ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಶಕ್ತಿ ವೇದಾ ಭಾಷ್ಯಾಜ್ಯ ಮಹಾಯಜ್ಞ

By Mahesh
|
Google Oneindia Kannada News

ಬೆಂಗಳೂರು, ಫೆ.18: ಶಕ್ತಿವೇದಾ ವೆಲ್ ನೆಸ್ ಮಿಷನ್, ಜಾಗತಿಕ ಸಾಮಾಜಿಕ ಸೇವಾ ಟ್ರಸ್ಟ್ ಆಗಿದ್ದು, ಪ್ರಸ್ತುತ ಶಕ್ತಿವೇದಾ ಭಾಷ್ಯಾಜ್ಯ ಮಹಾಯಜ್ಞದ ನಾಲ್ಕನೇ ಸರಣಿಯನ್ನು ಬೆಂಗಳೂರಿನ ಜಿಗಣಿ ಸಮೀಪದ ಬೊಮ್ಮಂಡಹಳ್ಳಿಯಲ್ಲಿ ಆಯೋಜಿಸಲಿದೆ. ಮಹಾಯಜ್ಞ ಕಾರ್ಯಕ್ರಮವು ಫೆ.20 ರಿಂದ 23, 2014ರ ವರೆಗೂ ನಡೆಯಲಿದ್ದು, ಸಮಾಜದಲ್ಲಿನ ನಕಾರಾತ್ಮಕ ಧೋರಣೆ ಮತ್ತು ಭಾವನೆಗಳನ್ನು ತೊಡೆದುಹಾಕುವುದು ಈ ಮಹಾಯಜ್ಞದ ಉದ್ದೇಶವಾಗಿದೆ.

ಕರ್ನಾಟಕ ಸರ್ಕಾರದ ಗೌರವಾನ್ವಿತ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾಷ್ಯಾಜ್ಯ ಮಹಾ ಯಜ್ಞವನ್ನು ಫೆ. 19, 2014ರಂದು ಸಂಜೆ 6 ಗಂಟೆಗೆ ಉದ್ಘಾಟಿಸುವರು.

ಈ ಮಹಾಯಜ್ಞವು ಒಟ್ಟು 81 ಭಾಗಗಳ ಸರಣಿಯಾಗಿದ್ದು, ಸತತವಾಗಿ ಮೂರು ರಾತ್ರಿ ಮತ್ತು ನಾಲ್ಕು ಹಗಲುಗಳನ್ನು ಒಳಗೊಂಡು 81 ಗಂಟೆ ಕಾಲ ಅವಿರತವಾಗಿ ನಡೆಸಲಾಗುತ್ತದೆ. ಈ ಮಹಾಯಜ್ಞದ ಉದ್ದೇಶಗಳಲ್ಲಿ ಸಾಮಾಜಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಮುಖ್ಯತೆಗಳನ್ನು ಒಳಗೊಂಡ 81 ಪ್ರಮುಖ ವಿಷಯಗಳು ಸೇರಿವೆ. ಪ್ರತಿ ಗಂಟೆಯೂ ನಿರ್ದಿಷ್ಟ ಉದ್ದೇಶ, ಅಂಶಗಳಿಗೆ ವಿನಿಯೋಗಿಸಲಿದ್ದು, ಯಜ್ಞದ ಮೂಲಕ ಅದಕ್ಕೆ ಸಂಬಂಧಿತ ನಕಾರಾತ್ಮಕ ಅಂಶಗಳನ್ನು ನಿರ್ಮೂಲನೆ ಮಾಡಲಾಗುತ್ತದೆ.

ಶಕ್ತಿವೇದಾ ವೆಲ್ ‍ನೆಸ್ ಮಿಷನ್ ‍ನ ಸ್ಥಾಪಕ: ರಿಷಿದೇವ್ ನರೇಂದ್ರನ್ ‍ಜೀ ಅವರು, 'ಪ್ರಸ್ತುತ ಜಗತ್ತಿನಲ್ಲಿ ನಾವು ಅನೇಕ ನಕಾರಾತ್ಮಕ ಶಕ್ತಿಗಳಿಂದ ಸುತ್ತುವರಿದಿದ್ದೇವೆ. ಇದರಿಂದಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಭೂಜಗತ್ತಿಗೆ ಹೊಸ ಚೇತನ ನೀಡುವ ಮೂಲಕ ಒಟ್ಟಾರೆಯಾಗಿ ಸಕಾರಾತ್ಮಕ ಶಕ್ತಿಯನ್ನು ವಾತಾವರಣದಲ್ಲಿ ಮೂಡಿಸುವ ಅಗತ್ಯವಿದೆ. ಭಾಷ್ಯಾಜ್ಯ ಮಹಾಯಜ್ಞವು ಜಗತ್ತಿನಲ್ಲಿ ಸಕಾರಾತ್ಮಕ ಅಂಶಗಳನ್ನು ಸೃಷ್ಟಿಸುವ ಮೂಲಕ ಹೊಸ ಚೇತನ ಮೂಡಿಸುವ ನಿಟ್ಟಿನಲ್ಲಿ ನಮ್ಮದೊಂದು ಯತ್ನವಾಗಿದೆ' ಎಂದರು.

