ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಸಾಧಕಿ- 3: 'ಅವಳ ಹೆಜ್ಜೆ'ಯ ಶಾಂತಲಾ ದಾಮ್ಲೆ

|
Google Oneindia Kannada News

Recommended Video

Shanthala Dhamle : AAP leader from Bengaluru | Exclusive Interview | Oneindia Kannada

ಜಗತ್ತಿನ ಪ್ರತಿರಂಗದಲ್ಲೂ ಹೆಣ್ಣಿನ ಹೆಜ್ಜೆಗುರುತು ಅಚ್ಚಳಿಯದಂತೆ ಮೂಡಬೇಕು ಎಂಬ ಉದ್ದೇಶದೊಂದಿಗೆ ಆರಂಭವಾದ ವಿನೂತನ ಪರಿಕಲ್ಪನೆಯೇ 'ಅವಳ ಹೆಜ್ಜೆ'. ಸಾಕಷ್ಟು ಸಾಧನೆ ಮಾಡಿಯೂ ಎಲೆಮರೆಯ ಕಾಯಿಯಂತೆ ಉಳಿದುಬಿಟ್ಟಿರುವ ಕರ್ನಾಟಕದ ಹಲವು ಮಾನಿನಿಯರನ್ನು ಪರಿಚಯಿಸುವ ಪ್ರಯತ್ನವಾಗಿ ಆಮ್ ಆದ್ಮಿ ಪಕ್ಷದ ಬೆಂಗಳೂರಿನ ಜವಾಬ್ದಾರಿ ಹೊತ್ತ ಶಾಂತಲಾ ದಾಮ್ಲೆಯವರು 'ಅವಳ ಹೆಜ್ಜೆ' ಎಂಬ ಯೋಜನೆಯನ್ನು ಪರಿಚಯಿಸಿದ್ದಾರೆ.

ನಮ್ಮೊಂದಿಗೇ ಇದ್ದುಕೊಂಡು ಮಹೋನ್ನತವಾದುದನ್ನು ಸಾಧಿಸಿ, ನಮಗೇ ಪರಿಚಯವಿಲ್ಲದಂತೆ ಸುಪ್ತವಾಗಿರುವ ಎಷ್ಟೋ ಸಾಧಕಿಯರನ್ನು ಸಂದರ್ಶಿಸಿ ಅವರ ಸಾಧನೆಯನ್ನು ವಿಡೀಯೋ ಮೂಲಕ ಮತ್ತಷ್ಟು ಭಾವಿ ಸಾಧಕಿಯರಿಗೆ ಪರಿಚಯಿಸುವ ಪ್ರಯತ್ನ ಅವಳ ಹೆಜ್ಜೆ. ಕರ್ನಾಟಕದ 1000 ಕ್ಕೂ ಹೆಚ್ಚು ಮಹಿಳಾ ಸಾಧಕಿಯರನ್ನು ಪರಿಚಯಿಸುವ ಗುರಿಯನ್ನಿಟ್ಟುಕೊಂದಿರುವ ಅವಳ ಹೆಜ್ಜೆ, ಇದರಾಚೆಯೂ ಹಲವು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದೆ.

ಮಹಿಳಾ ಸಾಧಕಿ ಭಾಗ-2: ಥ್ರೋಬಾಲ್ ಮಿನುಗು ತಾರೆ ಸಂಪೂರ್ಣಮಹಿಳಾ ಸಾಧಕಿ ಭಾಗ-2: ಥ್ರೋಬಾಲ್ ಮಿನುಗು ತಾರೆ ಸಂಪೂರ್ಣ

ಹೆಣ್ಣು ಮಕ್ಕಳಲ್ಲಿರುವ ಪ್ರತಿಭೆಯನ್ನು ಮುಚ್ಚಿಡುವ ಕೀಳರಿಮೆಯ ಭಾವವನ್ನು ಮರೆಯಾಗಿಸುವುದು, ಆತ್ಮವಿಶ್ವಾಸ ತುಂಬುವುದು, ಸ್ವಾವಲಂಬಿಗಾಗುವಂತೆ ಅವರನ್ನು ಪ್ರೇರೇಪಿಸುವುದು ಈ ಯೋಜನೆಯ ಆದ್ಯ ಗುರಿ.

ಸೌಂದರ್ಯಳನ್ನು ಜೀವಂತವಾಗಿಟ್ಟಿರುವ ಅತ್ತಿಗೆ ನಿರ್ಮಲಾ!ಸೌಂದರ್ಯಳನ್ನು ಜೀವಂತವಾಗಿಟ್ಟಿರುವ ಅತ್ತಿಗೆ ನಿರ್ಮಲಾ!

