ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 22ರಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶಂಕರನಾಗ್ ನಾಟಕೋತ್ಸವ

|
Google Oneindia Kannada News

ಬೆಂಗಳೂರು, ಮೇ 16: ರಂಗಭೂಮಿಯಲ್ಲಿ ಸದಾ ಚಟುವಟಿಕೆಯಿಂದ ಕ್ರಿಯಾಶೀಲವಾಗಿರುವ ರಂಗಪಯಣ ಹಾಗೂ ಸಾತ್ವಿಕ ರಂಗ ತಂಡಗಳು ಮತ್ತೊಮ್ಮೆ ತಮ್ಮ ನೆಚ್ಚಿನ ಕನಸಾದ ಶಂಕರ್ ನಾಗ್ ನಾಟಕೋತ್ಸವವನ್ನು ಹೊತ್ತು ನಿಮ್ಮ ಮುಂದೆ ಬಂದಿವೆ.

ನಾಗರ ಕಟ್ಟೆ ಎಂಬ ವಿಶಿಷ್ಟ ಹರಟೆ ಕಟ್ಟೆ ಸಂವಾದ, ಶಂಕರ್ ನಾಗ ಅವರ ರಂಗ, ಸಿನಿ ಹಾಗೂ ಸಾಮಾಜಿಕ ಕೊಡುಗೆಗಳ ಬಗ್ಗೆ ಆಪ್ತವಲಯದಿಂದ ಪರಿಚಯ ಮಾಡಿಸಲಾಗುತ್ತದೆ. ಕಳೆದ ಬಾರಿ ನಾಲ್ಕು ನಾಟಕಗಳು ಹಗೂ ಸಿನಿಮಾ ನಿರ್ದೇಶಕರೊಡನೆ ಸಂವಾದ ಕಾರ್ಯಕ್ರಮವಿತ್ತು.

ಪ್ರಭಾತ್ ಕಲಾಪೂರ್ಣಿಮಾದಲ್ಲಿ 'ನನ್ನ ಕಥೆ' ಏಕಾಂಕ ನಾಟಕ ಪ್ರಭಾತ್ ಕಲಾಪೂರ್ಣಿಮಾದಲ್ಲಿ 'ನನ್ನ ಕಥೆ' ಏಕಾಂಕ ನಾಟಕ

ಈ ಬಾರಿ ಕೂಡಾ ನಾಟಕಗಳು ಮಾತ್ರವಲ್ಲದೆ, ಸಿನಿಮಾ, ಸಾಹಿತ್ಯ, ಸಾಮಾಜಿಕ ಸಂವಾದಗಳು ಹಾಗೂ ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನೊಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಶಂಕರ್ ನಾಗ್ ಅವರ ಕಾಣಿಕೆ ಹಿರಿದಾದ್ದು, ಅವರ ನೆನಪಲ್ಲಿ ಅವರ ಕೆಲಸಗಳನ್ನು ಯುವ ತಲೆಮಾರಿಗೆ ತಲುಪಿಸುವ ಜವಾಬ್ದಾರಿಯಲ್ಲಿ ನಮ್ಮ ಜೊತೆಗೂಡಿ ಎಂದು ಆಯೋಜಕರಾದ ರಾಜಗುರು ಹಾಗೂ ನಯನಾ ಸೂಡ ಅವರು ಕೇಳಿಕೊಂಡಿದ್ದಾರೆ.

22.05.2019: ಮಿಂಚಿನ ಓಟ

22.05.2019: ಮಿಂಚಿನ ಓಟ

6.30ಕ್ಕೆ ಸಭಾ ಕಾರ್ಯಕ್ರಮ
ಅತಿಥಿಗಳು: ಚಿನ್ನೇಗೌಡರು, ಬಿ. ಸುರೇಶ್, ಸುಂದರ್ ರಾಜ್, ಎಂ.ಕೆ ಮಂಜಯ್ಯ, ನಾಗರಾಜ ಮೂರ್ತಿ

ನಾಟಕ: ವೇಷ-ರಂಗವರ್ತುಲ ತಂಡದಿಂದ ಪ್ರಸ್ತುತಿ
ಸ್ಥಳ: ಸಂಸ ಬಯಲು ರಂಗಮಂದಿರ
ನಿರೂಪಣೆ: ಶ್ರೀನಿವಾಸ ಜಿ ಕಪ್ಪಣ್ಣ