Bhaishajya Maha Yagam in Bangalore

ಭಾಷ್ಯಾಜ್ಯ ಮಹಾಯಜ್ಞ ಬಹುಮುಖಿಯಾದ, ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಒಳಗೊಂಡ ಯಜ್ಞವಾಗಿದ್ದು, ಶಕ್ತಿವೇದಾ ವೆಲ್ ‍ನೆಸ್ ಮಿಷನ್ ಜಗತ್ತಿನಲ್ಲಿ ಆರೋಗ್ಯಕರವಾದ ಸಕಾರಾತ್ಮಕ ದೃಷ್ಟಿಕೋನ ಮೂಡಿಸಲು ಆಯೋಜಿಸುತ್ತಿದೆ. ಈ ಮೂಲಕ ಜಗತ್ತಿನ ಎಲ್ಲ ಜೀವಸಂತುಲಗಳಿಗೆ ಒಳಿತು ಮಾಡುವುದು ಉದ್ದೇಶ. ಮಹಾಯಜ್ಞ ಜ್ಯೋತಿ 2012ರಲ್ಲಿ ಆರಂಭವಾಗಿದ್ದು, ಮೂಲಭೂತವಾಗಿ ಅಲ್ಲಿ ಯಜ್ಞಚಾರಣ ಕಿಡಿ ಹೊತ್ತಿಸಲಾಗಿದೆ. ಧಾರ್ಮಿಕ ಜ್ಯೋತಿಯನ್ನು ಪ್ರತಿ ಯಜ್ಞದ ನಂತರ ಉಳಿಸಿಕೊಂಡು, ತರಲಾಗಿದೆ.

ಶಕ್ತಿವೇದಾ ವೆಲ್ ನೆಸ್ ಮಿಷನ್ ನ ಮಾತಾ ಡಾ. ಶ್ರೀಪ್ರಿಯಾ ಅವರು, ಬೆಂಗಳೂರಿನಲ್ಲಿ ಮಹಾಯಜ್ಞದ ನಾಲ್ಕನೇ ಸರಣಿಯನ್ನು ಆಯೋಜಿಸಲು ನಮಗೆ ತುಂಬಾ ಸಂತಸವಾಗಿದೆ. ಇದು, ಸಾಮಾನ್ಯ ಜನರಿಗೆ ಯಜ್ಞದಲ್ಲಿ ಭಾಗವಹಿಸಲು ಮತ್ತು ಧಾರ್ಮಿಕ ಕ್ರಿಯೆಗಳ ಮೂಲಕ ದೋಷ ಪರಿಹಾರ ಮಾಡಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ನಾವು ಜನರು, ವಿಜ್ಞಾನಿಗಳು, ಪರಿಸರವಾದಿಗಳು ಶಕ್ತಿ ಸಂಚಲನ, ಪ್ರಕೃತಿ ಸೇರಿ ವ್ಯಕ್ತಿಗತ ಆಸಕ್ತಿ ಆಧರಿಸಿ ಸಂಶೋಧನೆ ನಡೆಸಲು ಬೆಂಬಲಿಸುತ್ತೇವೆ' ಎಂದರು.

ಶಕ್ತಿವೇದಾ ವೆಲ್ ‍ನೆಸ್ ಮಿಷನ್ ಕುರಿತು: ಶಕ್ತಿವೇದಾ ವೆಲ್ ‍ನೆಸ್ ಮಿಷನ್ ಒಂದು ಧಾರ್ಮಿಕ ಉದ್ದೇಶದ ಸಂಸ್ಥೆಯಾಗಿದ್ದು, ಪೂಜ್ಯ ರಿಷಿದೇವ್ ಶ್ರೀ ನರೇಂದ್ರನ್‍ಜೀ ಅವರು ಇದನ್ನು ಸ್ಥಾಪಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಜಗತ್ತಿನಾದ್ಯಂತ ನಿಜವಾದ ಧಾರ್ಮಿಕ ಜ್ಞಾನ, ಚಿಂತೆನಯನ್ನು ಪ್ರಸರಿಸುವುದು ಇದರ ಉದ್ದೇಶ.

ಶಕ್ತಿವೇದಾ ವೆಲ್ ‍ನೆಸ್ ಮಿಷನ್ ತನ್ನ ಸಂಶೋಧನಾ ಕ್ರಮಗಳಿಂದ ವೈಜ್ಞಾನಿಕವಾಗಿದ್ದು, ಧಾರ್ಮಿಕ ಕ್ರಿಯೆಗಳ ಪ್ರಗತಿ ಚುರುಕುಗೊಳ್ಳುವಂತೆ ಅನೇಕ ತಂತ್ರಗಳನ್ನು ರೂಪಿಸಿದೆ. ಧಾರ್ಮಿಕವಾಗಿ ಶಾಂತಿ ಬಯಸುವವರಿಗೆ ನೆರವಾಗಲಿ ರಿಷಿದೇವ್ ಅವರು ವಿಭಿನ್ನ ಕ್ರಮಗಳನ್ನು ರೂಪಿಸಿದ್ದಾರೆ. ಇದರಲ್ಲಿ ಜೀವಯೋಗ ಸೇರಿದ್ದು, ಇದು ಮನುಷ್ಯನದ ದೇಹವನ್ನು ಹೆಚ್ಚುವರಿ ಶಕ್ತಿಗಳನ್ನು ಪಡೆದುಕೊಳ್ಳುವ ಮೂಲಕ ಶುದ್ಧಿಕರಿಸಲಿದೆ. ಇದು, ವ್ಯಕ್ತಿಯು ಸ್ವತಃ ತನ್ನನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ. ಹೆಚ್ಚಿನ ಮಾಹಿತಿಗಳಿಗೆ ಶಕ್ತಿ ವೇದಾ ಸಂಸ್ಥೆ ವೆಬ್ ತಾಣಕ್ಕೆ ಭೇಟಿ ಕೊಡಿ.

English summary
Shakthiveda wellness mission, a global social charitable trust, is organizing 4th series of Shakthiveda Bhaishajya Maha Yagam at Bommandahalli, Bangalore. The Maha Yagam will be performed from Feb 20th to Feb 23rd, 2014 with an objective to clean negativities and negative tendencies prevailing in our world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X