ಮೂಲತಃ ಕಾರ್ಕಳದವರಾದ ಶಾಂತಲಾ ದಾಮ್ಲೆ, ಇಂಜಿನಿಯರಿಂಗ್ ಪದವಿ ಪಡೆದಿದ್ದು ದಾವಣಗೆರೆಯಲ್ಲಿ. ನಂತರ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರಲ್ಲಿ ಎಂಬಿಎ ಪದವಿ ಪಡೆದ ದಾಮ್ಲೆ ಐಟಿ ಕ್ಷೇತ್ರದಲ್ಲಿ ಉತ್ತಮ ಕೆಲಸವಿದ್ದರೂ ರಾಜಕೀಯದಲ್ಲಿ ಆಸಕ್ತಿ ತಳೆದು ಭಾರತಕ್ಕೆ ಹಿಂದಿರುಗಿದರು. ಅದೇ ಸಮಯದಲ್ಲಿನಡೆಯುತ್ತಿದ್ದ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ಪ್ರೇರಣೆ ಪಡೆದು ಲೋಕಸತ್ತಾ ಪಕ್ಷ ಸೇರಿದರು. ಪ್ರಸ್ತುತ ಆಮ್ ಆದ್ಮಿ ಪಕ್ಷದ ಬೆಂಗಳೂರು ಮುಖ್ಯಸ್ಥೆಯಾಗಿರುವ ಶಾಂತಲಾ ದಾಮ್ಲೆಯವರು ರಾಜಕೀಯದಾಚೆಯ ತಮ್ಮ ಸಾಮಾಜಿಕ ಕಳಕಳಿ ಮತ್ತು ಅವಳ ಹೆಜ್ಜೆಯ ಆಶಯಗಳ ಕುರಿತು 'ಒನ್ ಇಂಡಿಯಾ' ಜೊತೆ ಮಾತನಾಡಿದ್ದಾರೆ.

ಆಟದ ಮೈದಾನದಲ್ಲಿ ಹುಡುಗಿಯರು ಕಾಣೋದಿಲ್ಲ ಯಾಕೆ?

ಆಟದ ಮೈದಾನದಲ್ಲಿ ಹುಡುಗಿಯರು ಕಾಣೋದಿಲ್ಲ ಯಾಕೆ?

"ಚಿಕ್ಕ ವಯಸ್ಸಿನಿಂದಲೂ ನನ್ನ ಕಾಡ್ತಾ ಇದ್ದ ಪ್ರಶ್ನೆ ಅಂದ್ರೆ ಹೆಣ್ಣು ಮತ್ತು ಗಂಡಿನ ನಡುವೆ ಯಾಕೀ ತಾರತಮ್ಯ? ಅಂತ. ಗಂಡಿಗೆ ಸರಿಸಮವಾಗಿ ನಿಲ್ಲುವ ಎಲ್ಲಾ ಅರ್ಹತೆ, ಎಲ್ಲಾ ಪ್ರತಿಭೆ ಇದ್ದರೂ ಅವರೊಂದಿಗೆ ಹೆಜ್ಜೆ ಹಾಕೋಕೆ ಮಹಿಳೆಯರು ಹಿಂಜರಿಯೋದು ಯಾಕೆ? ಒಂದು ಆಟದ ಮೈದಾನವನ್ನೇ ತೆಗೆದುಕೊಳ್ಳಿ. ಆ ಮೈದಾನದಲ್ಲಿ ಹುಡುಗೀರು ಆಟ ಆಡೋದು ಕಾಣೋದೇ ಅಪರೂಪ. ಅಕಸ್ಮಾತ್ ಆಟ ಆಡ್ತಾ ಇದ್ರೂ ಆ ಮೈದಾನಕ್ಕೆ ಒಂದಷ್ಟು ಹುಡುಗರು ಬಂದ್ರೆ ಮೈದಾನಾನ ಹುಡುಗರಿಗೇ ಬಿಟ್ಟು ತಾವು ಹೊರಟುಬಿಡ್ತಾರೆ. ನೀನು ಮನೆ ಒಳಗೇ ಆಡ್ಕೋ ಬಾ ಅಂತ ಅಮ್ಮಂದಿರೂ ಹೆಣ್ಣು ಮಕ್ಕಳನ್ನ ಮನೆ ಒಳಗೆ ಕರೆದುಬಿಡ್ತಾರೆ. ಅಲ್ಲಿಂದಲೇ ಶುರು ಹೆಣ್ಣು ಮಕ್ಕಳಲ್ಲಿ ಹಿಂಜರಿಕೆ, ಕೀಳರಿಮೆ ಹುಟ್ಟೋಕೆ. ಎಲ್ಲಿಯವರೆಗೆ ಹುಡುಗಿಯರು ಮೈದಾನಕ್ಕಿಳಿದು ಆಟ ಆಡೋದಿಲ್ವೋ, ಅಲ್ಲಿಯವರೆಗೂ ಅವರು ಈ ಸಮಾಜದಲ್ಲಿ ಒಂದು ಉನ್ನತ ಸ್ಥಾನ ಪಡೆಯೋದು ಕಷ್ಟವೇ"

