ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾನವ ಕಂಪ್ಯೂಟರ್ ಶಕುಂತಲಾಗೆ ಗೂಗಲ್ ನಮನ

By Mahesh
|
Google Oneindia Kannada News

ಬೆಂಗಳೂರು, ನ.4: ಖ್ಯಾತ ಗಣಿತಜ್ಞೆ, ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿದ್ದ ದಿವಂಗತ ಶಕುಂತಲಾ ದೇವಿ ಅವರ ಜನ್ಮದಿನದ ಅಂಗವಾಗಿ ಇಂದು ಗೂಗಲ್ ಸಂಸ್ಥೆ ಡೂಡಲ್ ಮೂಲಕ ನಮನ ಸಲ್ಲಿಸಿದೆ. ಶಕುಂತಲಾ ದೇವಿ ಅವರ 84ನೇ ಹುಟ್ಟುಹಬ್ಬದ ಅಂಗವಾಗಿ ಕ್ಯಾಲ್ಕುಲೇಟರ್ ಮಾದರಿ ಅನಿಮೇಟೆಡ್ ಡೂಡಲ್ ಗೂಗಲ್ ಸರ್ಚ್ ಇಂಜಿನ್ ಪರದೆಯಲ್ಲಿ ಕಾಣಿಸುತ್ತಿದೆ.

ಮಾನವ ಕಂಪ್ಯೂಟರ್ ಶಕುಂತಲಾ ದೇವಿ ಅವರ ಚಿತ್ರದ ಜತೆಗೆ ಕಾಲ್ಕುಲೇಟರ್ ಸಂಖ್ಯೆಗಳಲ್ಲಿ ಗೂಗಲ್ ಎಂದು ಅನಿಮೇಷನ್ ಬರಲಿದೆ. 1939, ನವೆಂಬರ್ 4 ರಂದು ಬೆಂಗಳೂರಿನಲ್ಲಿ ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಶಕುಂತಲಾ ದೇವಿ ಜನಿಸಿದ್ದರು. ದೇಗುಲದ ಅರ್ಚಕ ವೃತ್ತಿಗೆ ಸೇರದ ಅವರ ತಂದೆ ಸರ್ಕಸ್ ಸೇರಿದರು. ಮೂರು ವರ್ಷ ವಯಸ್ಸಿನಲ್ಲೇ ಶಕುಂತಲಾ ಅವರು ಇಸ್ಪೀಟ್ ಕಾರ್ಡ್ ಟ್ರಿಕ್ ಗೆ ಸಹಾಯಕರಾದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಆರನೇ ವರ್ಷದಲ್ಲೇ ತನ್ನ ಬುದ್ಧಿಮತ್ತೆಯಿಂದ ಎಲ್ಲರನ್ನು ಸೆಳೆದ ಶಕುಂತಲಾ ಅವರು ಅಂಕಗಣಿತ, ಬೀಜ ಗಣಿತದ ಕಠಿಣ ಲೆಕ್ಕಗಳನ್ನು ಸುಲಭವಾಗಿ ಪರಿಹರಿಸಿದರು.

ಮಾನವ ಕಂಪ್ಯೂಟರ್ ಎಂಬುದಾಗಿ ಹೆಸರು ಗಳಿಸಿರುವ ಬಾರತೀಯ ಗಣಿತ ತಜ್ಞೆ ಶಕುಂತಲಾ ದೇವಿ ಅವರು 1977 ರಲ್ಲಿ ಇವರು 201 ಅಂಕಿಗಳ 23 ನೇ ವರ್ಗಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಮಾಡಲು ಕಂಪ್ಯೂಟರ್ ಯುನಿವ್ಯಾಕ್ 1108 ಒಂದು ನಿಮಿಷಕ್ಕೂ ಹೆಚ್ಚು ಸಮಯ ತೆಗೆದುಕೊಂಡಿತು.

Shakuntala Devi's 84th birth anniversary marked by Google doodle

1980ರಲ್ಲಿ ಲಂಡನ್ನಿನಲ್ಲಿ 13 ಅಂಕಿಗಳಿದ್ದ ಸಂಖ್ಯೆ(7,686,369,774,870 x 2,465,099,745,779 )ಗಳ ಗುಣಾಕರವನ್ನು ಮಾಡಿ ಕೇವಲ 28 ಸೆಕೆಂಡುಗಳಲ್ಲಿ ಉತ್ತರ ನೀಡಿದ್ದರು. ಈ ಗಣಿತ ವಿಕ್ರಮ 1995ರ ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಯಿತು. ಗಿನ್ನಿಸ್ ದಾಖಲೆ ಹೊಂದಿದ್ದ ಶಕುಂತಲಾ ಅವರು ಗಣಿತದ ಅಂಕ ವಿನೋದ,ಲೆಕ್ಕಾಚಾರ, ಅಡುಗೆ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.

Puzzles to Puzzle You, Awaken the Genius in Your Child, Book of Numbers, In the Wonderland of Numbers, Perfect Murder and Astrology for You ಮುಂತಾದ ಪುಸ್ತಕಗಳನ್ನು ಹೆಸರಿಸಬಹುದು. ಶಕುಂತಲಾ ದೇವಿ ಅವರು ಎಲ್ಲರಂತೆ ಶಾಲೆ ಹೋಗಿ ಓದು ಕಲಿತವರಲ್ಲ ಎಂಬುದು ವಿಶೇಷ. ಭಾರತದ ಹೆಮ್ಮೆಯ ಪುತ್ರಿ ಶಕುಂತಲಾ ದೇವಿ ಅವರು ಬೆಂಗಳೂರಿನ ಬಸವನಗುಡಿಯ ಸ್ವಗೃಹದಲ್ಲಿ ಭಾನುವಾರ(ಏ.21, 2013) ಇಹಲೋಕ ಲೆಕ್ಕಾಚಾರ ಮುಗಿಸಿದರು.

ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ. 1998ರಿಂದ ಸುಮಾರು 900ಕ್ಕೂ ಹೆಚ್ಚು ಡೂಡ್ಲ್ ಗಳನ್ನು ರಚಿಸಿ ಪ್ರದರ್ಶಿಸಲಾಗಿದೆ. 2011ರಲ್ಲಿ 150 ಡೂಡ್ಲ್ ಗಳು ಗೂಗಲ್ ಮುಖ್ಯಪುಟದಲ್ಲಿ ರಾರಾಜಿಸಿದೆ.

ವಿದ್ಯಾರ್ಥಿಗಳಿಗೆ ಅನೇಕ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬಂದಿರುವ ಗೂಗಲ್, ಖ್ಯಾತ ನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸುತ್ತದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.

English summary
Child prodigy Shakuntala Devi is the inspiration behind Monday's Google doodle. The doodle celebrates her 84th birthday through an animated doodle that features a calculator screen with a digital sketch of her, literally representing her "human computer" title.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X