ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿವಾಜಿನಗರದಲ್ಲಿ ಮನೆ ಮನೆಗೆ ಆಮ್ ಆದ್ಮಿ ಪ್ರಚಾರ

|
Google Oneindia Kannada News

ಬೆಂಗಳೂರು, ಫೆ.10 : ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಆಮ್ ಆದ್ಮಿ ಪಕ್ಷ ಬೆಂಗಳೂರಿನಲ್ಲಿ ಭಾನುವಾರ ಮನೆ ಮನೆಗೆ ಆಮ್ ಆದ್ಮಿ, ಮನೆ ಮನೆಯಲ್ಲಿ ಆಮ್ ಆದ್ಮಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಪಕ್ಷದ ರಾಷ್ಟ್ರೀಯ ನಾಯಕಿ ಶಾಜಿಯಾ ಇಲ್ಮಿ ರಸೂಲ್ ಮಾರ್ಕೆಟ್ ನಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಭಾನುವಾರ ಶಿವಾಜಿನಗರ ಕ್ಷೇತ್ರದ ರಸೂಲ್ ಮಾರ್ಕೆಟ್ ನಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ನಾಯಕಿ ಶಾಜಿಯಾ ಇಲ್ಮಿ, ಮಾರುಕಟ್ಟೆಯ ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸುವ ಮೂಲಕ ಮನೆ ಮನೆಗೆ ಆಮ್ ಆದ್ಮಿ, ಮನೆ ಮನೆಯಲ್ಲಿ ಆಮ್ ಆದ್ಮಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.

ಮಾರುಕಟ್ಟೆ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಶಾಜಿಯಾ ಇಲ್ಮಿ, ಆಮ್ ಆದ್ಮಿ ಪಕ್ಷದ ತತ್ವ, ಸಿದ್ದಾಂತಗಳನ್ನು ಅವರಿಗೆ ತಿಳಿಸಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು. ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಚಿತ್ರಗಳಲ್ಲಿ ಆಮ್ ಆದ್ಮಿ ಪ್ರಚಾರ

ಸರ್ಕಾರದಲ್ಲಿ ಪಾರದರ್ಶಕತೆ ಬೇಕು

ಸರ್ಕಾರದಲ್ಲಿ ಪಾರದರ್ಶಕತೆ ಬೇಕು

ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರುವುದು ಇಂದಿನ ತುರ್ತು ಅಗತ್ಯವಾಗಿದೆ. ಈಗಾಗಲೇ ಕಾಲ ಸಾಕಷ್ಟು ವಿಳಂಬವಾಗಿದ್ದು, ಜನರು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡುವ ಮೂಲಕ, ಆಡಳಿತದಲ್ಲಿ ಪಾರರ್ಶಕತೆ ತರಲು ಜನರು ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

ಪಕ್ಷದ ಬಗ್ಗೆ ಮಾಹಿತಿ ನೀಡಿದರು

ಪಕ್ಷದ ಬಗ್ಗೆ ಮಾಹಿತಿ ನೀಡಿದರು

ಶಾಜಿಯಾ ಇಲ್ಮಿ ಮನೆ-ಮನೆಗೆ ತರಳಿ ಆಮ್ ಆದ್ಮಿ ಪಕ್ಷ ತತ್ವ ಸಿದ್ದಾಂತಗಳ ಕುರಿತು ಜನರಿಗೆ ಮಾಹಿತಿ ನೀಡಿದರು.

ನಿಮ್ಮ ಬೆಂಬಲ ಬೇಕು

ನಿಮ್ಮ ಬೆಂಬಲ ಬೇಕು

ಜನ ಸಾಮಾನ್ಯರ ಪಕ್ಷವಾದ ಆಮ್ ಆದ್ಮಿ ಪಕ್ಷಕ್ಕೆ ಲೋಕಸಭೆ ಚುನಾವಣೆಯಲ್ಲಿ ನಿಮ್ಮ ಬೆಂಬಲ ಬೇಕು ಎಂದು ಶಾಜಿಯಾ ಇಲ್ಮಿ ಜನರಲ್ಲಿ ಮನವಿ ಮಾಡಿದರು.

ವ್ಯಾಪಾರಿಗಳಿಂದ ಸಮಸ್ಯೆ ಆಲಿಸಿದರು

ವ್ಯಾಪಾರಿಗಳಿಂದ ಸಮಸ್ಯೆ ಆಲಿಸಿದರು

ಶಾಜಿಯಾ ಇಲ್ಮಿ ರಸೂಲ್ ಮಾರುಕಟ್ಟೆಯಲ್ಲಿ ಪ್ರಚಾರ ನಡೆಸಿ, ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಚುನಾವಣೆಯಲ್ಲಿ ಬೆಂಬಲಿಸಿ

ಚುನಾವಣೆಯಲ್ಲಿ ಬೆಂಬಲಿಸಿ

ಮನೆ-ಮನೆಗೆ ತೆರಳಿದ ಶಾಜಿಯಾ ಇಲ್ಮಿ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದರು. ಅವರಿಗೂ ಪಕ್ಷದ ಬಗ್ಗೆ ಮಾಹಿತಿ ನೀಡಿದರು.

ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ

ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ

ರಸೂಲ್ ಮಾರುಕಟ್ಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾರದರ್ಶಕ ಆಡಳಿತ ನಮ್ಮ ಗುರಿಯಾಗಿದ್ದು, ಪಕ್ಷವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

English summary
The Door to Door campaign of Aam Aadmi Party's "Mane Manege Aam Aadmi, Mane Maneyalli Aam Aadmi" was successfully launched today in Shivaji Nagar, Bangalore by party's national executive member Shazia Ilmi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X