ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಹೋದಲ್ಲೆಲ್ಲ ಹಿಂದೂ ಕಾರ್ಯಕರ್ತರ ಕೊಲೆ: ಶೋಭಾ ಕರಂದ್ಲಾಜೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 02: ಮುಖ್ಯಮಂತ್ರಿ ಸಿದ್ದರಾಮಯ್ಯ ಹೋದ ಜಾಗದಲ್ಲೆಲ್ಲ ಹಿಂದೂ ಕಾರ್ಯಕರ್ತರ ಕೊಲೆ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಬೆಂಗಳೂರಿನಲ್ಲಿ ಬುಧವಾರ ನಡೆದ ಬಿಜೆಪಿ ಕಾರ್ಯಕರ್ತ ಸಂತೋಷ್ ಕೊಲೆ ಖಂಡಿಸಿ ಶುಕ್ರವಾರ ಮೌರ್ಯ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಮಾತನಾಡಿ, ಅಪರಾಧಿಗಳ ಪರ ಸರ್ಕಾರ ನಿಂತುಕೊಂಡಿದೆ. ಸಚಿವ ಯು.ಟಿ.ಖಾದರ್ ನಿವಾಸ ಬಳಿಯೇ ಸಂತೋಷ್ ಹತ್ಯೆಯಾಗಿದೆ ಸಂತೋಷ್ ನಿವಾಸಕ್ಕೆ ಹೋಗಿ ಸಿಎಂ ಸ್ವಾಂತನ ಹೇಳಬೇಕಿತ್ತು. ಆದರೆ ಖಾದರ್ ಮನೆಯಲ್ಲಿ ಸಿಎಂ ಊಟ ಮಾಡಿ ಮಾಡಿ ಬಂದಿದ್ದಾರೆ ಎಂದರು.

ಹೆತ್ತ ತಾಯಿ ಕಣ್ಣೀರಿನ ಶಾಪ ನಿಮ್ಮನ್ನು ತಟ್ಟದೆ ಬಿಡದು: ಯಡಿಯೂರಪ್ಪಹೆತ್ತ ತಾಯಿ ಕಣ್ಣೀರಿನ ಶಾಪ ನಿಮ್ಮನ್ನು ತಟ್ಟದೆ ಬಿಡದು: ಯಡಿಯೂರಪ್ಪ

ಸಿದ್ದರಾಮಯ್ಯ ಅವರು ಹೋದಲ್ಲೆಲ್ಲಾ ಹಿಂದೂಗಳ ಕೊಲೆ ನಡೆಯುತ್ತಿದೆ. ಸಿದ್ದರಾಮಯ್ಯ ವಿಜಯಪುರಕ್ಕೆ ಹೋದಾಗ ಅಲ್ಲಿ ದಾನಮ್ಮ ಹತ್ಯೆಯಾಯಿತು. ಇದೀಗ ಸಂತೋಷ್ ಇರುವ ಪ್ರದೇಶಕ್ಕೆ ತೆರಳಿದಾಗ ಅವರ ಕೊಲೆಯಾಯಿತು ಎಂದು ಆರೋಪಿಸಿದರು.

Shobha accuses govt created anarchy in the state

ಸರ್ಕಾರವು ತನಿಖೆ ದಾರಿ ತಪ್ಪಿಸುತ್ತಿದೆ. ಪೊಲೀಸರು ಕೈ ಕಟ್ಟಿ ಕೂರುವಂತೆ ಮಾಡುತ್ತಿದ್ದಾರೆ ನಿಮ್ಮ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ ಕರ್ನಾಟಕದ ಎಲ್ಲ ಕೊಲೆ ಪ್ರಕರಣಗಳನ್ನು ಎನ್ ಐ ಎ ಗೆ ನೀಡಬೇಕು ಎಂದು ಒತ್ತಾಯಿಸಿದರು.

ಹಿಂದೂ ಕಾರ್ಯಕರ್ತರನ್ನು ಸರ್ಕಾರ ಕಗ್ಗೊಲೆ ಮಾಡುತ್ತಿದೆ. ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ದೇಶದಲ್ಲೇ ಕರ್ನಾಟಕದ ಅತೀ ಹೆಚ್ಚು ಕ್ರಿಮಿನಲ್ ಚಟುವಟಿಕೆ ನಡೆಯುತ್ತಿದೆ.

ಹಿಂದೂ ಕಾರ್ಯಕರ್ತರ ಸಾವಿನ ಸರಣಿಹಿಂದೂ ಕಾರ್ಯಕರ್ತರ ಸಾವಿನ ಸರಣಿ

ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಕ್ರಿಮಿನಲ್ ಚಟುವಟಿಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಬೇರೆ ಬೇರೆ ರೀತಿಯಲ್ಲಿ ಹಿಂದು ಕಾರ್ಯಕರ್ತರ ಕೊಲೆಗಳು ನಡೆಯುತ್ತಿವೆ. ಮಹಿಳೆಯರು, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ನಾವು ಇದನ್ನ ಖಂಡಿಸಿ ಅಪರಾಧಿಗಳನ್ನ ಬಂಧಿಸಿ ಎಂದು ಆಗ್ರಹ ಮಾಡುತ್ತಿದ್ದೇವೆ ಆದರೆ ಅಪರಾಧಿಗಳ ಪರ ಸರ್ಕಾರ ನಿಂತುಕೊಂಡಿದೆ ಎಂದು ಆರೋಪಿಸಿದರು.

English summary
BJP leader and member of Parliament Shobha Karandlaje defined that the congress government has created anarchy in the state since NJP workers were murdered where chief minister Siddaramaiah visited many places in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X