ನಮಗೂ ಕಾಳಜಿ ಇದೆ. ಬೆಂಗಳೂರು ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದ್ದರಿಂದ, ನಾವು ಚೈನ್ ಬ್ರೇಕ್ ಮಾಡಲು ಸುಮಾರು ಒಂದು ವಾರಗಳ ಕಾಲವಾದರೂ ಲಾಕ್ ಡೌನ್ ಮಾಡುತ್ತೇವೆ" ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ; ಸಂಸದರ ಟ್ವೀಟ್ ಬೆಂಗಳೂರಿಗೆ ಲಾಕ್ ಡೌನ್ ತೀರಾ ಅಗತ್ಯವಿದೆ; ಸಂಸದರ ಟ್ವೀಟ್

Shopping Complex Owners Ullal Announced Self Lockdown

ಬೆಂಗಳೂರು ನಗರದ ಬಸವನಗುಡಿ ಮತ್ತು ಮಲ್ಲೇಶ್ವರದಲ್ಲಿ ವ್ಯಾಪಾರಿಗಳು ಸ್ವಯಂ ಘೋಷಿತ ಲಾಕ್ ಡೌನ್ ಮಾಡಿದ್ದರು. ಈಗ ಉಲ್ಲಾಳದಲ್ಲಿಯೂ ವ್ಯಾಪಾರಿಗಳು ಸ್ವಯಂ ಲಾಕ್ ಡೌನ್ ಮೊರೆ ಹೋಗಿದ್ದಾರೆ.

ತಿರುವನಂತಪುರ; ಒಂದು ವಾರ ಹೊಸ ಮಾದರಿಯ ಲಾಕ್ ಡೌನ್ ತಿರುವನಂತಪುರ; ಒಂದು ವಾರ ಹೊಸ ಮಾದರಿಯ ಲಾಕ್ ಡೌನ್

ಸಲೂನ್ ಬಂದ್ : ಮಹಾಲಕ್ಷ್ಮೀ ಲೇಔಟ್ ಸುತ್ತಮುತ್ತ ಸಲೂನ್‌ಗಳನ್ನು 15 ದಿನಗಳ ಕಾಲ ಬಂದ್ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ಭಾಗದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು ನಗರದಲ್ಲಿ ಮಂಗಳವಾರ 800 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 11,361ಕ್ಕೆ ಏರಿಕೆಯಾಗಿದೆ.

English summary
After rising Covid-19 cases in Bengaluru city shopping complex owners in Ullal near Kengeri announced 15 days of self-lockdown. Traders shut their business units.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X