• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾಲೋರಿ ಕರಗಿಸಲು 'ಸೆಕ್ಸ್' ಕಸರತ್ತು ಬೆಸ್ಟ್

By Mahesh
|

ಬೆಂಗಳೂರು, ಸೆ.3 : ದೇಹದಲ್ಲಿರುವ ಅನಗತ್ಯ ಕ್ಯಾಲೋರಿ ಕರಗಿಸಲು ನಾನಾ ವಿಧಾನಗಳು, ಕಸರತ್ತುಗಳು, ವ್ಯಾಯಾಮ, ಅಸನಗಳು ಸಾಧನಗಳು ಇರುವ ಕಾಲದಲ್ಲೇ ಮನೆಯಲ್ಲಿ ಸಂತಸದ ಜೊತೆಗೆ ಕೊಬ್ಬು ಕರಗಿಸುವ ವಿಧಾನಕ್ಕೆ ವಿಜ್ಞಾನಿಗಳು ಥಮ್ಸ್ ಅಪ್ ಹೇಳಿದ್ದಾರೆ. ಕ್ಯೂಬೆಕ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡುಕೊಂಡಿರುವ ಸತ್ಯದ ಪ್ರಕಾರ ಸೆಕ್ಸ್ ಮಾಡುವುದರಿಂದ ಕ್ಯಾಲರಿ ಸುಲಭವಾಗಿ ಕರಗುತ್ತದೆಯಂತೆ.

ಸಂಭೋಗದ ನಂತರ ದೇಹಕ್ಕೆ ಅಗತ್ಯವಾದ ಹಾರ್ಮೋನ್ ಗಳು ಉತ್ಪತ್ತಿಯಾಗುವುದರಿಂದ ದೈಹಿಕ, ಮಾನಸಿಕ ಆರೋಗ್ಯಕ್ಕೆ ಸಹಕಾರಿ ಎಂದು ಸಂಶೋಧನೆಗಳು ಹೇಳಿದೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿ ಮಾಡಿದೆ.

ಈ ಬಗ್ಗೆ ವಿವರಣೆ ನೀಡಿ ಸಂಶೋಧನಾತ್ಮಕ ಲೇಖನ ಬರೆದಿರುವ ಜ್ಯೂಲಿ ಪ್ರಾಪ್ಪಿಯರ್ ಅವರು ಹೇಳುವ ಪ್ರಕಾರ ಸೆಕ್ಸ್ ಹಾಗೂ ವ್ಯಾಯಾಮ ಹದವಾಗಿ ಮಿಶ್ರಣ ಮಾಡಿ ಕಸರತ್ತು ಮಾಡಿದರೆ ದಿನನಿತ್ಯ ಜಿಮ್ ಗೆ ಹೋಗುವ ಖರ್ಚು, ಸಮಯ ಎಲ್ಲವೂ ಉಳಿಯುತ್ತದೆ. ಪುರುಷ ಹಾಗೂ ಸ್ತ್ರೀ ಇಬ್ಬರಲ್ಲೂ ಇದು ಪರಿಣಾಮಕಾರಿಯಾಗಲಿದೆ. 30 ನಿಮಿಷ ಟ್ರೆಡ್ ಮಿಲ್ ನಲ್ಲಿ ಓಡುವುದೂ ಒಂದೇ ಸಂತಸದಿಂದ ಸುರತಿಯಲ್ಲಿ ತೊಡಗುವುದು ಒಂದೇ ಎರಡೂ ಒಂದೇ ಫಲಿತಾಂಶ ಹೊರ ಹಾಕುತ್ತದೆ ಎಂದಿದ್ದಾರೆ.

ಜಿಮ್ ಗೆ ಹೋಗುವ ಬದಲು ಮನೆಯಲ್ಲಿ ದೈನಂದಿನ ವ್ಯಾಯಾಮದಲ್ಲಿ ತೊಡಗಿರುವವರು ಇನ್ಮುಂದೆ 'ಸೆಕ್ಸರ್ಸೈಸ್'(Sexercise) ಮಾಡುವುದನ್ನು ರೂಢಿಸಿಕೊಳ್ಳಬಹುದು ಎಂದು ಲೇಖಕರು ಸಲಹೆ ನೀಡುತ್ತಾರೆ. ಜೀವನದ ಕ್ರಮ ಹಾಗೂ ಒಟ್ಟಾರೆ ಆರೋಗ್ಯ ಸುಸ್ಥಿತಿ ಹಾಗೂ ಗುಣಮಟ್ಟ ಸುಧಾರಣೆಗೆ ಸೆಕ್ಸ್ ಹಾಗೂ ವ್ಯಾಯಾಮ ಸಹಕಾರಿ ಎಂದಿದ್ದಾರೆ.

ನಿಯಮಿತವಾದ ಸೆಕ್ಸ್ ನಿಂದಾಗಿ ಕೊಲೆಸ್ಟ್ರಾಲ್ ಪ್ರಮಾಣದ ಏರುಪೇರಾಗುವುದನ್ನು ತಡೆಗಟ್ಟಬಹುದು. ಸೆಕ್ಸ್ ನಿಂದ ನಿಮ್ಮ ಸೆನ್ಸ್ ಹೆಚ್ಚುತ್ತದೆ. prolactin ಹಾರ್ಮೋನ್ ಮೂಲಕ ಮೆದುಳಿನ ಸ್ಟೆಮ್ ಸೆಲ್ ಗಳಲ್ಲಿ ಉಂಟಾಗುವ ಕ್ರಿಯೆಯೂ ನಿಮ್ಮನ್ನು ಹೆಚ್ಚ ಸೃಜನಶೀಲ, ಕ್ರಿಯಾತ್ಮಕಗೊಳಿಸುತ್ತದೆ. ವಿರುದ್ಧ ಲಿಂಗದೆಡೆಗೆ ಆಕರ್ಷಣೆ ಹೆಚ್ಚಿಸುವ pheromones ಉತ್ಪಾದನೆ ಹೆಚ್ಚುವದರ ಜೊತೆಗೆ ತನ್ನ ಸಂಗಾತಿಯ ಜೊತೆಗೆ ಅವಿನಾಭವ ಸಂಬಂಧ, ಕಾಳಜಿ ಹೆಚ್ಚಿಸುತ್ತದೆ. [ಇನ್ನಷ್ಟು ಉಪಯೋಗಗಳ ಬಗ್ಗೆ ಇಲ್ಲಿ ಓದಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sex is a significant exercise for burning calories, a study by researchers from the University of Quebec found, according to the Sydney Morning Herald.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more