• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಕ್ಸ್ ರಾಕೆಟ್ ಭೇದಿಸಿದ ಪೊಲೀಸರು, 6 ಮಹಿಳೆಯರ ರಕ್ಷಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 01: ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಭಾನುವಾರದಂದು ಎಚ್ಎಸ್ಆರ್ ಲೇಔಟ್ ನಲ್ಲಿ ಸೆಕ್ಸ್ ರಾಕೆಟ್ ಭೇದಿಸಿದ್ದು, 6 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಎಚ್ಎಸ್ಆರ್ ಲೇಔಟ್ ನ ಸ್ಪಾವೊಂದರ ಮೇಲೆ ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆದರೆ, ಸ್ಪಾ ಮಾಲೀಕ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಅವಳು ಕಾಂಡೋಮ್ ಹಾಕಬೇಕು ಎಂದಿದ್ದಕ್ಕೆ ಕೊಲೆಯನ್ನೇ ಮಾಡಿದ..!ಅವಳು ಕಾಂಡೋಮ್ ಹಾಕಬೇಕು ಎಂದಿದ್ದಕ್ಕೆ ಕೊಲೆಯನ್ನೇ ಮಾಡಿದ..!

ಇತ್ತೀಚೆಗೆ ಕೋರಮಂಗಲದ ಕೆಲವು ಅಡ್ಡಾಗಳ ಮೇಲೆ ದಾಳಿ ನಡೆಸಿದ ಪೊಲೀಸರು ಅಕ್ರಮ ಸ್ಪಾ ಹಾಗೂ ಮಸಾಜ್ ಕೇಂದ್ರಗಳನ್ನು ಬಂದ್ ಮಾಡಿಸಿದ್ದರು. ಫೆಬ್ರವರಿ 21ರಂದು ಬೆಂಗಳೂರು ಪೊಲೀಸರು ಮಹದೇವಪುರದ ಹೂಡಿ ಗ್ರಾಮದಲ್ಲಿ ಮಸಾಜ್ ಕೇಂದ್ರದ ಮೇಲೆ ದಾಳಿ ನಡೆಸಿ, 6 ಮಂದಿ ಮಹಿಳೆಯರನ್ನು ರಕ್ಷಿಸಿದ್ದರು. ಮೂವರನ್ನು ಬಂಧಿಸಿದ್ದರು.

ಫೆಬ್ರವರಿ 19ರಂದು ಸಿಸಿಬಿ ಪೊಲೀಸರು, ಕೋರಮಂಗಲದಲ್ಲಿ ಸ್ಪಾ ಮೇಲೆ ದಾಳಿ ನಡೆಸಿ 6 ಮಂದಿ ಮಹಿಳೆಯರನ್ನು ರಕ್ಷಿಸಿದ್ದರು. ಆದರೆ, ಜಾಕ್ ಸಲೂನ್ ಹಾಗೂ ವೆಲ್ ನೆಸ್ ಸ್ಪಾ ಮಾಲೀಕ ನಾಪತ್ತೆಯಾಗಿದ್ದಾನೆ. ಸ್ಪಾ ಮ್ಯಾನೇಜರ್ ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.

English summary
The Central Crime Branch of the Bengaluru city police on Sunday conducted a raid on a spa in HSR layout and rescued six women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X