ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಐಡಿ ಡಿಐಜಿ ದಿಲೀಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

|
Google Oneindia Kannada News

ಬೆಂಗಳೂರು, ಫೆಬ್ರವರಿ 09 : ಸಿಐಡಿ ಡಿಐಜಿ ದಿಲೀಪ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಈ ಸಂಬಂಧ ಫ್ರಭಾವಿ ನಾಯಕರ ಲಾಜೆಸ್ಟಿಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯಿಬ್ಬರು ಗೃಹ ಇಲಾಖೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

ದಿಲೀಪ್ ಅವರು ಸಿಐಡಿ ಡಿಐಜಿ ಆಗಿ ಅಧಿಕಾರ ವಹಿಸುವುದಕ್ಕೂ ಮುನ್ನ ಹುಬ್ಬಳ್ಳಿ-ಧಾರವಡ ಪೊಲೀಸ್‌ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ. ದೂರು ನೀಡಿರುವ ಮಹಿಳೆ ಬಿಜೆಪಿ ಪ್ರಭಾವಿ ಮುಖಂಡರೊಬ್ಬರ ಲಾಜೆಸ್ಟಿಕ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ನನಗೆ ಹಲವು ತಿಂಗಳ ಹಿಂದೆ ದಿಲೀಪ್ ಅವರ ಪರಿಚಯವಾಗಿತ್ತು. ಹುಬ್ಬಳಿಯಲ್ಲಿ ದಿಲೀಪ್‌ ಅವರ ಕೆಲಸ ಮಾಡುವಾಗ ಪರಿಚಯದಿಂದ ಸ್ನೇಹಿತರಾಗಿದ್ದರು. ಒಮ್ಮೆ ನನ್ನನ್ನು ಅವರು ಮನೆಗೆ ಆಹ್ವಾನಿಸಿದ್ದರು. ಒಬ್ಬ ಗೌರವಯುತ ಸ್ಥಾನದಲ್ಲಿರುವರು ಎಂದು ಭಾವಿಸಿ ಮನೆಗೆ ಹೋದಾಗ ಅವರ ಕುಟುಂಬ ಸದಸ್ಯರು ಯಾರೂ ಇರಲಿಲ್ಲ. ಈ ವೇಳೆ ಅವರು ತನ್ನನ್ನು ಇಷ್ಟಪಡುವುದಾಗಿ ತಿಳಿಸಿದರು. ಆದರೆ ತನಗೆ ಮದುವೆಯಾಗಿದೆ ಎಂದು ಹೇಳಿ ಮನೆಯಿಂದ ಹೊರಟುಬಿಟ್ಟೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅ ನಂತರ ತನ್ನ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದರು. ತನ್ನ ಮಾತಿಗೆ ಒಪ್ಪಿಗೆ ನೀಡುವಂತೆ ಬೆದರಿಕೆ ಹಾಕಿದರು ಎಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ.

Bengaluru : Sexual harassment case against CID DIG Dileep

Recommended Video

ಶಿಕ್ಷಣ ಸಚಿವರಿಂದ ಮಹತ್ವದ ನಿರ್ಧಾರ! | Oneindia Kannada

ನನಗೆ ಮಾತ್ರವಲ್ಲದೇಕಾರವಾರದಲ್ಲಿಿ ಉಪ ಪೊಲೀಸ್‌ ಆಯುಕ್ತರೊಂದಿಗೂ ಇದೇ ರೀತಿ ನಡೆದುಕೊಂಡಿದ್ದಾರೆ. ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುವ ಸ್ನೇಹಿತೆಯೊಂದಿಗೂ ಇದೇ ರೀತಿ ವರ್ತಿಸಿ, ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಕೆಲ ಮಾಹಿತಿ ಸಂಗ್ರಹಿಸಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಾತ್ರವಲ್ಲ ಮಂಗಳೂರು ಎಸ್‌ಪಿ ಆಗಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರ ಮೇಲೆ ದಿಲೀಪ್ ಅತ್ಯಾಚಾರವೆಸಗಿದ್ದಾರೆ,ಕಾರವಾರದಲ್ಲಿ ಮಹಿಳೆಯೊಬ್ಬರೊಂದಿಗೆ ಸಿಕ್ಕಿಬಿದ್ದಿದ್ದರು" ಎಂದು ಉಲ್ಲೇಖಿಸಿದ್ದಾರೆ.

English summary
Woman filed sexual harassment case against CID DIG Dileep. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X