ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಕ್ರಾಂತಿಗೆ ಏನು ಮಾಡೋದು? ಏರಿದ ತರಕಾರಿಗಳ ಬೆಲೆಗೆ ತತ್ತರಿಸಿದ ಗ್ರಾಹಕರು

|
Google Oneindia Kannada News

ಬೆಂಗಳೂರು, ಜನವರಿ 10: ಏರುತ್ತಿರುವ ತರಕಾರಿ ಬೆಲೆ ನೋಡಿ ಗ್ರಾಹಕರು ಕಂಗಾಲಾಗಿದ್ದಾರೆ, ಸಂಕ್ರಾಂತಿಯನ್ನು ಸಂತಸದಿಂದ ಮಾಡಬೇಕೆಂದುಕೊಂಡವರಿಗೆ ತರಕಾರಿ ಬೆಲೆ ಏರಿಕೆ ಬರಸಿಡಿಲಿನಂತೆ ಎರಗಿದೆ.

ಟೊಮೆಟೋ ಬೆಲೆ 10 ರೂ ನಿಂದ 70 ರೂಗೆ ಜಿಗಿದಿದೆ, ಈ ಬಾರಿ ಚಳಿಗಾಲ ರೈತ ಮೊಗದಲ್ಲಿ ಮಂದಹಾಸ ತಂದಿದೆ. ಚಳಿ ಹೊಡೆತಕ್ಕೆ ಟೊಮೆಟೋ ಗಿಡಗಳಲ್ಲಿ ಕಾಯಿಗಳು ಬಿಡುತ್ತಿಲ್ಲ. ಆದರಿಂದ ಟೊಮೆಟೊ ಇಳುವರಿ ಶೇ.60 ರಷ್ಟು ಇಳಿಕೆಯಾಗಿದೆ. ಇಳುವರಿ ಕಡಿಮೆಯಾದ ಬೆನ್ನಲ್ಲೇ ಟೊಮೆಟೋ ಬೆಲೆ ಏರಿಕೆಯಾಗಿದೆ.

ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ

ಆದರಿಂದ 10-20 ರೂ. ಗೆ ಸಿಗುತ್ತಿದ್ದ ಟೊಮೆಟೋ ಏಕಾಏಕಿ 70 ರೂ.ಗೆ ಜಿಗಿದಿದೆ. ಇನ್ನು 1 ರಿಂದ 2 ತಿಂಗಳ ಕಾಲ ಟೊಮೆಟೋ ದುಬಾರಿಯಾಗಲಿದ್ದು, ಟೊಮೆಟೋ ಬೆಳೆಗಾರರಿಗೆ ಬಂಪರ್ ಲಾಟರಿ ಹೊಡಿದಂತೆ ಆಗಿದ್ದರೇ, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ.

Sharp rise in Vegetable prices

ಚಳಿಯಿಂದಾಗಿ ಟೊಮೆಟೋ ಬೆಳೆ ಸರಿಯಾಗಿ ಬಾರದಿರುವ ಕಾರಣ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ, ಮೈಸೂರು ಭಾಗದಿಂದ ಬರುತ್ತಿದ್ದ ಟೊಮೆಟೋ ಸರಬರಾಜು ಕೂಡ ಕಡಿಮೆಯಾಗಿದೆ. ಚಳಿಗಾಲ ಆರಂಭಕ್ಕೂ ಮುನ್ನ 200-250 ಲೋಡ್‌ಗಳಷ್ಟು ಸರಬರಾಜಾಗುತ್ತಿತ್ತು, ಈಗ ಕೇವಲ 50-60ರಷ್ಟು ಸರಬರಾಜಾಗುತ್ತಿದೆ. ಬಾಕ್ಸ್‌ಗೆ 200-250 ಇದ್ದ ಬೆಲೆ ಇದೀಗ 400-600ರಷ್ಟು ಅಧಿಕಗೊಂಡಿದೆ.

ಶೀತಗಾಳಿಗೆ ತರಕಾರಿ ಇಳುವರಿ ಕುಸಿದಿದೆ. ಇದು ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಹುರುಳಿಕಾಯಿ, ಬೆಂಡಿಕಾಯಿ, ಹೀರೆಕಾಯಿ, ಸಗಟು 15-25 ರೂ ಇತ್ತು, ಈಗ 30-40 ರೂ ಆಗಿದೆ. ಟೊಮೆಟೋ ಸಗಟು 16-18 ರೂ ಇದ್ದಿದ್ದು 25 ರೂ ದಾಟಿದೆ. ಹಿಂದಿನ ಬೆಲೆಗೆ ಹೋಲಿಸಿದರೆ ಶೇ.30ರಷ್ಟು ತರಕರಿ ಬೆಲೆ ಅಧಿಕವಾಗಿದೆ.

ಸಂಕ್ರಾಂತಿಗೆ ತರಕಾರಿ, ಸೊಪ್ಪು, ಬೆಲೆ ಹೆಚ್ಚಳದ ಬಿಸಿ ಸಂಕ್ರಾಂತಿಗೆ ತರಕಾರಿ, ಸೊಪ್ಪು, ಬೆಲೆ ಹೆಚ್ಚಳದ ಬಿಸಿ

ಇನ್ನು ಮುಂದಿನ 1 ರಿಂದ 2 ತಿಂಗಳ ಕಾಲ ಟೊಮೆಟೋ ಹೀಗೇ ಗಗನ ಕುಸುಮವಾಗೇ ಇರುತ್ತೆ ಎನ್ನಲಾಗುತ್ತಿದೆ. ಸದ್ಯ ಗೃಹಿಣಿಯರು ಯಾಕ್ ಹಿಂಗಾಯ್ತು ಅಂತ ಬೇಸರದಲ್ಲಿದ್ದರೆ. ಟೊಮೆಟೋ ಬೆಳೆಗಾರರು ಬೆಲೆ ಏರಿಕೆಯಿಂದ ಸಂತಸಗೊಂಡಿದ್ದಾರೆ.

English summary
Sankranti festival, with the wedding season well under way the prices of most vegetable have shot up much to dismay of families and small caterers. and also Vegetable prices in Bengaluru rocketed as the smog coupled with fog hindered their supply from other places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X