ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜುಲೈ 22ರಿಂದ ಶತಾಬ್ದಿ ಎಕ್ಸ್ ಪ್ರೆಸ್ ಮತ್ತೆ ಸಂಚಾರ ಆರಂಭ

|
Google Oneindia Kannada News

ಬೆಂಗಳೂರು, ಜುಲೈ 16: ಚೆನ್ನೈ ಹಾಗೂ ಬೆಂಗಳೂರು ಮಹಾನಗರಗಳ ನಡುವೆ ತ್ವರಿತ ಸಂಪರ್ಕ ಒದಗಿಸುವ ಶತಾಬ್ದಿ ಎಕ್ಸ್ ಪ್ರೆಸ್ ರೈಲು ಮತ್ತೆ ಸಂಚಾರ ಆರಂಭಿಸುವ ಸುದ್ದಿ ಬಂದಿದೆ. ಜುಲೈ 21ರಿಂದ ಈ ಪ್ರೀಮಿಯಂ ರೈಲು ಸಂಚಾರ ಪುನರ್ ಆರಂಭವಾಗುವ ಮಾಹಿತಿ ಸಿಕ್ಕಿದೆ.

ಕೋವಿಡ್ 19 2ನೇ ಅಲೆ ನಡುವೆ ಸಂಚಾರ ಆರಂಭಿಸಿದ್ದ ಶತಾಬ್ದಿ ಎಕ್ಸ್ ಪ್ರೆಸ್ ಹೆಚ್ಚಿನ ಪ್ರಯಾಣಿಕರನ್ನು ಹೊಂದಿರದ ಕಾರಣದಿಂದ ಏಪ್ರಿಲ್ 28ರ ನಂತರ ಸಂಚಾರ ಸ್ಥಗಿತಗೊಳಿಸಿತ್ತು.

ನೈಋತ್ಯ ರೈಲ್ವೆ ಪ್ರಕಟಣೆಯಂತೆ ಕ್ರಾಂತಿವೀರ ಸಂಗೊಳ್ಳೀ ರಾಯಣ್ಣ(ಕೆಎಸ್ಆರ್) ಬೆಂಗಳೂರು ನಿಲ್ದಾಣದಿಂದ ಚೆನ್ನೈ ಎಂಜಿಆರ್ ಸೆಂಟ್ರಲ್ ನಡುವಿನ 02028/02027 ಸಂಖ್ಯೆಯ ಶತಾಬ್ದಿ ರೈಲ್ವೆ ಜುಲೈ 21ರಿಂದ ಸಂಚಾರ ಆರಂಭಿಸಲಿದೆ.

Shatabdi express, Indias one of the premium trains to resume services from July 21

ವಾರದಲ್ಲಿ ಆರು ದಿನ ಸಂಚರಿಸಲಿರುವ ಈ ವೇಗವಾದ ರೈಲು 395 ಕಿ.ಮೀ ದೂರವನ್ನು ಕ್ರಮಿಸಲಿದೆ. ಬೆಂಗಳೂರು ನಗರ ಕೆಎಸ್ಆರ್ ನಿಲ್ದಾಣದಿಂದ ಬೆಳಗ್ಗೆ 6 ಗಂಟೆಗೆ ಹೊರಟು ಚೆನ್ನೈ ಎಂಜಿಆರ್ ಸೆಂಟ್ರಲ್ ನಿಲ್ದಾಣವನ್ನು 11 ಗಂಟೆಗೆ ತಲುಪಲಿದೆ. ಸಂಜೆ 5.30ಕ್ಕೆ ಚೆನ್ನೈ ನಿಲ್ದಾಣವನ್ನು ಬಿಟ್ಟು ಬೆಂಗಳೂರನ್ನು ರಾತ್ರಿ 10.25ಕ್ಕೆ ತಲುಪಲಿದೆ.

Recommended Video

ಟೆಸ್ಟ್ ಸ್ಪೆಷಲಿಸ್ಟ್ ಆಗಿದ್ದಂತ Rahulಗೆ ಈಗ ಅವಕಾಶವಿಲ್ಲ | Oneindia Kannada

ಇದರ ಜೊತೆಗೆ ಹುಬ್ಬಳ್ಳಿ ಹಾಗೂ ಚೆನ್ನೈ ನಡುವೆ ಸಂಚರಿಸುತ್ತಿದ್ದ ವಿಶೇಷ ರೈಲು ಜುಲೈ 21 ರಿಂದ 22ರಂದು ಮತ್ತೆ ಸಂಚಾರ ಆರಂಭಿಸಲಿದೆ. ಟ್ರೈನ್ ಸಂಖ್ಯೆ 07333 ಶ್ರೀ ಸಿದ್ಧರೂಢ ಸ್ವಾಮೀಜಿ ಹುಬ್ಬಳ್ಳಿ- ಚೆನ್ನೈ ಎಂಜಿಆರ್ ಸೆಂಟ್ರಲ್ ನಡುವೆ ಟ್ರೈನ್ ಹಾಗೂ ಟ್ರೈನ್ ಸಂಖ್ಯೆ 07334 ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡು ಹುಬ್ಬಳ್ಳಿಯ ಸಿದ್ದರೂಢ ಸ್ವಾಮೀಜಿ ನಿಲ್ದಾಣಕ್ಕೆ ಸಂಚರಿಸಲಿದೆ.

English summary
Reportedly Shatabdi express trains running between Chennai and Bengaluru is all set to resume operations from July 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X