ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಿಂಗಾಯತ ಪ್ರತ್ಯೇಕ ಧರ್ಮವಾಗಲಿ: ಮುರುಘಾ ಶ್ರೀ (ವಿಶೇಷ ಸಂದರ್ಶನ)

ಲಿಂಗಾಯತ ಪ್ರತ್ಯೇಕ ಸ್ಥಾನಮಾನ ಬೇಡಿಕೆಗೆ ಶಿವಮೂರ್ತಿ ಮುರಘಾ ಶರಣರ ಬೆಂಬಲ. ಜೈನರು, ಬೌದ್ಧರು, ಸಿಖ್ ಗಳಿಗೆ ನೀಡಿದಂತೆ ಲಿಂಗಾಯತ ಧರ್ಮಕ್ಕೂ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

|
Google Oneindia Kannada News

ಬಸವ ಧರ್ಮಾಚರಣೆಗೆ ವಿಶೇಷ ಒತ್ತು ಕೊಟ್ಟು, ತಮ್ಮ ಮಠದಲ್ಲಿ ಹಲವಾರು ಸಂಪ್ರದಾಯಗಳಿಗೆ, ಆಚರಣೆಗಳಿಗೆ ತಿಲಾಂಜಲಿ ನೀಡುವ ಮೂಲಕ ಕ್ರಾಂತಿಕಾರಿ ಸ್ವಾಮೀಜಿ ಎಂದೇ ಖ್ಯಾತಿ ಗಳಿಸಿದ್ದ ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಪೀಠಾಧ್ಯಕ್ಷರಾದ ಮುರುಘಾ ಶರಣರು ಈಗ ರಾಜ್ಯಾದ್ಯಂತ ಪ್ರತಿಧ್ವನಿಸುತ್ತಿರುವ, ಹೊಸತೊಂದು ವಿವಾದಕ್ಕೆ ಕಾರಣವಾಗಿರುವ ಲಿಂಗಾಯತರ ಪ್ರತ್ಯೇಕ ಧರ್ಮದ ಕೂಗಿನ ಬಗ್ಗೆ ಮಾತನಾಡಿದ್ದಾರೆ.

ಲಿಂಗಾಯತ ಧರ್ಮ ವಿವಾದ : ಎಸ್ಎಲ್ ಭೈರಪ್ಪ ಸಂದರ್ಶನಲಿಂಗಾಯತ ಧರ್ಮ ವಿವಾದ : ಎಸ್ಎಲ್ ಭೈರಪ್ಪ ಸಂದರ್ಶನ

ಲಿಂಗಾಯತ ಸಂಸ್ಕೃತಿ, ಆಚರಣೆಗಳಿಗೆ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂಬ ಕೂಗು ಕೇಳುತ್ತಿರುವ ಈ ಹೊತ್ತಿನಲ್ಲಿ ಒನ್ ಇಂಡಿಯಾಕ್ಕೆ ವಿಶೇಷ ಸಂದರ್ಶನ ನೀಡಿರುವ , ಲಿಂಗಾಯಿತ ಪ್ರತ್ಯೇಕ ಧರ್ಮವಾಗಬೇಕೆಂದು ಆಗ್ರಹಿಸಿದ್ದಾರೆ. ಅವರು ನೀಡಿರುವ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ನೀಡಲಾಗಿದೆ.

Shivamurthi Murugharajedra Swamiji supports separate religious status for lingayaths

- ಲಿಂಗಾಯಿತ ಧರ್ಮದ ಪ್ರತ್ಯೇಕ ಕೂಗು ಈಗ ಅವಶ್ಯಕವಿತ್ತೇ?
ಪ್ರತ್ಯೇಕತೆಯ ಕೂಗು ಕೇವಲ ಇಂದು ನೆನ್ನೆಯದಲ್ಲ. ಬಹು ಹಿಂದಿನಿಂದಲೂ ಅದು ಚಾಲ್ತಿಯಲ್ಲಿದೆ. ದಶಕಗಳ ಹಿಂದೆಯೇ ಲಿಂಗಾಯತ ಧರ್ಮದಲ್ಲಿ ಬೆರೆತು ಹೋಗಿರುವ ಸನಾತನ ಧರ್ಮದ ಆಚರಣೆಗಳ ಬಗ್ಗೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಿದೆ. ಹಾಗಾಗಿ, ಇದು ಲಿಂಗಾಯತರ ದಶಕಗಳ ನಿರೀಕ್ಷೆ. ಅದು ಈಗಾದರೂ ಸಾಕಾರವಾಗಬೇಕಿದೆ.

- ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆಯ ಹಿಂದಿನ ಕಾರಣಗಳೇನು?
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಲಿಂಗಾಯತ ಧರ್ಮ ಎಂದರೆ ಅದು ಬಸವಣ್ಣನವರ ಪಥ. ಆ ಪಥವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದವರು ಅದನ್ನು ವೀರಶೈವ ಧರ್ಮವೆಂಬ ನಾಮಕರಣ ಮಾಡಿದ್ದರು. ಆದರೆ, ವಾಸ್ತವದಲ್ಲಿ ಅದು ಶೈವ ಸಂಸ್ಕೃತಿಗೆ ಸೇರಿದ್ದಾಗಿರಲಿಲ್ಲ. ಸೂಕ್ತ ರೀತಿಯಲ್ಲಿ ಆಳವಾಗಿ ಅಧ್ಯಯನ ಮಾಡಿದ್ದರಿಂದಾಗಿಯೇ ಅದು (ಬಸವ ಧರ್ಮ) ಪ್ರತ್ಯೇಕ ಆಚರಣೆ, ಪದ್ಧತಿಗಳಿಗೆ ಒಳಪಡುವಂಥ ಸಂಸ್ಕೃತಿ ಎಂಬುದು ಮನದಟ್ಟಾಗುತ್ತದೆ. ಹಾಗಾಗಿ, ಅದಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ಎದ್ದಿತ್ತು.

ಇಂದಿನ ಸ್ಥಿತಿಗೆ ವೀರಶೈವರಲ್ಲಿನ ಅವಿವೇಕವೇ ಕಾರಣ: ಚಿದಾನಂದ ಮೂರ್ತಿಇಂದಿನ ಸ್ಥಿತಿಗೆ ವೀರಶೈವರಲ್ಲಿನ ಅವಿವೇಕವೇ ಕಾರಣ: ಚಿದಾನಂದ ಮೂರ್ತಿ


- ದಶಕಗಳ ಹಿಂದೆಯೇ ಎದ್ದಿದ್ದ ಬೇಡಿಕೆ ಈಡೇರಿರಲಿಲ್ಲವೇಕೆ?
ಅದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದದ್ದು, ಸೂಕ್ತ ಅಧ್ಯಯನದ ಕೊರತೆ. ಲಿಂಗಾಯತ ಬಾಂಧವರಲ್ಲಿ, ನಾಯಕರಲ್ಲಿ ಒಗ್ಗಟ್ಟಿನ ಕೊರತೆ. ರಾಜಕೀಯ ಇಚ್ಛಾಶಕ್ತಿಯ ಕೊರತೆ... ಹೀಗೆ ಅನೇಕ ಕೊರತೆಗಳಿಂದಲೇ ನಮ್ಮ ಕೂಗಿಗೆ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಈಗ ಮತ್ತೆ ಹಳೇ ಕೂಗು ಕೇಳಿಬಂದಿದೆ. ಈ ಕೂಗು ಒಕ್ಕೊರಲಾಗಿ ಮೂಡಿ ಬಂದು ಅದರಿಂದ ಬಸವ ಧರ್ಮಕ್ಕೆ ಅನುಕೂಲವಾಗಲಿ ಎಂಬುದೊಂದೇ ಆಶಯ.

