ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಣ್ಣ ಬಿನಾಯ್ ರೇಪ್ ಆರೋಪಿ, ತಮ್ಮ ಬಿನೀಶ್ ವಂಚನೆ ಆರೋಪಿ

|
Google Oneindia Kannada News

ಬೆಂಗಳೂರು, ಡಿ. 15: ಕೇರಳದ ರಾಜ್ಯ ಸಿಪಿಐ ಕಾರ್ಯದರ್ಶಿ, ಮಾಜಿ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರರ ಕ್ರಿಮಿನಲ್ ಪುರಾಣದ ಮತ್ತೊಂದು ಸುದ್ದಿ ಇಲ್ಲಿದೆ.

ಕಿರಿಯ ಪುತ್ರ ಬಿನೀಶ್ ಕೊಡಿಯೇರಿಗೆ ಮನಿಲಾಂಡ್ರಿಂಗ್ ಕೇಸಿನಲ್ಲಿ ಬೆಂಗಳೂರಿನ ನ್ಯಾಯಾಲಯವೊಂದು ಜಾಮೀನು ನಿರಾಕರಿಸಿದೆ. ಇನ್ನೊಂದೆಡೆ ಹಿರಿಯ ಪುತ್ರ ಬಿನಾಯ್ ಕೊಡಿಯೇರಿ ವಿರುದ್ಧ ಅತ್ಯಾಚಾರ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್

ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಅನಿಕಾ ಡಿ., ರವೀಂದ್ರನ್ ಆರ್. ಎ. ಜೊತೆ ಅನೂಪ್ ಜೊತೆ ಬಿನೀಶ್ ಸಂಪರ್ಕ ಹೊಂದಿದ್ದಾರೆ. ಕಮ್ಮನಹಳ್ಳಿಯಲ್ಲಿ ಅನೂಪ್ ಆರಂಭಿಸಿದ ರೆಸ್ಟೋರೆಂಟ್ ಮೇಲೆ ಬಿನೀಶ್ 50 ಲಕ್ಷ ಹೂಡಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ನಡೆಸಲಾಯಿತು. ನಂತರ ಅಕ್ಟೋಬರ್ ನಲ್ಲಿ ಬಂಧಿಸಲಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Sessions court denies bail to Bineesh Kodiyeri in money laundering case

ನವೆಂಬರ್ 17ರಂದು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಲು NCBಗೆ ವಿಶೇಷ Narcotic Drugs & Psychotropic Substances(NDPS) ಕೋರ್ಟ ಅನುಮತಿ ನೀಡಿತ್ತು. ನಂತರ ಜಾಮೀನು ಕೋರಿ ಬಿನೀಶ್ ಅರ್ಜಿ ಸಲ್ಲಿಸಿದ್ದರು. ಆದರೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ, ಬೆಂಗಳೂರಿನ ಸಿಟಿ ಸಿವಿಎಲ್ ಹಾಗೂ ಸೆಷನ್ಸ್ ನ್ಯಾಯಾಲಯವು ಇಂದು(ಡಿ. 15) ಜಾಮೀನು ಅರ್ಜಿ ತಿರಸ್ಕರಿಸಿದೆ.

ಆಗಸ್ಟ್ ನಲ್ಲಿ ಬಂಧಿತರಾದ ಅನಿಕಾ, ಅನೂಪ್ ಹಾಗೂ ರಿಜೇಶ್ ಜೊತೆ ಸಂಪರ್ಕ ಹೊಂದಿದ್ದು, ಬೆಂಗಳೂರಿನ ಡ್ರಗ್ಸ್ ಜಾಲ, ಅನೂಪ್ ಹೋಟೆಲ್ ವಹಿವಾಟಿಗೆ ಬಿನೀಶ್ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಕ್ರಮವಾಗಿ ಹಣ ವರ್ಗಾವಣೆ, ಪಿಎಂಎಲ್ ಎ ಕಾಯ್ದೆ ಉಲ್ಲಂಘನೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 6ರಂದು ಬೆಂಗಳೂರಿನ ಮಾದಕ ದ್ರವ್ಯ ನಿಯಂತ್ರಣ ಸಂಸ್ಥೆ(NCB) ಕಚೇರಿಯಲ್ಲಿ ಬಿನೀಶ್ ವಿಚಾರಣೆ ನಡೆಸಲಾಗಿತ್ತು.

ಸಿಪಿಐ ಕಾರ್ಯದರ್ಶಿ ಬಾಲಕೃಷ್ಣನ್ ಪುತ್ರನ ವಿರುದ್ಧ ಚಾರ್ಜ್‌ಶೀಟ್ ಸಿಪಿಐ ಕಾರ್ಯದರ್ಶಿ ಬಾಲಕೃಷ್ಣನ್ ಪುತ್ರನ ವಿರುದ್ಧ ಚಾರ್ಜ್‌ಶೀಟ್

Recommended Video

ಖ್ಯಾತ ವಿಜ್ಞಾನಿ ರೊದ್ದಂ ನರಸಿಂಹ ವಿಧಿವಶ-ಅಂತಿಮ ದರ್ಶನ ಪಡೆದ ಬಿಎಸ್ ವೈ | Oneindia Kannada

ವಿಚಾರಣೆ ವೇಳೆಯಲ್ಲಿ ಅನೂಪ್ ನನ್ನ ಸ್ನೇಹಿತ ಆತನಿಗೆ ಹಣಕಾಸು ತೊಂದರೆ ಇತ್ತು. ಹೀಗಾಗಿ 6 ಲಕ್ಷ ನೀಡಿದ್ದೆ. ಮತ್ತೊಮ್ಮೆ ಬೆಂಗಳೂರಿನಿಂದ ಕೊಚ್ಚಿಗೆ ಬರಲು ಹಣ ಇಲ್ಲ ಎಂದಿದ್ದಾಗ 15, 000 ನೀಡಿದ್ದೆ ಎಂದು ಬಿನೀಶ್ ಹೇಳಿಕೆ ನೀಡಿದ್ದ.

English summary
Money laundering case: The Bengaluru city civil and sessions court rejected the bail plea of Bineesh Kodiyeri, who is the son of CPI(M) Kerala state Secretary Kodiyeri Balakrishnan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X