ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊಬೈಲ್ ಕಳೆದು ಹೋಗಿದ್ದಕ್ಕೆ ವಿದ್ಯಾರ್ಥಿನಿ ಮಾಡಿದ್ದೇನು?

|
Google Oneindia Kannada News

ಬೆಂಗಳೂರು, ಜನವರಿ 16: ಮೊಬೈಲ್ ಕಳೆದು ಹೋಗಿದೆ, ಮನೆಯಲ್ಲಿ ಹೇಳಿದರೆ ಅಪ್ಪ, ಅಮ್ಮ ಕೋಪ ಮಾಡಿಕೊಳ್ಳಬಹುದು ಎಂದುಕೊಂಡು ಒಂದು ದಿನ ವಿದ್ಯಾರ್ಥಿನಿ ಮನೆಗೇ ಹೋಗದೆ ಆತಂಕ ಸೃಷ್ಟಿಸಿದ್ದಳು.

ಕಾಲೇಜು ಮುಗಿಸಿ ಮಧ್ಯಾಹ್ನ ಬರಬೇಕಾದ ವಿದ್ಯಾರ್ಥಿನಿ ಮರುದಿನ ಮಧ್ಯಾಹ್ನ ಮನೆಗೆ ಸೇರಿ ಆತಂಕಗೊಂಡಿದ್ದ ಪೋಷಕರಿಗೆ ಸಮಾಧಾನ ತಂದಿದ್ದಾಳೆ, 16 ವರ್ಷದ ವಿದ್ಯಾರ್ಥಿನಿಯ ತಂದೆ ಟೈಲರ್ ಆಗಿದ್ದು, ಟಿ ದಾಸರಹಳ್ಳಿಯಲ್ಲಿ ವಾಸವಿದ್ದಾರೆ.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್ ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ನಗರದ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಮೊಬೈಲ್ ಕಳೆದು ಹೋದ ಬೇಸರದಲ್ಲಿ ಮನೆಗೆ ಹೋಗದೆ ಸ್ನೇಹಿತೆಯ ಮನೆಯಲ್ಲಿ ಉಳಿದಿದ್ದಳು.

She lost her phone, and didnt want to face parents

ಬೆಳಗ್ಗೆ 8.30ಕ್ಕೆ ಕಾಲೇಜಿಗೆ ಹೋಗಿದ್ದ ಬಾಲಕಿ, ನಿಗದಿತ ಸಮಯಕ್ಕೆ ಮನೆಗೆ ವಾಪಸ್ ಬಂದಿರಲಿಲ್ಲ, ಸ್ನೇಹಿತರ ಮನೆಗೆ ಹೋಗಿರಬಹುದು ಎಂದು ಭಾವಿಸಿದ ಪಾಲಕರು, ಸಂಜೆಯವರೆಗೂ ಕಾದಿದ್ದರು.

ಈ ನಡುವೆ ಆಕೆಯ ಫೋನ್‌ಗೆ ಹಲವು ಬಾರಿ ಕರೆ ಮಾಡಿದರೂ ಸಿಕ್ಕಿರಲಿಲ್ಲ. ಆದತೆ ಸಂಜೆಯಾದರೂ ಆಕೆ ಬಾರದಿದ್ದ ಕಾರಣಕ್ಕೆ ಆತಂಕಕ್ಕೊಳಗಾಗಿದ್ದರು. ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಿತರ ಮನೆಯಲ್ಲಿ ಹುಟುಕಾಟ ನಡೆಸಿದ್ದರು. ಬಳಿಕ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಯುವತಿ ಮಾಡಿದ್ದೇನು? ಮದುವೆಯಲ್ಲಿ ಸಂಬಂಧಿಕರನ್ನು ಮೆಚ್ಚಿಸಲು ಯುವತಿ ಮಾಡಿದ್ದೇನು?

ಮರುದಿನ ಮಧ್ಯಾಹ್ನ ಮನೆಗೆ ಬಂದ ಬಳಿಕ ಕಾರಣ ಕೇಳಿದಾಗ ಮೊಬೈಲ್ ಕಳೆದುಕೊಂಡಿದ್ದೆ, ತಂದೆಗೆ ಏನು ಹೇಳಬೇಕು ಎಂದು ತಿಳಿದಿರಲಿಲ್ಲ ಅದಕ್ಕೆ ಮನೆಗೆ ಬಂದಿರಲಿಲ್ಲ ಎಂದು ಹೇಳಿದ್ದಾಳೆ.

ಸಚಿವ ಆರ್‌.ವಿ.ದೇಶಪಾಂಡೆ ಪುತ್ರನ ಮನೆಗೆ ಕನ್ನ ಹಾಕಿದ ಖದೀಮರು ಸಚಿವ ಆರ್‌.ವಿ.ದೇಶಪಾಂಡೆ ಪುತ್ರನ ಮನೆಗೆ ಕನ್ನ ಹಾಕಿದ ಖದೀಮರು

ಮಕ್ಕಳು ಪೋಷಕರ ಆತಂಕವನ್ನು ಅರ್ಥ ಮಾಡಿಕೊಳ್ಳಬೇಕು, ಒಂದೊಮ್ಮೆ ಮೊಬೈಲ್ ಕಳೆದುಕೊಂಡಿದ್ದಕ್ಕೆ ಕೋಪ ಮಾಡಿಕೊಂಡರೆ, ಬೈದರೆ ಅದು ಅಲ್ಲಿಗೆ ಮುಗಿಯುತ್ತದೆ ಆದರೆ ದುಡುಕಿ ನಿರ್ಧಾರ ತೆಗೆದುಕೊಂಡು ಇಡೀ ಜೀವನ ಪೂರ್ತಿ ತಂದೆ-ತಾಯಿಯ ಕಣ್ಣಲ್ಲಿ ನೀರು ಹಾಕಿಸುವ ಕೆಲಸ ಮಾಡಬೇಡಿ ಎನ್ನುವುದು ನಮ್ಮ ವಿನಂತಿ.

English summary
16-year-old stayed at a friend’s home for a night to avoid facing father after her cell was stolen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X