• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಗಳ ಮೇಲೆಯೇ ಅತ್ಯಾಚಾರದ ಆರೋಪ: 'ಸಿಂಗಂ' PSI ಶ್ರೀನಿವಾಸ್ ವಿರುದ್ಧ ಎಫ್ಐಆರ್

|
Google Oneindia Kannada News

ಬೆಂಗಳೂರು, ಜೂ. 23: ವಿಶ್ವನಾಥಪುರಂ ಪಿಎಸ್ಐ ಆಗಿದ್ದ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಅವಾಜ್ ಬಿಟ್ಟು ಸಿಂಗಂ ಪಟ್ಟ ಧರಿಸಿದ್ದ ಪಿಎಸ್ಐ ಶ್ರೀನಿವಾಸ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾಗಿ ನಾಪತ್ತೆಯಾಗಿದ್ದಾನೆ.

ಸದ್ಯ ಬೆಂಗಳೂರು ಗ್ರಾಮಾಂತರ ಎಸ್ಪಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಟಿ.ಅರ್. ಶ್ರೀನಿವಾಸ್ ವಿರುದ್ಧ ಅವರ ಪತ್ನಿಯೇ ದೂರು ನೀಡಿದ್ದಾರೆ. ಶ್ರೀನಿವಾಸ್ ಪತ್ನಿ ನೀಡಿದ ದೂರಿನ ಮೇಲೆ ಪಿಎಸ್ಐ ಶ್ರೀನಿವಾಸ್ ವಿರುದ್ಧ ಆತ್ಯಾಚಾರ, ಲೈಂಗಿಕ ದೌರ್ಜನ್ಯ ಹಾಗೂ ಪೋಸ್ಕೋ ಕಾಯ್ದೆ ಅಡಿ ಜೆ.ಸಿ.ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಶ್ರೀನಿವಾಸ್ ತಲೆ ಮರೆಸಿಕೊಂಡಿದ್ದಾನೆ.

ವಿಶ್ವನಾಥಪುರಂ ಪಿಎಸ್ಐ ಆಗಿದ್ದ ಟಿ.ಅರ್. ಶ್ರೀನಿವಾಸ್ ಪ್ರಕರಣವೊಂದರಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಗೆ ಕಾನೂನು ಪಾಠ ಹೇಳಿ ಬಿಡುಗಡೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಕರ್ನಾಟಕ ಪೊಲೀಸ್ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ. ತೆಲುಗಿನ ಬಂಗಾರು ಕೋಟಿ ಪೆಟ್ಟ ಹಾಡಿಗೆ ನೃತ್ಯ ಮಾಡಿದ ಈತನ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಶ್ರೀನಿವಾಸ್ 2012 ರಿಂದ ಹಲವು ಹೆಣ್ಣು ಮಕ್ಕಳ ಬಾಳಲ್ಲಿ ಆಡಿರುವ ನವರಂಗಿ ಆಟಗಳು ಇದೀಗ ಬೆಳಕಿಗೆ ಬಂದಿವೆ. ಅವರ ಪತ್ನಿಯೇ ಸ್ವತಃ ನೀಡಿರುವ ದೂರಿನಿಂದ ಶ್ರೀನಿವಾಸನ 'ಕಾಮ' ಪುರಾಣಗಳು ಒಂದೊಂದಾಗಿ ಹೊರ ಬಿದ್ದಿವೆ.

ಟಿ.ಆರ್. ಶ್ರೀನಿವಾಸ್ ನನ್ನ ಹದಿಮೂರು ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಜೆ.ಸಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಜೂ. 05 ರಂದು ಎಫ್ಐಆರ್ ಆಗಿದ್ದರೂ ಅತ್ಯಾಚಾರ ಅರೋಪಿ ಶ್ರೀನಿವಾಸ್ ಅವರನ್ನು ಪೊಲೀಸರು ಬಂಧಿಸಿಲ್ಲ. ತಲೆ ಮರೆಸಿಕೊಂಡಿರುವ ಅತನನ್ನು ಕೂಡಲೇ ಬಂಧಿಸಿ ನನಗೆ ನ್ಯಾಯ ಒದಗಿಸಕೊಡಬೇಕು ಎಂದು ದೂರುದಾರ ಪತ್ನಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾಳೆ.

ಶ್ರೀನಿವಾಸ್ ವಿರುದ್ಧದ ಅರೋಪವೇನು?

