ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡದಲ್ಲೇ ಸೇವೆ ನೀಡುವ 'ಶೆಲ್' ಉಳಿದವಕ್ಕೂ ಮಾದರಿಯಾಗಲಿ

|
Google Oneindia Kannada News

ಬೆಂಗಳೂರು, ಜುಲೈ 6: ಜಗತ್ತಿನ ಅತ್ಯಂತ ಪ್ರಸಿದ್ಧ ಇಂಧನ ಕಂಪನಿಗಳಲ್ಲೊಂದಾದ ಶೆಲ್, ಕರ್ನಾಟಕದಲ್ಲಿ ಕನ್ನಡದಲ್ಲೇ ಸೇವೆ ನೀಡುತ್ತಿರುವುದು ಕನ್ನಡಿಗರ ಮನಸ್ಸನ್ನು ತಟ್ಟಿದೆ. ಬಹುಪಾಲು ಕನ್ನಡಿಗರು ಶೆಲ್ ಕಂಪನಿಯ ಕಾಯಂ ಗ್ರಾಹಕರಾಗುವುದಕ್ಕೂ ಇದೇ ಕಾರಣವಾಗಿದೆ.

ಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿಕನ್ನಡಿಗರಿಗೆ ಗೆಲುವು: ನಮ್ಮ ಮೆಟ್ರೋ ಹಿಂದಿ ಬೋರ್ಡ್ ಗೆ ಬಿತ್ತು ಮಸಿ

ಶೆಲ್ ಕಂಪನಿ ಕರ್ನಾಟಕದಲ್ಲಿರುವ ತನ್ನ ಪೆಟ್ರೋಲ್ ಬಂಕ್ ಗಳಲ್ಲಿ ಇಂಗ್ಲಿಷ್ ಬದಲಾಗಿ ಕನ್ನಡದಲ್ಲೇ ಜಾಹಿರಾತು ನೀಡುತ್ತಿರುವುದು, ಮತ್ತು ತನ್ನ ಭಿತ್ತಿಪತ್ರದಲ್ಲಿಯೂ ಕನ್ನಡವನ್ನೇ ಉಪಯೋಗಿಸಿರುವುದು ಕನ್ನಡ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿದೆ. ಇದೀಗ ಶೆಲ್ ನಂತೆಯೇ ಬೇರೆ ಕಂಪನಿಗಳೂ ಕನ್ನಡದಲ್ಲೇ ಸೇವೆ ನೀಡಬೇಕೆಂಬ ಮನವಿಯೂ ಕೇಳಿಬರುತ್ತಿದೆ.

Shell petrol pump's ideal step in saving Kannada language

ಆರು ಕೋಟಿ ಕನ್ನಡ ಗ್ರಾಹಕರನ್ನು ತಲುಪಲು ತಮ್ಮ ಗ್ರಾಹಕ ಸೇವೆಗಳನ್ನು ಕನ್ನಡದಲ್ಲೇ ನೀಡುತ್ತಿರುವ ಶೆಲ್ ಪೆಟ್ರೊಲಿಯಂ ಸಂಸ್ಥೆಯ ಹೆಜ್ಜೆ ಶ್ಲಾಘನೀಯ ಎಂದು 'ಕನ್ನಡ ಗ್ರಾಹಕ' ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಈ ಟ್ವೀಟ್ ಗೆ ಹಲವರು ತಮ್ಮ ಬೆಂಬಲ ಸೂಚಿಸಿದ್ದಾರೆ.

ಲುಫ್ತಾನ್ಸಾದಿಂದ ಕನ್ನಡಿಗರಿಗಾಗಿ ಕನ್ನಡ ಸೇವೆ ಆರಂಭಲುಫ್ತಾನ್ಸಾದಿಂದ ಕನ್ನಡಿಗರಿಗಾಗಿ ಕನ್ನಡ ಸೇವೆ ಆರಂಭ

ಶೆಲ್ ಪೆಟ್ರೋಲ್ ಕಂಪನಿಯಂತೆ ಇಂಡಿಯನ್ ಆಯಿಲ್, ಹಿಂದುಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಸಂಸ್ಥೆಗಳೂ ಕರ್ನಾಟಕದಲ್ಲಿ ಗ್ರಾಹಕರಿಗೆ ಕನ್ನಡದಲ್ಲೇ ಸೇವೆ ಒದಗಿಸಲಿ ಎಂದು ಮಂಜುನಾಥ್ ಬಿಲ್ಲವ ಎನ್ನುವವರೂ ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಜನರಿಂದ ಆದಾಯ ಪಡೆಯುತ್ತಿರುವ ಕಂಪನಿಗಳು ಕನ್ನಡವನ್ನು ವ್ಯವಹಾರದ ಭಾಷೆಯನ್ನಾಗಿ ಮತ್ತು ಗ್ರಾಹಕ ಸೇವೆಗಾಗಿ ಬಳಸಬೇಕೆಂಬ ಕೂಗಿನ ಹಿಂದೆ, ಕನ್ನಡ ಭಾಷೆಯನ್ನು ಉಳಿಸುವ, ಬೆಳೆಸುವ ಉದ್ದೇಶವಿರುವುದು ಗಮನಾರ್ಹ.ಕರ್ನಾಟಕದಲ್ಲಿರುವ ಹ್ಯುಂಡೈ ಕಾರ್ ಸರ್ವಿಸ್ ಕೇಂದ್ರಗಳೂ ತಮ್ಮ ಅನಿಸಿಕೆ ಪತ್ರ (feedback form) ವನ್ನು ಕನ್ನಡದಲ್ಲೇ ಮುದ್ರಿಸಿ, ಕನ್ನಡ ಗ್ರಾಹಕರನ್ನು ಸೆಳೆದಿದೆ.

ಹಾಗೆಯೇ ಜರ್ಮನಿ ಮೂಲದ ಲುಫ್ತಾನ್ಸಾ ಏರ್ ಲೈನ್ಸ್ ಕಂಪನಿಯೂ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ, ಕನ್ನಡದಲ್ಲೇ ಸೇವೆ ಆರಂಭಿಸಿರುವುದನ್ನೂ ಇಲ್ಲಿ ಉಲ್ಲೇಖಿಸಬಹುದು.

English summary
Shell Petrol pumps are using kannada langauge for customer service in Kannada. The shell's stand took attention of all Kannada lovers and they are requesting all petrol pumps like HP, BP, IOL should use Kannada language as medium of communication and also for customer service.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X