ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಾಜಿ ನಗರ ಬಸ್ ನಿಲ್ದಾಣದಲ್ಲಿ ಹೋಟೆಲ್ ಎಲ್ಲಿದೆ?

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 29: ಬೆಂಗಳೂರಿನ ಶಿವಾಜಿನಗರದ ಬಸ್ ನಿಲ್ದಾಣದಲ್ಲಿ ಇದ್ದ ಹೋಟೆಲ್ ಶ್ರೀ ಕೃಷ್ಣ ಉಪಹಾರ ಮುಚ್ಚಿ ಒಂದು ತಿಂಗಳಾಗಿದೆ. ಪ್ರಯಾಣಿಕರು ಉಪಹಾರಕ್ಕೆ ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಿದ್ದಾರೆ.

ಒಂದು ತಿಂಗಳಿನಿಂದ ಶ್ರೀ ಕೃಷ್ಣ ಉಪಹಾರ ಬಂದ್ ಆಗಿದೆ. ಹೊಸದಾಗಿ ಶಿವಾಜಿ ನಗರದ ಬಸ್ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರು ಉಪಾಹಾರಕ್ಕಾಗಿ ಪರಿತಪಿಸುವುದಂತೂ ಶತಸಿದ್ದ. ಇನ್ನು ಕಂಡೆಕ್ಟರ್ ಗಳು ಬಸ್ ಸ್ಟಾಂಡಿನಲ್ಲಿ ಬೆಳಗ್ಗೆ, ಸಂಜೆ ಕಾಫೀ ತಿಂಡಿ ತಿನ್ನಲು ಆಗುತ್ತಿಲ್ಲ.[ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ]

Shivajinagar bus stand hotel is closed in one month

ಈ ಬಗ್ಗೆ ಬಸ್ ನಿಲ್ದಾಣದ ಟಿಸಿಯನ್ನು ಕೇಳಿದರೆ 'ಶ್ರೀಕೃಷ್ಣ ಉಪಾಹಾರ ಇಲ್ಲದಿದ್ದರೆ ರಾಮ್ ಪ್ರಸಾದ್ ಹೋಟೆಲ್ಗೆ ಹೋಗ್ರಿ, ಇಲ್ಲಂದ್ರೆ ಮತ್ತೊಂದಕ್ಕೆ ಹೋಗಿ.!' ಎಂದು ಸಾಮಾನ್ಯರನ್ನೇ ಗದರುತ್ತಾರೆ. ಬಸ್ ನಿಲ್ದಾಣದ ಸುತ್ತ ಮುತ್ತ ಅನೇಕ ಹೋಟೆಲ್ ಗಳಿದ್ದರೂ ಜನರು ಬಸ್ ನಿಲ್ಲಿಸಿದ್ದಾಗ 10 ನಿಮಿಷಯಕ್ಕೆ ಹೋಗಿ ಏನಾದರೂ ತಿಂದು ಬರಲು ಸಾಧ್ಯವೇ ನೀವೆ ಹೇಳಿ?

ಶಿವಾಜಿನಗರದ ಬಸ್ ನಿಲ್ದಾಣದಲ್ಲಿ ಒಂದು ದಿನಕ್ಕೆ ನೂರಾರು ಬಸ್ ಗಳು ಸಂಚಾರ ಮಾಡುತ್ತವೆ. ಪ್ರಯಾಣಿಕರು ಸಾವಿರಕ್ಕೂ ಮಿಗಿಲು. ಶಿವಾಜಿನಗರಕ್ಕೆ ಹೋಲಿಸಿದರೆ ಶಾಂತಿನಗರ ಬಸ್ ನಿಲ್ದಾಣದಲ್ಲಿಯೇ ಹೋಟೆಲ್ ವ್ಯವಸ್ಥೆ ಪರವಾಗಿಲ್ಲ ಎನ್ನುತ್ತಾರೆ ನಾಗರಿಕರು.

Shivajinagar bus stand hotel is closed in one month

ನಗರದ ವಿವಿಧೆಡೆಯಿಂದ ಶಿವಾಜಿನಗರಕ್ಕೆ ಬರುವ ಅನೇಕ ಉದ್ಯೋಗಸ್ಥರು ಬೆಳಗ್ಗೆಯೇ ಹೊರಟು ಬಂದಿರುತ್ತಾರೆ. ಕೆಲವರು ಬಸ್ ನಿಲ್ದಾಣದಲ್ಲಿಯೇ ತಿಂಡಿ ತಿಂದರಾಯಿತು, ನಂತರ ಅಲ್ಲೇ ಬಸ್ ಹತ್ತಿದರೆ ಸ್ವಲ್ಬ ಹೊತ್ತಿಗೆ ಆಫೀಸಿಗೆ ಹೊಗಿಬಿಡುತ್ತವೆ ಎಂದು ಯೋಚಿಸುವುದು ಸಹಜ. ಆ ರೀತಿ ಅಂದುಕೊಂಡೇನಾದರೂ ಬಂದರೆ ಖಂಡಿತ ಪಶ್ಚಾತಾಪ ಪಡಬೇಕಾಗುತ್ತದೆ.

English summary
Shivajinagar bus stand Sri krishna upahar is closed in one month. But still people have Difficulty for food. bus stand near some hotel are there it is not comfortable for citizen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X