ಶಂಕರ್ ನಾಗ ಸಿನಿಮಾಗಳ ಅವಲೋಕನ

ಶಂಕರ್ ನಾಗ ಸಿನಿಮಾಗಳ ಅವಲೋಕನ

ಸಂಜೆ 5 ರಿಂದ 6ರವರೆಗೆ : ಶಂಕರ್ ನಾಗ ಸಿನಿಮಾಗಳ ಅವಲೋಕನ
ಎನ್ ಎಸ್ ಶಂಕರ್, ಗಡ್ಡ ವಿಜಿ, ಸತ್ಯಪ್ರಕಾಶ್
6.15 ರಿಂದ 7.15 : ನಾಗರಕಟ್ಟೆಯಲ್ಲಿ
ನಮ್ಮೊಂದಿಗೆ : ರಮೇಶ್ ಪಂಡಿತ್, ಬಿ ಗಣಪತಿ
ನಿರೂಪಣೆ: ಪ್ರಭಾಕರ್
7.30ಕ್ಕೆ ನಾಟಕ: ರಂಗಪಯಣ ತಂಡ ಅಭಿನಯಿಸುವ ಗುಲಾಬಿ ಗ್ಯಾಂಗ್ ಭಾಗ 2, ಸಂಸ ರಂಗಮಂದಿರ

24.05.2019 : ಒಂದು ಮುತ್ತಿನ ಕಥೆ

24.05.2019 : ಒಂದು ಮುತ್ತಿನ ಕಥೆ

ಸಂಜೆ 5 ಕ್ಕೆ ಪೂರ್ಣಚಂದ್ರ ತೇಜಸ್ವಿ ಕಥೆಗಳ ಓದು
ಜಯತೀರ್ಥ, ಕವಿರಾಜ್, ಮೌನೇಶ್ ಬಡಿಗೇರ್
6.15ಕ್ಕೆ ನಾಗರಕಟ್ಟೆ: ಸದಾಶಿವ ಬೈರಿ, ಏಳುಮಲೈ
7.30ಕ್ಕೆ : ಭೂಮಿ -ರಂಗಪಯಣ, ರವೀಂದ್ರ ಕಲಾಕ್ಷೇತ್ರ

25.05.2019: ಅಂತಿಮ ಘಟ್ಟ

25.05.2019: ಅಂತಿಮ ಘಟ್ಟ

5ಕ್ಕೆ ಸಂವಾದ : ಮಹಿಳೆ ಮತ್ತು ರಂಗಭೂಮಿ
ಹನುಮಕ್ಕ ಡಿ ಮರಿಯಮ್ಮನಹಳ್ಳಿ, ಆಶಾರಾಣು, ಹೆಲೆನ್ ಮೈಸೂರು, ಬಿಂದು ರಕ್ಷಿಧಿ
6.30ಕ್ಕೆ ಸಮಾರೋಪ ಸಮಾರಂಭ
ಅತಿಥಿಗಳು: ಗಿರಿಜಾ ಲೋಕೇಶ್, ಕೆಎಂ ಜಾನಕಿ, ಬಸವಲಿಂಗಯ್ಯ, ಅವಿನಾಶ್ ಯಳಂದೂರ್, ಥ್ರಿಲ್ಲರ್ ಮಂಜು

ಇದಲ್ಲದೆ, ಶಂಕರ್ ನಾಗ್ ಪ್ರಶಸ್ತಿಗಳ ವಿತರಣೆ
ಶಾಂತಮ್, ವೀರಣ್ಣ ಮಡಿವಾಳರ್, ಪೋತಲಯ್ಯ, ಆಟೋರಾಜ ಉಪಸ್ಥಿತಿ.
ನಾಟಕ: 55 ನಿಮಿಷದ ಒಂದು ಪ್ರೇಮ ಕಥೆ, ಸಾತ್ವಿಕ ತಂಡ, ರವೀಂದ್ರ ಕಲಾಕ್ಷೇತ್ರ, ನಿರೂಪಣೆ: ನಯನ ಜೆ ಸೂಡ.

English summary
Rangapayana and Sathvika troup have organised Shankarnag festival from May 22 to 25,2019 at Ravindra Kalakashetra, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X