ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೃತ್ತಿ ಶಿಕ್ಷಣ ಶುಲ್ಕ ಹೆಚ್ಚಳದ ವಿರುದ್ಧ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಮೇ 28 : ವೃತ್ತಿ ಶಿಕ್ಷಣ ಶುಲ್ಕವನ್ನು ಶೇ.40 ರಷ್ಟು ಹೆಚ್ಚಳ ಮಾಡಿರುವ ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಎಸ್‌ಎಫ್‌ಐ ಕಾರ್ಯಕರ್ತರು ಗುರುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಿ, ಶುಲ್ಕ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಸರ್ಕಾರ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕಾಗಿ ಮಾಡಿದೆ. ಇಂಜಿನಿಯರಿಂಗ್ ಶುಲ್ಕವನ್ನು ಶೇ.40 ರಷ್ಟು ಹೆಚ್ಚಿಸಿದೆ ಮತ್ತು ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಶುಲ್ಕವನ್ನು ಶೇ.25 ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರಿಂದ ಹಣ ಉಳ್ಳವರಿಗೆ ಮಾತ್ರ ಉನ್ನತ ಶಿಕ್ಷಣ ಲಭ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. [ಇಂಜಿನಿಯರಿಂಗ್, ವೈದ್ಯ ಶಿಕ್ಷಣ ಶುಲ್ಕ ದುಬಾರಿ]

ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಯಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, 33 ಸಾವಿರದವರೆಗೆ ಇದ್ದ ಸರ್ಕಾರಿ ಕೋಟಾ ಸೀಟು 45 ಸಾವಿರ ಆಗಲಿದೆ. 37 ಸಾವಿರ ಇದ್ದ ಬೋಧನಾ ಶುಲ್ಕ 50 ಸಾವಿರವಾಗಲಿದೆ. ಈ ಶುಲ್ಕವನ್ನು ಎಲ್ಲರೂ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಶುಲ್ಕ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಭಾರತ ವಿದ್ಯಾರ್ಥಿ ಒಕ್ಕೂಟದ ಪ್ರತಿಭಟನೆ

ಭಾರತ ವಿದ್ಯಾರ್ಥಿ ಒಕ್ಕೂಟದ ಪ್ರತಿಭಟನೆ

ವೃತ್ತಿ ಶಿಕ್ಷಣ ಶುಲ್ಕವನ್ನು ಶೇ.40 ರಷ್ಟು ಹೆಚ್ಚಳ ಮಾಡಿರುವ ಸರ್ಕಾರದ ಕ್ರಮವನ್ನು ಎಸ್‌ಎಫ್‌ಐ ಕಾರ್ಯಕರ್ತರು ಖಂಡಿಸಿದ್ದಾರೆ. ಗುರುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಂದೆ ಪ್ರತಿಭಟನೆ ನಡೆಸಿ, ಶುಲ್ಕ ಕಡಿತಗೊಳಿಸಬೇಕು ಎಂದು ನೂರಾರು ಕಾರ್ಯಕರ್ತರು ಒತ್ತಾಯಿಸಿದರು.

ಬಡವರು ಶುಲ್ಕ ಕಟ್ಟಲು ಸಾಧ್ಯವಿಲ್ಲ

ಬಡವರು ಶುಲ್ಕ ಕಟ್ಟಲು ಸಾಧ್ಯವಿಲ್ಲ

ಶುಲ್ಕ ಹೆಚ್ಚಳವಾದ್ದರಿಂದ ಬಡವರು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಇದೆ. ಸರ್ಕಾರ ಶುಲ್ಕ ಹೆಚ್ಚಳ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಯಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶುಲ್ಕ ಇಳಿಕೆ ಭರವಸೆ

ಶುಲ್ಕ ಇಳಿಕೆ ಭರವಸೆ

ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಸುಷಮಾ ಗೋಡಬೋಲೆ ಅವರು ಮನವಿ ಸ್ವೀಕರಿಸಿ ಶುಲ್ಕ ಇಳಿಕೆ ಮಾಡುವ ಭರವಸೆ ನೀಡಿದರು. ಶುಲ್ಕ ಇಳಿಕೆ ಮಾಡದಿದ್ದರೆ ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರ ಬೇಡಿಕೆಗಳು

ಪ್ರತಿಭಟನಾಕಾರರ ಬೇಡಿಕೆಗಳು

* ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ ಕಾಯ್ದೆ 2006ನ್ನು ತಿರಸ್ಕರಿಸಬೇಕು
* ಏರಿಕೆ ಮಾಡಿರುವ ಶುಲ್ಕಗಳನ್ನು ತಕ್ಷಣ ಎಲ್ಲಾ ವಿದ್ಯಾರ್ಥಿಗಳ ಕೈಗೆಟುಕುವಂತೆ ನಿಗದಿಗೊಳಿಸಬೇಕು.
* ಕಾಮೆಡ್-ಕೆ ಪರಿಕ್ಷೆಗಳನ್ನು ರದ್ದು ಪಡಿಸಬೇಕು ಮಂತಾದವು

ಶುಲ್ಕ ಎಷ್ಟು ಹೆಚ್ಚಳವಾಗಿದೆ?

ಶುಲ್ಕ ಎಷ್ಟು ಹೆಚ್ಚಳವಾಗಿದೆ?

ಹಳೆ ಶುಲ್ಕ ಎಷ್ಟಿತ್ತು? ಇಂಜಿನಿಯರಿಂಗ್ - 38,090 ವೈದ್ಯಕೀಯ - 46,000 ದಂತ ವೈದ್ಯ - 28,590.

ಪರಿಷ್ಕೃತ ಶುಲ್ಕಗಳು ಇಂಜಿನಿಯರಿಂಗ್ - 45,000 ವೈದ್ಯಕೀಯ - 55,000 ದಂತ ವೈದ್ಯ - 38,000

English summary
A Students Federation of India (SFI) protested against fee hike for Medical, Engineering courses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X