ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅನಾಥ ಶಿಶುವಿಗೆ ಎದೆ ಹಾಲುಣಿಸಿ ಮಾನವೀಯತೆ ತೋರಿದ ಮಹಿಳಾ ಕಾನ್‌ಸ್ಟೆಬಲ್

By Nayana
|
Google Oneindia Kannada News

ಬೆಂಗಳೂರು, ಜೂನ್ 5: ಮಹಿಳಾ ಕಾನ್‌ಸ್ಟೆಬಲ್ ಒಬ್ಬರು ಅನಾಥ ಶಿಶುವಿಗೆ ಎದೆಹಾಲುಣಿಸಿ ಪೊಲೀಸ್‌ ಆದರೇನು ಮೊದಲು ತಾನು ತಾಯಿ ಎಂಬುದನ್ನು ಸಾಭೀತುಪಡಿಸಿದ್ದಾರೆ.

ಆಗ ತಾನೇ ಜನಿಸಿದ್ದ ಮಗುವನ್ನು ಯಾರೋ ಕಟುಕರು ದೊಡ್ಡತೂಗೂರಿನ ತೊಟ್ಟಿಯೊಂದರಲ್ಲಿ ಎಸೆದು ಹೋಗಿದ್ದರು. ಅದನ್ನು ನೋಡಿದ್ದ ಸ್ಥಳೀಯರು ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದರು.ತಕ್ಷಣವೇ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಧಾವಿಸಿದ್ದ ಕಾನ್‌ಸ್ಟೆಬಲ್ ಅರ್ಚನಾ ಮಗುವನ್ನು ಕೈಗೆತ್ತಿಕೊಂಡಿದ್ದರು. ನಂತರ ಮಗು ಅಳಲಾರಂಭಿಸಿತ್ತು. ಮಗುವಿನ ಜತೆಗೆ ವಾಹನದೊಳಗೆ ತೆರಳಿ ಮಗುವಿಗೆ ಎದೆಹಾಲು ಉಣಿಸಿ ಅದಕ್ಕೆ ಮರುಜೀವ ನೀಡಿದ್ದಾರೆ.

ಮೆಜೆಸ್ಟಿಕ್ ನಲ್ಲಿ ಈ ಮಹಿಳಾ ಪೊಲೀಸ್‌ ಅಧಿಕಾರಿಯ ಖದರ್‌ ನೋಡಿಮೆಜೆಸ್ಟಿಕ್ ನಲ್ಲಿ ಈ ಮಹಿಳಾ ಪೊಲೀಸ್‌ ಅಧಿಕಾರಿಯ ಖದರ್‌ ನೋಡಿ

ಅರ್ಚನಾ ಎಲೆಕ್ಟ್ರಾನಿಕ್‌ ಸಿಟಿಯ ಪೊಲೀಸ್‌ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಂತರ ವಾಹನದಲ್ಲೇ ಶಿಶುವನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಮಗುವನ್ನು ವಿಲ್ಸನ್‌ ಗಾರ್ಡನ್‌ನಲ್ಲಿರುವ ಶಿಶುಗೃಹಕ್ಕೆ ನೀಡಲಾಗಿದೆ.

She may be constable, but she is mother!

ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!ಮಂಗಳಮುಖಿಯಿಂದಲೇ ತನ್ನ ಮಗುವಿಗೆ ಅಮೃತಧಾರೆ!

ಅರ್ಚನಾ ಅವರಿಗೆ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ರಜೆ ಮುಗಿಸಿ ಕೆಲಸಕ್ಕೆ ಮತ್ತೆ ಹಾಜರಾಗಿದ್ದರು. ಆ ಶಿಶು ಕಂಡು ಆತಂಕಪಟ್ಟ ಅವರು ಎದೆಹಾಲು ಉಣಿಸಿ ಮಾನವೀಯತೆ ಮೆರೆದಿದ್ದಾರೆ ಎಂದು ಅಲ್ಲಿನ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

English summary
Archana, a constable from electronic city police station has breastfeed a just born baby which was found near Dodda Tugooru in Bengaluru on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X