ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್: ಅಕ್ಕಿ ಪ್ರಮಾಣಕ್ಕೆ ಸರ್ಕಾರ ಕತ್ತರಿ?

|
Google Oneindia Kannada News

Recommended Video

ರಶ್ಮಿಕಾ ಕುಟುಂಬದ ಒಟ್ಟು ಆಸ್ತಿ ವಿವರ ಗೊತ್ತಾ? | RASHMIKA MANDANNA | IT RAID | ONEINDIA KANNADA

ಬೆಂಗಳೂರು, ಜನವರಿ.16: ಅನ್ನಭಾಗ್ಯ ಯೋಜನೆ ಅಡಿ ಬಡವರಿಗೆ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಂತೆ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿದ್ದರು. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತವಾಗಿ ಅಕ್ಕಿ ನೀಡುವ ಯೋಜನೆ ಇದಾಗಿದ್ದು, ಯೋಜನೆ ಅಡಿ ನೀಡುತ್ತಿದ್ದ ಅಕ್ಕಿಯ ಪ್ರಮಾಣವನ್ನು ಇಳಿಸಲು ಈಗಿನ ಸರ್ಕಾರ ಚಿಂತನೆ ನಡೆಸುತ್ತಿದೆ.

ಶ್ರೀಮಂತರು ಬಿಪಿಎಲ್ ಕಾರ್ಡ್ ತ್ಯಜಿಸಲಿ, ಇಲ್ಲಾ ಕಾನೂನು ಕ್ರಮ ಎದುರಿಸಲಿಶ್ರೀಮಂತರು ಬಿಪಿಎಲ್ ಕಾರ್ಡ್ ತ್ಯಜಿಸಲಿ, ಇಲ್ಲಾ ಕಾನೂನು ಕ್ರಮ ಎದುರಿಸಲಿ

ರಾಜ್ಯದಲ್ಲಿ ಸದ್ಯಕ್ಕೆ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ 35 ಕೆಜಿ ಅಕ್ಕಿಯನ್ನು ನೀಡಲಾಗುತ್ತಿದೆ. ಇನ್ನು, ಬಿಪಿಎಲ್ ಕಾರ್ಡ್ ದಾರ ಕುಟುಂಬಕ್ಕೆ ಒಬ್ಬ ವ್ಯಕ್ತಿಗೆ ಏಳು ಕೆಜಿಯಂತೆ ಲೆಕ್ಕ ಮಾಡಿ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದೆ.

 Shocking News For Karnakata BPL Card Users From State Government

ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಸಲು ಚಿಂತನೆ:

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ದಾರರ ಕುಟುಂಬದಲ್ಲಿನ ಒಬ್ಬ ಸದಸ್ಯರಿಗೆ ಏಳು ಕೆಜಿಯಂತೆ ಅಕ್ಕಿಯನ್ನು ಸರ್ಕಾರದಿಂದ ವಿತರಣೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು 5 ಕೆಜಿಗೆ ಇಳಿಸಲು ಬಿಜೆಪಿ ಸರ್ಕಾರವು ಚಿಂತನೆ ನಡೆಸಿದೆ. ಅಕ್ಕಿ ಬದಲು ಬಿಪಿಎಲ್ ಕಾರ್ಡ್ ದಾರರಿಗೆ ಶೇಂಗಾ ಎಣ್ಣೆ, ತೊಗರಿ ಬೇಳೆ ಹಾಗೂ ಉಪ್ಪಿನ ಪ್ಯಾಕೇಟ್ ನ್ನು ನೀಡುವುದಕ್ಕೆ ಸರ್ಕಾರವು ಮುಂದಾಗಿದೆ.

English summary
Shocking News For Karnakata BPL Card Users From State Government. Rice Distribution Percentage Decrease For 5 KG.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X