ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಜೆ ಜಾರ್ಜ್ ಗೆ ಹಿನ್ನಡೆ, ಎಂಬೆಸ್ಸಿ ಸಂಸ್ಥೆ ಮಂಜೂರಾಗಿದ್ದ ಟೆಂಡರ್ ರದ್ದು

|
Google Oneindia Kannada News

ಬೆಂಗಳೂರು, ಸೆ. 22: ಮಾಜಿ ಸಚಿವ ಕೆ.ಜೆ ಜಾರ್ಜ್ ಒಡೆತನದ ಎಂಬೆಸ್ಸಿ ಗಾಲ್ಫ್ ಲಿಂಕ್ ಟೆಕ್ ಪಾರ್ಕ್ ಸಂಸ್ಥೆಗೆ ಮಂಜೂರಾಗಿದ್ದ ಟೆಂಡರನ್ನು ಬಿ.ಎಸ್ ಯಡಿಯುರಪ್ಪ ಅವರ ಬಿಜೆಪಿ ಸರ್ಕಾರ ರದ್ದುಗೊಳಿಸಿದೆ.

ಕೆ.ಜೆ ಜಾರ್ಜ್ ಒಡೆತನದ ಎಂಬೆಸ್ಸಿ ಸಂಸ್ಥೆಗೆ ಬಿಡಿಎಗೆ ಸೇರಿದ 7 ವಾಣಿಜ್ಯ ಸಂಕೀರ್ಣಗಳ ಮರು ನಿರ್ಮಾಣ ಕಾಮಗಾರಿ ಗುತ್ತಿಗೆ ಟೆಂಡರ್ ಸಿಕ್ಕಿತ್ತು. ಶೇ 65:35ರ ಅನುಪಾತದಲ್ಲಿ ಸರ್ಕಾರಿ ಹಾಗೂ ಖಾಸಗಿ ಸಹ ಭಾಗಿತ್ವದಲ್ಲಿ ಈ ಮರು ನಿರ್ಮಾಣ ಹಾಗೂ ಅಭಿವೃದ್ಧಿ ಯೋಜನೆ ಜಾರಿಯಲ್ಲಿತ್ತು.

13 ಎಕರೆ ಸರ್ಕಾರಿ ಭೂಮಿ ಕಬಳಿಕೆ : ಸಚಿವ ಜಾರ್ಜ್ ವಿರುದ್ಧ ದೂರು ದಾಖಲು13 ಎಕರೆ ಸರ್ಕಾರಿ ಭೂಮಿ ಕಬಳಿಕೆ : ಸಚಿವ ಜಾರ್ಜ್ ವಿರುದ್ಧ ದೂರು ದಾಖಲು

ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಸಂಪೂರ್ಣ ಲೋಪದೋಷ ಕಂಡು ಬಂದಿದ್ದು, ಭಾರಿ ಅಕ್ರಮ ನಡೆದಿರುವುದನ್ನು ಬಿಜೆಪಿ ವಕ್ತಾರ ಎನ್. ಆರ್ ರಮೇಶ್ ಬಹಿರಂಗಪಡಿಸಿದ್ದರು. ಸರ್ಕಾರಿ ಸ್ವತ್ತುಗಳನ್ನು ಕಬಳಿಸಲು ಅಂದಿನ ಬಿಡಿಎ ಆಯುಕ್ತ ಶ್ಯಾಮ್ ಭಟ್ ಸಂಚು ರೂಪಿಸಿದ್ದರು ಎಂದು ಎಸಿಬಿ, ಬಿಎಂಟಿಎಫ್, ಲೋಕಾಯುಕ್ತ ಸಂಸ್ಥೆ ರಮೇಶ್ ದೂರು ನೀಡಿದ್ದರು. ನಂತರ ನಗರದ ಎಸಿಎಂಎಂ ನ್ಯಾಯಾಲಯದಲ್ಲೂ ಪ್ರಕರಣದ ದಾಖಲಿಸಿದ್ದರು.

Setback to KJ George: BDA tender to Embassy Golf Link tech Park cancelled

ಭೂ ಒತ್ತುವರಿ ಆರೋಪ: ಎಂಬೆಸ್ಸಿ ಸಂಸ್ಥೆಗೆ 52.03 ಎಕರೆ ಮಂಜೂರಾಗಿದ್ದು, 65 ಎಕರೆಗೆ ಬೇಲಿ ಹಾಕಿಕೊಳ್ಳಲಾಗಿದೆ. ಒತ್ತುವರಿ ಭೂಮಿಯ ಮೌಲ್ಯ 850 ಕೋಟಿ ರು ಗೂ ಅಧಿಕವಾಗಿದೆ. ವಾರ್ಷಿಕವಾಗಿ ಬಿಬಿಎಂಪಿಗೆ 10 ಕೋಟಿ ರು ತೆರಿಗೆ(4.5 ಲಕ್ಷ ಚದರ ಅಡಿ ಸ್ವತ್ತಿಗೆ) ಕಟ್ಟಬೇಕಾಗಿರುವ ಎಂಬೆಸ್ಸಿ ಸಂಸ್ಥೆ 1.24 ಕೋಟಿ ರು ಮಾತ್ರ ಪಾವತಿಸಿದೆ ಎಂದು ಎನ್. ಆರ್ ರಮೇಶ್ ಈ ಹಿಂದೆ ಆರೋಪಿಸಿದ್ದರು. ರಮೇಶ್ ಆರೋಪವನ್ನು ಜಾರ್ಜ್ ತಳ್ಳಿ ಹಾಕಿದ್ದರು.

ಯಡಿಯೂರಪ್ಪ ಕಾಲದಲ್ಲೇ ಜಿಂದಾಲ್‌ಗೆ ಭೂಮಿ : ಕೆ.ಜೆ.ಜಾರ್ಜ್‌ಯಡಿಯೂರಪ್ಪ ಕಾಲದಲ್ಲೇ ಜಿಂದಾಲ್‌ಗೆ ಭೂಮಿ : ಕೆ.ಜೆ.ಜಾರ್ಜ್‌

ಈಗ ಯಡಿಯೂರಪ್ಪ ಸರ್ಕಾರ, ಕಮರ್ಷಿಯಲ್ ಕಾಂಪ್ಲೆಕ್ಸ್ ಮರು ನಿರ್ಮಾಣ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಿದ್ದು, ಈ ಕುರಿತಂತೆ ಸಂಪೂರ್ಣ ವಿವರ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಸೂಚಿಸಿದ್ದಾರೆ.

English summary
Setback to KJ George as BS Yediyurappa government canceled BDA tender sanctioned Embassy Golf Link in a PPP project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X