ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಟ್‌ ಆಪ್ ಬಾಕ್ಸ್ ಹಂಚಿಕೆ; ಮುನಿರತ್ನಗೆ ಎದುರಾದ ಸಂಕಷ್ಟ!

|
Google Oneindia Kannada News

ಬೆಂಗಳೂರು, ನವೆಂಬರ್ 02: ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸಂಕಷ್ಟ ಎದುರಾಗಿದೆ. ಸೆಟ್ ಆಪ್ ಬಾಕ್ಸ್ ಹಂಚಿಕೆ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.

Recommended Video

DK Ravi ನಾನು ತುಂಬಾ ಚನ್ನಾಗಿದ್ವಿ! | Kusuma Exclusive Interview | Part 2 | Oneindia Kannada

ಆರ್‌ಟಿಐ ಹೋರಾಟಗಾರ ಸಾಕೇತ್ ಗೋಖಲೆ ಚುನಾವಣಾ ಆಯೋಗ ಮತ್ತು ಆರ್. ಆರ್. ಉಪ ಚುನಾವಣೆಯ ಚುನಾವಣಾಧಿಕಾರಿಗಳಿಗೆ ಮುನಿರತ್ನ ವಿರುದ್ಧ ದೂರು ನೀಡಿದ್ದಾರೆ. ಮಂಗಳವಾರ ಆರ್. ಆರ್. ನಗರ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ಉಚಿತ ಸೆಟ್ ಟಾಪ್ ಬಾಕ್ಸ್; 6 ತಿಂಗಳು ಉಚಿತ ಕೇಬಲ್ ಪ್ರಸಾರ!ಉಚಿತ ಸೆಟ್ ಟಾಪ್ ಬಾಕ್ಸ್; 6 ತಿಂಗಳು ಉಚಿತ ಕೇಬಲ್ ಪ್ರಸಾರ!

ಮುನಿರತ್ನ ಅಕ್ರಮವಾಗಿ ಸುಮಾರು 50 ಸಾವಿರ ಸೆಟ್ ಆಪ್ ಬಾಕ್ಸ್ ಹಂಚಿದ್ದಾರೆ ಎಂದು ಕಾಂಗ್ರೆಸ್ ಮೊದಲು ಚುನಾವಣಾ ಆಯೋಕ್ಕೆ ದೂರು ನೀಡಿತ್ತು. ಆಗ ಮುನಿರತ್ನ ಅವರು, "ಇದು ನನ್ನ ವ್ಯವಹಾರ ಭಾಗ" ಎಂದು ಒಪ್ಪಿಕೊಂಡಿದ್ದರು.

ಮುನಿರತ್ನ ಪರ ಪ್ರಚಾರ; ದರ್ಶನ್ ವಿರುದ್ಧ ಪ್ರಕರಣ ದಾಖಲು ಮುನಿರತ್ನ ಪರ ಪ್ರಚಾರ; ದರ್ಶನ್ ವಿರುದ್ಧ ಪ್ರಕರಣ ದಾಖಲು

Set Of Box Distribution Trouble For Munirathna

ಬಿಜೆಪಿ ಅಭ್ಯರ್ಥಿ ಹಂಚಿಕೆ ಮಾಡಿರುವ ಸೆಟ್‌ ಆಪ್ ಬಾಕ್ಸ್‌ಗಳ ಬೆಲೆ ಅವರ ಚುನಾವಣಾ ವೆಚ್ಚಕ್ಕಿಂತ ಹೆಚ್ಚಾಗಲಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾಕೇತ್ ಗೋಖಲೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಆರ್. ಆರ್. ನಗರ ಚುನಾವಣೆ; ಮುನಿರತ್ನ ಪರವಾಗಿ ದರ್ಶನ್ ರೋಡ್ ಶೋ ಆರ್. ಆರ್. ನಗರ ಚುನಾವಣೆ; ಮುನಿರತ್ನ ಪರವಾಗಿ ದರ್ಶನ್ ರೋಡ್ ಶೋ

ಪ್ರತಿ ಸೆಟ್ ಆಪ್ ಬಾಕ್ಸ್‌ ಬಳಕೆಗೆ ಚುನಾವಣಾ ವೀಕ್ಷಕರು ದಿನಕ್ಕೆ ಎಷ್ಟು ದರ ನಿಗದಿ ಮಾಡಲಿದ್ದಾರೆ ಎಂಬುದರ ಆಧಾರದ ಮೇಲೆ ಮುನಿರತ್ನ ಅವರ ಚುನಾವಣಾ ವೆಚ್ಚ ತೀರ್ಮಾನವಾಗಲಿದೆ. ಒಂದು ಬಾಕ್ಸ್ ದರ 1 ಸಾವಿರ ಎಂದು ಪರಿಗಣನೆ ಮಾಡಿದರೂ ಮಾಡಿರುವ ವೆಚ್ಚ 5 ಕೋಟಿ ಮೀರಲಿದೆ.

ಚುನಾವಣಾ ಆಯೋಗದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ 30.8 ಲಕ್ಷ ರೂ. ಖರ್ಚು ಮಾಡಲು ಅವಕಾಶ ನೀಡಿದೆ. ಚುನಾವಣಾ ವೆಚ್ಚ ನಿಗದಿಗಿಂತ ಏರಿಕೆಯಾದರೆ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ.

ಅಭ್ಯರ್ಥಿ ನಿಗದಿ ಪಡಿಸಿದ ಹಣಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಅವರನ್ನು ಅನರ್ಹಗೊಳಿಸಲು ಸಹ ಅವಕಾಶವಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

English summary
RTI activist Saket Gokhale complaint to election commissioner seeking action against BJP's RR Nagar assembly by-poll candidate Munirathna who distributed set of box for people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X