ಎಲ್ಲೆಲ್ಲೂ ಇರಲಿ ಹೆಣ್ಣಿನ ಹೆಜ್ಜೆ

ಎಲ್ಲೆಲ್ಲೂ ಇರಲಿ ಹೆಣ್ಣಿನ ಹೆಜ್ಜೆ

"ಸಮಾನತೆ ಬೇಕು ಅನ್ನೋದು ಕೇವಲ ಕನಸಾದರೆ ಸಾಲದು. ಅದು ನನಸಾಗೋಕೆ ಹೆಣ್ಣು ಮಕ್ಕಳ ಹೆಜ್ಜೆ ಎಲ್ಲಾಕಡೆಯಲ್ಲೂ ಇರ್ಬೇಕು. ಗಂಡುಮಕ್ಕಳು ಹೆಜ್ಜೆ ಇಡದ ಜಾಗದಲ್ಲೂ ಹೆಣ್ಣುಮಕ್ಕಳು ಹೆಜ್ಜೆ ಇಡಬೇಕು ಅನ್ನೋ ಕಾರಣಕ್ಕೆ 'ಅವಳ ಹೆಜ್ಜೆ' ಆರಂಭಿಸಿದ್ದು. ಬೆಂಗಳೂರಿನಂಥ ನಗರದಲ್ಲಿ ನಮ್ಮ ಅಕ್ಕಪಕ್ಕದ ಮನೆಯಲ್ಲೇ ಸಾಧಕಿಯರಿದ್ದರೂ ಅದು ನಮಗೇ ಗೊತ್ತಿರೋಲ್ಲ. ವಿಜ್ಞಾನಿ ಆಗ್ಬೇಕು ಅಂತ ಕನಸು ಕಾಣೋ ಒಬ್ಬ ಹುಡುಗಿಗೆ ತನ್ನ ಪಕ್ಕದ ಮನೆಯಲ್ಲಿರುವ ವಿಜ್ಞಾನಿಯೇ ಆದರ್ಶವಾಗಬಹುದು. ಆದರೆ ಅಲ್ಲೊಬ್ಬರು ವಿಜ್ಞಾನಿ ಇದ್ದಾರೆ ಅನ್ನೋದನ್ನ ಪರಿಚಯಿಸುವ ಕೆಲಸ ನಾವು ಮಾಡಬೇಕಿದೆ. ಅದಕ್ಕಾಗಿಯೇ ಅವಳ ಹೆಜ್ಜೆಯ ಮೂಲಕ ಭಾವಿ ಸಾಧಕಿಯರಿಗೆ ಆದರ್ಶವಾಗಬಲ್ಲ ಹಾಲಿ ಸಾಧಕಿಯರ ಪರಿಚಯಮಾಡಲಾಗುತ್ತಿದೆ.

ಏನಿದು ಅವಳ ಹೆಜ್ಜೆ?

ಏನಿದು ಅವಳ ಹೆಜ್ಜೆ?

"ಅವಳ ಹೆಜ್ಜೆ ಅನ್ನೋದು ಒಂದು ಯೂಟ್ಯೂಬ್ ಚಾನೆಲ್. 1000 ಕ್ಕೂ ಹೆಚ್ಚು ಸಾಧಕಿಯರನ್ನು ಪರಿಚಯಿಸುವ ಗುರಿ ಇಟ್ಟುಕೊಂಡಿರುವ ಅವಳ ಹೆಜ್ಜೆ ಈಗಾಗಲೇ ಹಲವು ಸಾಧಕಿಯರ ಆದರ್ಶವನ್ನು ಯುವ ಜನಾಂಗಕ್ಕೆ ಪರಿಚಯಿಸಿದೆ. ಐಎಎಸ್ ಆಫೀಸರ್, ಲಾಯರ್, ವಿಜ್ಞಾನಿ ಹೀಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದರೂ ಹೆಸರಾಗದ ಮಹಿಳೆಯರನ್ನು ಅವಳ ಹೆಜ್ಜೆಯಲ್ಲಿ ಸಂದರ್ಶನ ಮಾಡಿದ್ದೇವೆ."