ಪತಿಯಿಂದ ವಿಚ್ಛೇಧಿತ ಮುಸ್ಲಿಂ ಸಮುದಾಯದ ಮಹಿಳೆಯನ್ನು ಟಿ.ಆರ್. ಶ್ರೀನಿವಾಸ್ ಮದುವೆಯಾಗಿದ್ದ. ಶಾಲಾ ದಿನಗಳಲ್ಲಿ ಪರಿಚಿತನಾಗಿದ್ದ ಈತ ಪತ್ನಿ ದಾಖಲಿಸಿದ್ದ ಕಿರುಕುಳ ಪ್ರಕರಣದಲ್ಲಿ ಶಿವಾಜಿನಗರ ಠಾಣೆಗೆ ವಿಚಾರಣೆಗೆ ಹಾಜರಾದಾಗ ದೂರುದಾರ ಮಹಿಳೆ ಸಿಕ್ಕಿ ಇಬ್ಬರೂ ಮಾತುಕತೆ ಮಾಡಿ ಮದುವೆಯಾಗಿದ್ದರು. 2014 ರಿಂದ 2022 ರ ಅವಧಿಯಲ್ಲಿ ಶ್ರೀನಿವಾಸ್ ಎಸಗಿರುವ ದೌರ್ಜನ್ಯ ಪ್ರಕರಣಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಮಿಗಿಲಾಗಿ ತನ್ನ ಹದಿಮೂರು ವರ್ಷದ ಮಗಳ ಮೇಲೆ ಶ್ರೀನಿವಾಸ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಅರೋಪಿಸಲಾಗಿದೆ. ಅಲ್ಲದೇ ದೂರುದಾರ ಮಹಿಳೆ, ಆಕೆಯ ಸಹೋದರಿಯ ಮೇಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಮಹಿಳೆ ಗರ್ಭವತಿಯಾಗಿದ್ದ ವೇಳೆ ಹಲ್ಲೆ ಮಾಡಿ ಹೊಟ್ಟೆಯಲ್ಲಿ ಮಗುವನ್ನು ಶ್ರೀನಿವಾಸ್ ಸಾಯಿಸಿದ್ದ ಎಂದು ಸಂತ್ರಸ್ತ ಮಹಿಳೆ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

sexual assault and rape case booked against police Singam PSI Srinivas

ನನಗೆ ಎರಡು ಹೆಣ್ಣು ಮಕ್ಕಳಾದವು ಎಂದು ನನ್ನ ಪತಿ ಹಿಂಸೆ ನೀಡಿದ್ದ. ಹೀಗಾಗಿ ಆತನಿಂದ ವಿಚ್ಛೇಧನ ಪಡೆದಿದ್ದೆ. ಶಾಲಾ ದಿನಗಳಲ್ಲಿ ಪರಿಚಿತ ಶ್ರೀನಿವಾಸ್ ನನಗೆ ಬಾಳು ಕೊಡುವುದಾಗಿ ನಂಬಿಸಿ ಮದುವೆಯಾಗಿದ್ದ. ಆನಂತರ ನನ್ನ ಸಹೋದರಿ ಕೌಂಟುಬಿಕ ಜಗಳ ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ. ಇದನ್ನು ಪ್ರಶ್ನಿಸಿದ್ದ ನನ್ನ ಮೇಲೆ ಪದೇ ಪದೇ ಹಲ್ಲೆ ಮಾಡಿದ್ದ. ನಾನು ಗರ್ಭವತಿಯಾಗಿದ್ದ ವೇಳೆ ಶ್ರೀನಿವಾಸ್ ಹಲ್ಲೆ ಮಾಡಿದ್ದರಿಂದ ನನಗೆ ಹೊಟ್ಟೆಯಲ್ಲಿಯೇ ಮಗು ಸಾವನ್ನಪ್ಪಿತ್ತು. ನನ್ನ ಸಹೋದರ ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯ ಜತೆ ಅಸಭ್ಯವಾಗಿ ನಡೆದುಕೊಂಡು ಮನೆಯಲ್ಲಿ ಜಗಳ ಆಗಿತ್ತು. ಹೀಗೆ ಅಸಹಾಯಕ ಮಹಿಳೆರನ್ನು ನೋಡಿದ ಕೂಡಲೇ ವ್ಯಾಘ್ರನಾಗಿ ವರ್ತಿಸುತ್ತಾನೆ ಎಂದು ಶ್ರೀನಿವಾಸ್ ಮೇಲೆ ಅರೋಪ ಮಾಡಿದ್ದಾರೆ.

ನನ್ನ ಮಗಳಿಗೆ ಹದಿಮೂರು ವರ್ಷ. ನನ್ನ ಮಗಳ ಮೇಲೂ ಅತ್ಯಾಚಾರ ಎಸಗಿದ್ದಾನೆ. ನನ್ನ ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾಳೆ. ಶ್ರೀನಿವಾಸ್ ವಿರುದ್ಧ ನಾನು ಮೊದಲು ಕೊಟ್ಟ ದೂರುಗಳನ್ನು ಪೊಲೀಸರು ಸ್ವೀಕರಿಸಲಿಲ್ಲ. ಮೇಲಾಧಿಕಾರಿಗಳಿಗೆ ದೂರು ನೀಡಿದ ಬಳಿಕ ಶ್ರೀನಿವಾಸ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆದ್ರೂ ಆತ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದಾನೆ. ನಾನು ಕೊಟ್ಟಿರುವ ದೂರಿಗೆ ಪ್ರತಿಯಾಗಿ ನನ್ನ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಾನೆ. ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿರುವ ಶ್ರೀನಿವಾಸ್ ಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

English summary
JC Nagara police Registered rape case against Police sub inspector Srinivas: Srinivas wife files complaint against him. know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X