ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೇಮ್ ಆಡ್ತಿರೋದು ನಾವಲ್ಲ, ಎಂಟಿಬಿ ಮತ್ತವರ ಮಗ: ಶರತ್ ಬಚ್ಚೇಗೌಡ

|
Google Oneindia Kannada News

ಬೆಂಗಳೂರು, ನವೆಂಬರ್ 20: ಗೇಮ್ ಆಡ್ತಿರೋದು ನಾವಲ್ಲ ಎಂಟಿಬಿ ನಾಗರಾಜ್ ಮತ್ತವರ ಮಗ ಎಂದು ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ.

ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ್ರು ಅನ್ನೋತರ ಅವರು ಗೇಮ್ ಆಡ್ತಿದ್ದಾರೆ. ಗರುಡಾಚಾರ್ ಪಾಳ್ಯದಲ್ಲಿ ಕಾಂಗ್ರೆಸ್‌ನಿಂದ ಮಗ ಕಾರ್ಪೊರೇಟರ್ ಆಗಿದ್ದಾರೆ.

ಎಂಟಿಬಿ ನಾಗರಾಜ್ ಕೋಟ್ಯಧಿಪತಿಯಾಗಿದ್ದು ಹೇಗೆ?ಎಂಟಿಬಿ ನಾಗರಾಜ್ ಕೋಟ್ಯಧಿಪತಿಯಾಗಿದ್ದು ಹೇಗೆ?

ಆದರೆ ಇಲ್ಲಿ ಬಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಮತ ಯಾಚನೆ ಮಾಡುತ್ತಿದ್ದಾರೆ. ಇದು ಯಾವ ರೀತಿಯ ನೈತಿಕತೆ ಎಂದು ಗೊತ್ತಾಗುತ್ತಿಲ್ಲ. ಆವರು ಆಟವಾಡುತ್ತಿರುವ ಕಾರಣ ನಾವೂ ಆಡುತ್ತೇವೆ ಎನ್ನುತ್ತಿದ್ದಾರೆ , ಬಚ್ಚೇಗೌಡರು ನನಗೆ ಬೆಂಬಲ ನೀಡುತ್ತಿಲ್ಲ, ಎಲ್ಲೂ ಬಂದು ನನ್ನ ಜೊತೆ ನಿಂತಿಲ್ಲ.

Sharath Alleges Serious Allegations Against MTB Nagaraj

ಬಚ್ಚೇಗೌಡರು ಎಲ್ಲಿದ್ದಾರೆ ಎನ್ನುವ ಮಾಹಿತಿ ಕೂಡ ನನಗಿಲ್ಲ, ಬಹುಶಃ ಪಾರ್ಲಿಮೆಂಟ್ ಸೆಷನ್‌ನಲ್ಲಿ ಭಾಗವಹಿಸಿರಬಹುದು ಎಂದರು. ಕುಮಾರಸ್ವಾಮಿಯವರು ಪ್ರಚಾರಕ್ಕೆ ಬರುವ ವಿಚಾರ ಕುರಿತು ಮಾತನಾಡಿರುವ ಅವರು, ನಮ್ಮ ಮುಖಂಡರೊಂದಿಗೆ ಚರ್ಚಿಸಿ ಅವರನ್ನು ಕರೆಸುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳ ಹೆಚ್ಚಳ ವಿಚಾರದ ಕುರಿತು ಮಾತನಾಡಿರುವ ಅವರು, ಕ್ಷೇತ್ರದಲ್ಲಿ ಈ ಬಾರಿ 21 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವೋಟ್ ಮಿಷನ್‌ನಲ್ಲಿ ನನ್ನ ಹೆಸರು ಹಿಂದೆ ತಳ್ಳಬೇಕು, ಎನ್ನುವ ನಿಟ್ಟನಲ್ಲಿ ಈ ರೀತಿಯ ಷಡ್ಯಂತ್ರ ಮಾಡುತ್ತಿರಬಹುದು.

ಆದರೆ ಜನರು ಈಗ ತುಂಬಾ ಹುಷಾರಾಗಿದ್ದಾರೆ. ಹೀಗಾಗಿ ಅವರು ಹುಡುಕಿಕೊಂಡು ಬಂದು ನನಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶರತ್ ಭರವಸೆ ವ್ಯಕ್ತಪಡಿಸಿದ್ದಾರೆ.

English summary
Hoskote Independent candidate Sharath Bachegowda alleges Serious allegations against MTB Nagaraj.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X