ಇಡಿ ದಿಟ್ಟ ಹೆಜ್ಜೆ

ಇಡಿ ದಿಟ್ಟ ಹೆಜ್ಜೆ

"ಇದರೊಂದಿಗೆ ಕಾಲೇಜ್ ಗಳಲ್ಲಿ 'ಇಡಿ ದಿಟ್ಟ ಹೆಜ್ಜೆ(dare to explore)' ಎಂಬ ತರಬೇತಿ ಕಾರ್ಯಾಗಾರಗಳನ್ನೂ ಮಾಡಿ ವಿದ್ಯಾರ್ಥಿನಿಯರು ಮುಂದೆ ಸ್ವಾವಲಂಬಿಗಳಾಗುವುದಕ್ಕೆ ಪ್ರೇರೇಪಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಸಾಧನೆಯ ಹಾದಿಯಲ್ಲಿ ಬರುವ ಅಡೆ-ತಡೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ಅವರಿಗೆ ತಿಳಿಸಿಕೊಡಲಾಗುತ್ತದೆ. ಎಸ್ ಎಸ್ ಎಲ್ ಸಿ ಇರಬಹುದು ಅಥವಾ ಪಿಯುಸಿ ಪರೀಕ್ಷೆಯಲ್ಲಿರಬಹುದು, ಬಾಲಕಿಯರದೇ ಮೇಲುಗೈ ಎಂಬುದು ನಿಜವಾದರೂ ನಂತರ ಉದ್ಯೋಗ ಕ್ಷೇತ್ರದಲ್ಲಿ ಮಾತ್ರ ಉನ್ನತ ಹುದ್ದೆಗಳಲ್ಲಿ ಮಹಿಳೆಯರು ಕಾಣುವುದೇ ಅಪರೂಪ. ಇದಕ್ಕೆಲ್ಲ ಕಾರಣ ಆತ್ಮವಿಶ್ವಾಸದ ಕೊರತೆ. ಅದನ್ನು ಬಿತ್ತುವ ಕೆಲಸ ತುರ್ತಾಗಿ ಆಗಬೇಕೆಂಬುದನ್ನು ಅರಿತು ಈ ತರಬೇತಿ ಕಾರ್ಯಾಗಾರ ಮಾಡುತ್ತಿದ್ದೇವೆ."

ರಾಜಕೀಯದಾಚೆ ಸಮಾಜ ಸೇವೆ ಮಾಡುವ ಆಸೆ

ರಾಜಕೀಯದಾಚೆ ಸಮಾಜ ಸೇವೆ ಮಾಡುವ ಆಸೆ

"ನಾನು ಅಮೆರಿಕದ ವರ್ಜಿನಿಯಾ ಟೆಕ್ ವಿಶ್ವವಿದ್ಯಾಲಯಕ್ಕೆ ಎಂಬಿಎ ಓದುವುದಕ್ಕೆಂದು ಹೋದಾಗ ಅಲ್ಲಿನ ಮಹಿಳೆಯರು ಅವಕಾಶಗಳನ್ನು ಬಳಸಿಕೊಳ್ಳುವುದು, ಅಥವಾ ಯಾವುದೇ ಸೌಲಭ್ಯಕ್ಕಾಗಿ ಮಹಿಳೆಯರೇ ಖುದ್ದು ಹೋರಾಡುವುದನ್ನು ನೋಡಿದ್ದೆ. ಅದಕ್ಕೆಂದೇ ಭಾರತಕ್ಕೆ ಹಿಂದುರುಗಿ ನಮ್ಮ ದೇಶದ, ಅದರಲ್ಲೂ ಕರ್ನಾಟಕದ ಮಹಿಳೆಯರಿಗಾಗಿ ಏನಾದರೂ ಮಾಡಬೇಕು ಅನ್ನೋ ತುಡಿತ ಶುರುವಾಯ್ತು. ಅದೇ ಸಂದರ್ಭದಲ್ಲಿ ಕಾಕತಾಳೀಯ ಅನ್ನೋ ಹಾಗೆ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟ ನಡೀತಾ ಇತ್ತು. ಭಾರತಕ್ಕೆ ಬಂದು ಲೋಕಸತ್ತಾ ಪಕ್ಷಕ್ಕೆ ಸೇರಿ ಲೋಕಸಭಾ ಚುನಾವಣೆಯನ್ನೂ ಸ್ಪರ್ಧಿಸಿದ್ದೆ. ಸದ್ಯಕ್ಕೆ ಆಮ್ ಆದ್ಮಿ ಪಕ್ಷದಲ್ಲಿ ಬೆಂಗಳೂರಿನ ಜವಾಬ್ದಾರಿ ಹೊತ್ತಿದ್ದೀನಿ. ರಾಜಕೀಯದಾಚೆಯೂ ಸಮಾಜ ಸೇವೆ ಮಾಡುವ ಆಸೆ ಇದೆ. ಅದರ ಫಲವೇ ಅವಳ ಹೆಜ್ಜೆ"

