ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಾಸಮತ ಕಲಾಪದ ವಿಳಂಬ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ

|
Google Oneindia Kannada News

ಬೆಂಗಳೂರು, ಜುಲೈ 22: ವಿಶ್ವಾಸಮತ ಕಲಾಪ ವಿಳಂಬವಾಗಿರುವ ಕಾರಣ ವಿಧಾನಸಭೆಯಿಂದ ವಿಶೇಷ ಅಧಿಕಾರಿ ರಾಜ್ಯಪಾಲರಿಗೆ ಮಾಹಿತಿ ರವಾನಿಸಿದ್ದಾರೆ.

11 ಗಂಟೆಗೆ ಆರಂಭವಾಗಬೇಕಿದ್ದ ಕಲಾಪ ಇನ್ನೂ ಆರಂಭವಾಗದ ಕಾರಣ ರಾಜ್ಯಪಾಲರಿಗೆ ಪತ್ರ ರವಾನಿಸಲಾಗಿದೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಶಾಸಕರ ಪಟ್ಟಿಯನ್ನು ರೆಡಿ ಮಾಡಿಕೊಂಡಿದ್ದಾರೆ. ಒಟ್ಟು 19 ಜನ ಗೈರಾಗಿದ್ದಾರೆ.

ಅದಕ್ಕೂ ಮುನ್ನ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಹೆಸರನ್ನು ಉಲ್ಲೇಖಿಸಿ ಬಿಎಸ್ ಯಡಿಯೂರಪ್ಪ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ.

Session special officer writes letter to Governor

ಒಂದೆಡೆ ಎರಡು ದಿನ ಚರ್ಚೆಗೆ ಕಾಲಾವಕಾಶ ನೀಡುವಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪೀಕರ್ ಬಳಿ ಮನವಿ ಮಾಡಿದ್ದಾರೆ. ಆದರೆ ಸ್ಪೀಕರ್ ಯಾವುದೇ ಭರವಸೆ ನೀಡಿಲ್ಲ, ಹಾಗೆಯೇ ಸಂಜೆಯೊಳಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ವಿಶ್ವಾಸಮತದ ಬಗ್ಗೆ ಇನ್ನೂ ಹೈಡ್ರಾಮಾ ನಡೆಯುತ್ತಿದೆ. ಇನ್ನೊಂದೆಡೆ ನಮ್ಮ ಸ್ಟ್ರಾಟಜಿ ವರ್ಕೌಟ್ ಆಗಿದೆ ಎಂದು ಉಪಮುಖ್ಯಮಂತ್ರಿ ಪರಮೇಶ್ವರ ಹೇಳಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅತೃಪ್ತ ಶಾಸಕರ ಅರ್ಜಿಯನ್ನು ವಿಚಾರಣೆ ನಡೆಸಲು ಇಂದು ಸಾಧ್ಯವಿಲ್ಲ ಎಂದು ಹೇಳಿದೆ. ಮಂಗಳವಾರವಾದರೂ ಅರ್ಜಿ ವಿಚಾರಣೆಗೆ ಬರಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಕಲಾಪ ಆರಂಭವಾಗಿದೆ. ತಮ್ಮ ಶಾಸಕರಿಗೆ ವಿಪ್ ಕೊಡುವ ಅಧಿಕಾರ ಇದೆ ಎಂದು ಸ್ಪೀಕರ್ ಹೇಳಿದ್ದಾರೆ.

English summary
Session special officer writes a letter to Governor Vajubhai vala about Session delay .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X