• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಪೌರತ್ವದ ಪರವಾಗಿ ಮೆರವಣಿಗೆ

|

ಬೆಂಗಳೂರು, ಡಿಸೆಂಬರ್ 22: ದೇಶದ ಹಲವೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದರೆ, ಇತ್ತ ಬೆಂಗಳೂರಲ್ಲಿ ಪೌರತ್ವ ಕಾಯ್ದೆ ಬೆಂಬಲಿಸಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಪ್ರಚೋದನಕಾರಿ ಹೇಳಿಕೆ: ಯುಟಿ ಖಾದರ್ ವಿರುದ್ಧ ಎಫ್‌ಐಆರ್ ದಾಖಲು

ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ಬೆಂಗಳೂರಿನ ಟೌನ್ ಹಾಲ್ ಎದುರು ಮೆರವಣಿಗೆ ನಡೆಯುತ್ತಿದೆ. ಪೌರತ್ವ ಕಾಯ್ದೆ ವಿರೋಧಿಸುವವರ ವಿರುದ್ದವಾಗಿ ಘೋಷಣೆ ಕೂಗಿದರು. ಪ್ರಾರಂಭದಲ್ಲಿ ಕಡಿಮೆ ಜನ ಇದ್ದರು, ನಂತರ ಸಾವಿರಾರು ಜನ ಪಾಲ್ಗೊಂಡರು.

ಪೌರತ್ವ ಕಾಯ್ದೆ ಪರವಾಗಿ ಘೋಷಣೆ ಕೂಗುವುದರ ಜೊತೆಗೆ ಮೋದಿ, ಮೋದಿ ಎಂದು ಕೂಗುತ್ತಿದ್ದಾರೆ. ಈಗ ಜಾರಿಗೆ ತರುತ್ತಿರುವ ಪೌರತ್ವ ಕಾಯ್ದೆಯು ಯಾವ ಧರ್ಮದವರಿಗೂ ಹಾಗೂ ಯಾವ ಜನಾಂಗದವರಿಗೂ ತೊಂದರೆಯಾಗುದಿಲ್ಲ ಎಂದರು.

ಸಿಎಎ ವಿರುದ್ಧ ಪ್ರತಿಭಟನೆ; ಉ. ಪ್ರದೇಶದಲ್ಲಿ 16 ಸಾವು

ಭಾರತವನ್ನು ಕೆಲವು ನಕಲಿ ಜಾತ್ಯಾತೀತ ಮೂಲಭೂತವಾದಿಗಳು ದೇಶದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ, ಅವರಿಂದ ದೇಶವನ್ನು ಕಾಪಾಡಬೇಕಿದೆ ಎಂದರು. ಪೌರತ್ವ ಕಾಯ್ದೆ ಬೆಂಬಲಿಸುವ ಮತ್ತು ಸ್ವಾಗತಿಸುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಪೌರತ್ವ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಎರಡು ಪ್ರತ್ಯೇಕವಾದವು. ಇವುಗಳಿಂದ ಯಾವುದೇ ಭಾರತೀಯರಿಗೆ ತೊಂದರೆ ಇಲ್ಲ. ಕೆಲವರು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ತಪ್ಪು ಸಂದೇಶವನ್ನು ಜನತೆಗೆ ಬಿಂಬಿಸುತ್ತಿದ್ದಾರೆ ಎಂದು ಮೆರವಣಿಗೆಯಲ್ಲಿ ಪಾಲ್ಗೊಂಡ ಕೆಲವರು ಹೇಳಿದರು.

ಪೌರತ್ವ ಕಾಯ್ದೆ ಪರವಾಗಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಸಿಎಎ ಪರವಾಗಿ ಜನ ಸೇರಿದ್ದಾರೆ. ಇವರನ್ನು ಯಾರೂ ದುಡ್ಡು ಕೊಟ್ಟು ಕರೆದುಕೊಂಡು ಬಂದಿಲ್ಲ, ಎಲ್ಲರೂ ತಾವಾಗಿಯೇ ಸೇರಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತಿದೆ. ವಿದ್ಯಾವಂತ, ಸುಶಿಕ್ಷಿತ, ದೇಶಭಕ್ತರ ಭಾರತ ಇದು. ನಾವು ಪ್ರತಿಭಟನೆ ಹೇಗೆ ಮಾಡುತ್ತಿದ್ದೇವೆ ಎಂದು ನೋಡಿ. ನಮ್ಮದು ಶಾಂತಿಯುತ ಹೋರಾಟ, ಬಸ್ ಗೆ ಕಲ್ಲು ತೂರಲ್ಲ, ಸಾರ್ವಜನಿಕ ಆಸ್ತಿಗೆ ಹಾನಿಯನ್ನುಂಟು ಮಾಡಲ್ಲ. ನಮ್ಮ ತೆರಿಗೆ ಹಣವನ್ನು ನಾವು ಹಾಳುಮಾಡಲ್ಲ ಎಂದರು.

1947 ರಲ್ಲಿ ಅಖಂಡ ಭಾರತವನ್ನು ಧರ್ಮದ ಆಧಾರದ ಮೇಲೆ ವಿಭಜಿಸಲಾಯಿತು. ಅಂದು ಮಹಮ್ಮದ್ ಅಲಿ ಜಿನ್ನಾ ಅವರು ಪಾಕಿಸ್ತಾದಲ್ಲಿ ಉಳಿದ ಹಿಂದುಗಳನ್ನು ಒತ್ತೆಯಾಳಾಗಿ ನೋಡ್ತೇವೆ ಎಂದಿದ್ದರು. ಹಿಂದೂಗಳನ್ನು ಭಾರತಕ್ಕೆ ಕರೆತನ್ನಿ ಎಂದು ಡಾ.ಬಿ.ಅರ್.ಅಂಬೇಡ್ಕರ್ ಅವರು ಅಂದೇ ಹೇಳಿದ್ದರು ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಅವರು ಮಮತಾ ಬ್ಯಾನರ್ಜಿ ಅವರು ಸಿಎಎ ವಿರುದ್ದವಾಗಿ ಮಾಡಿದ್ದ ಛೀ..ಛೀ ಘೋಷಣೆಗೆ ತಿರುಗೇಟು ನೀಡಿದರು. ದೀದೀ ಛೀ..ಛೀ... ಬಾಂಗ್ಲಾ ಛೀ..ಛೀ.. ತುಕ್ಡೇ ಗ್ಯಾಂಗ್ ಛೀ..ಛೀ.. ಕಾಂಗ್ರೆಸ್ ಛೀ..ಛೀ.. ಎಂದು ಘೋಷಣೆ ಕೂಗಿದರು.

READ IN ENGLISH

English summary
While there are protests against the Citizenship Amendment Act in many parts of the country, there is a massive procession in support of the Citizenship Act In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X