ಆದರ್ಶ ಮಹಿಳೆಯರ

ಆದರ್ಶ ಮಹಿಳೆಯರ

"ಅವಳ ಹೆಜ್ಜೆ ಇದೀಗ #meetmyrolemodel ಎಂಬ ವಿಡಿಯೋ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ಯುವತಿಯರು ತಮ್ಮ ಸುತ್ತ ಮುತ್ತ ಇರುವ ಆದರ್ಶ ಮಹಿಳೆಯರ ಕುರಿತು ಮಾತನಾಡಿದ 3 ನಿಮಿಷಗಳ ವಿಡಿಯೋವೊಂದನ್ನು ನಮಗೆ ಕಳಿಸಿದರೆ, ಅವುಗಳಲ್ಲಿ ಅತ್ಯುತ್ತಮವಾದುದ್ದನ್ನು ಆಯ್ದು ಬಹುಮಾನ ನೀಡುತ್ತೇವೆ. ನಮ್ಮ ಅವಳ ಹೆಜ್ಜೆಯ ಸಾಧಕರ ಪಟ್ಟಿಯಲ್ಲೂ ಆಯ್ದ ಕೆಲವರನ್ನು ಸೇರಿಸುತ್ತೇವೆ. ಮಹಿಳೆಯರಿಗೆ ಪ್ರೇರಣೆ ನೀಡುವ ಪುಟ್ಟ ಪ್ರಯತ್ನ ಇದು."

ಇಡೀ ದೇಶಕ್ಕಾಗಿ ಮಹಿಳೆ ಸ್ವಾವಲಂಬಿಯಾಗಬೇಕಿದೆ.

ಇಡೀ ದೇಶಕ್ಕಾಗಿ ಮಹಿಳೆ ಸ್ವಾವಲಂಬಿಯಾಗಬೇಕಿದೆ.

"ಪ್ರತಿ ಮಹಿಳೆಯೂ ವಿದ್ಯಾವಂತೆಯಾಗಬೇಕು, ತನ್ನಲ್ಲಿರುವ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು, ಸ್ವಾವಲಂಬಿಯಾಗಬೇಕು. ಅದು ಕೇವಲ ಅವಳೊಬ್ಬಳಿಗಾಗಿ, ಅಥವಾ ಅವಳೊಬ್ಬಳ ಕುಟುಂಬಕ್ಕಾಗಿ ಅಲ್ಲ, ಆಕೆಯಿಂದ ದೇಶದ ಬದಲಾವಣೆಯೂ ಸಾಧ್ಯ. ಆದ್ದರಿಂದ ಕೀಳರಿಮೆ, ಭಯ, ಆತ್ಮವಿಶ್ವಾಸದ ಕೊರತೆ ಎಲ್ಲವನ್ನೂ ಬದಿಗೊತ್ತಿ ಪ್ರತಿಮಹಿಳೆಯೂ ದಿಟ್ಟ ಹೆಜ್ಜೆ ಇಡಬೇಕಿದೆ. ಅದಕ್ಕಾಗಿ ಅವಳ ಹೆಜ್ಜೆ ಸದಾ ನಿಮ್ಮೊಂದಿಗಿರುತ್ತದೆ."

English summary
Shanthala Damle an AAP leader from Bengaluru has started an initial Avala Hejje to introduce women achievers of Karnataka. She is a founder-CEO of Avala Hejje. She shared her views and concerns towards women empowerment in her interview with Oneindia Kannada. She is our women achiever of this week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X