Shivamurthi Murugharajedra Swamiji supports separate religious status for lingayaths

- ಪ್ರತ್ಯೇಕ ಧರ್ಮ ಸ್ಥಾನಮಾನದಿಂದ ಸಮುದಾಯಕ್ಕೆ ಆಗುವ ಲಾಭಗಳ ಲೆಕ್ಕಾಚಾರದಲ್ಲಿ ಈ ಕೂಗು ಎದ್ದಿದೆಯೇ?
ಪ್ರತ್ಯೇಕ ಧರ್ಮ ಸ್ಥಾನಮಾನ ಸಿಕ್ಕರೆ ಏನೇನು ಲಾಭ ಎಂಬ ವಿಚಾರ ನಮ್ಮದಲ್ಲ. ಬಸವ ಧರ್ಮವು ಹಿಂದೂಗಳ ಸಾಂಪ್ರದಾಯಿಕ ಪೂಜೆ, ಪುನಸ್ಕಾರ, ಇರ ವಿಧಿ ವಿಧಾನಗಳಿಗಿಂತ ಭಿನ್ನವಾದದ್ದು. ನಮ್ಮಲ್ಲಿ ಪ್ರತ್ಯೇಕ ಆಚರಣೆ, ಸಂಸ್ಕೃತಿಗೆ ಪ್ರತ್ಯೇಕ ಸ್ಥಾನಮಾನವನ್ನು ಈಗಾಗಲೇ ನೀಡಲಾಗಿದೆ. ಉದಾಹರಣೆಗೆ, ಜೈನರು, ಬುದ್ಧರು, ಸಿಖ್ ಸಮುದಾಯಗಳಿಗೆ ಪ್ರತ್ಯೇಕ ಗುರುಗಳಿದ್ದಾರೆ. ಆ ಧರ್ಮೀಯರು ಆಯಾ ಗುರುಗಳ ಬೋಧನೆಯನ್ನು ಪಾಲಿಸುತ್ತಿದ್ದಾರೆ. ಹಾಗಾಗಿ, ಅವರನ್ನು ಪ್ರತ್ಯೇಕ ಧರ್ಮಗಳೆಂದು ಗುರುತಿಸಲಾಗಿದೆ. ಹಾಗೆಯೇ, ಬಸವ ಧರ್ಮೀಯರಿಗೆ ಬಸವಣ್ಣನವರೇ ಮೂಲ. ಅವರೇ ಸರ್ವಸ್ವ. ಅವರ ತತ್ವಗಳೇ ಜೀವನ ದಾರಿ. ಹಾಗಾಗಿ, ನಮಗೂ ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಕು.

Shivamurthi Murugharajedra Swamiji supports separate religious status for lingayaths

- ಈ ಸಂದರ್ಭದಲ್ಲಿ ಸರ್ಕಾರಕ್ಕೆ ನಿಮ್ಮ ಸಲಹೆಯೇನು?
ಸರ್ಕಾರವು ನಮ್ಮ ಕೂಗಿಗೆ ಕಿವಿಗೊಡಬೇಕು. ನಮ್ಮ ಕೂಗನ್ನು ರಾಜಕೀಯವಾಗಿ ಬಳಸಿಕೊಳ್ಳದೆ, ನೈಜ ಮಾರ್ಗದಲ್ಲಿ ಅದನ್ನು ಕೊಂಡೊಯ್ದು ಕೇಂದ್ರ ಸರ್ಕಾರಕ್ಕೆ ನಮ್ಮ ಕೂಗನ್ನು ಮುಟ್ಟಿಸಬೇಕು. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ನಿಯೋಗವೊಂದನ್ನು ರಚನೆ ಮಾಡಿ ಆ ಮೂಲಕ ಕೇಂದ್ರ ಸರ್ಕಾರಕ್ಕೆ ನಮ್ಮ ಅಹವಾಲನ್ನು ಸಲ್ಲಿಸಿ, ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವಂತೆ ಮಾಡಬೇಕು.

English summary
Chitraduga Murugharajendra Matha's Sri Shivamurthi Murugharajendra Swamiji has supported the demand of separate religious status for Lingayaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X