ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಂದಿನ 3 ವರ್ಷದಲ್ಲಿ ಎಲ್ಲಾ ಮಂಡಲಗಳಲ್ಲಿ ಆರ್‌ಎಸ್‌ಎಸ್‌ ಶಾಖೆ

|
Google Oneindia Kannada News

ಬೆಂಗಳೂರು, ಮಾರ್ಚ್ 19: ಮುಂದಿನ 3 ವರ್ಷದಲ್ಲಿ ಎಲ್ಲಾ ಮಂಡಲದಲ್ಲಿ ಆರ್‌ಎಸ್‌ಎಸ್‌ ಶಾಖೆ ಆರಂಭಿಸಲಾಗುವುದು ಎಂದು ಆರ್‌ಎಸ್‌ಎಸ್‌ನ ಡಾ. ಮನಮೋಹನ ವೈದ್ಯ ಹೇಳಿದ್ದಾರೆ.

ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಸಭೆ ಎಬಿಪಿಎಸ್ ಉದ್ಘಾಟಿಸಿ ಮಾತನಾಡಿದರು. ಕೊರೊನಾ ಲಾಕ್ ಡೌನ್ ನ ಸಂದರ್ಭದಲ್ಲಿ ಮಾರ್ಚ್ ನಿಂದ ಜೂನ್ ವರೆಗೆ ಆರೆಸ್ಸೆಸ್ ನ ಶಾಖೆಗಳು ಸಂಪೂರ್ಣ ಬಂದ್ ಆಗಿತ್ತು.

ಆದರೆ, ಲಾಕ್ ಡೌನ್ ಪ್ರಾರಂಭವಾದ ದಿನದಿಂದಲೇ ಸಂಘದ ಸ್ವಯಂಸೇವಕರು ಸೇವಾಕಾರ್ಯವನ್ನು ಪ್ರಾರಂಭಿಸಿದ್ದರು. ಪಶ್ಚಿಮದ ದೇಶಗಳಲ್ಲಿ ವೆಲ್ ಫೇರ್ ಸ್ಟೇಟ್ ಕಲ್ಪನೆಯಿದೆ. ಅಲ್ಲಿ ಸಮಾಜದ ಅಗತ್ಯಗಳನ್ನು ಸರ್ಕಾರವೇ ಪೂರೈಸುತ್ತದೆ.

Service During Corona And Ram Mandir Abhiyan Is The Resilience And Cultural Unity Of The Bharatiya Society

ಆದರೆ, ನಮ್ಮದು ರಾಷ್ಟ್ರದ ಕಲ್ಪನೆ. ಅಂದರೆ, ಸರ್ಕಾರ ಯಾವುದೇ ಇದ್ದರೂ ಸಮಾಜದಲ್ಲಿ ಏಕತೆಯಿದೆ. ಸಮಾಜ ತನ್ನ ಜವಾಬ್ದಾರಿಯನ್ನು ತಾನೇ ತೆಗೆದುಕೊಳ್ಳುತ್ತದೆ. ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆಯಿಲ್ಲ. ಕೊರೊನಾ ಸಂದರ್ಭದಲ್ಲಿ ಇದು ಅತ್ಯಂತ ಸ್ಪಷ್ಟವಾಗಿ ಎಲ್ಲರ ಗಮನಕ್ಕೆ ಬಂದಿದೆ.

ಸರ್ಕಾರದ ಜೊತೆಗೆ ಸಮಾಜದ ಬೇರೆ ಬೇರೆ ಸಂಘ ಸಂಸ್ಥೆಗಳು ಸೇರಿ ಸೇವಾಕಾರ್ಯ ಮಾಡಿದವು. ಸಂಘದ ಸ್ವಯಂಸೇವಕರು, ಸ್ವತಃ ತಮಗೆ ಕೊರೊನಾ ಹರಡುವ ಅಪಾಕಳೆದ ವರ್ಷಕ್ಕೆ ಹೋಲಿಸಿದರೆ 89% ನಷ್ಟು ಶಾಖೆಗಳು ಕೊರೊನಾ ಬಳಿಕ ಪುನರಾರಂಭಗೊಂಡಿವೆ.

ದೇಶದ 6,495 ತಾಲೂಕುಗಳಲ್ಲಿ 85% ತಾಲೂಕುಗಳಲ್ಲಿ ಸಂಘದ ಶಾಖೆಗಳು ನಡೆಯುತ್ತಿವೆ. 58,500 ಮಂಡಲಗಳಲ್ಲಿ 60% ಮಂಡಲಗಳಲ್ಲಿ ಶಾಖೆ ಅಥವಾ ವಿವಿಧ ರೀತಿಯ ಸಂಘದ ಚಟುವಟಿಕೆಗಳಿವೆ. ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ಮಂಡಲಗಳಲ್ಲಿ ಶಾಖೆಗಳನ್ನು ಪ್ರಾರಂಭಿಸುವ ಯೋಜನೆಯಿದೆ ಎಂದು ಡಾ. ವೈದ್ಯ ಅವರು ವಿವರಿಸಿದರು.ಯ ಇದ್ದರೂ ಕೂಡ ಸೇವಾ ಕಾರ್ಯದಲ್ಲಿ ತೊಡಗಿದರು.

92,656 ಸ್ಥಾನಗಳಲ್ಲಿ ಸುಮಾರು 5,07,000 ಕಾರ್ಯಕರ್ತರು ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದರು. 73 ಲಕ್ಷ ರೇಷನ್ ಕಿಟ್, 4.5 ಕೋಟಿ ಫುಡ್ ಪ್ಯಾಕೆಟ್, 90 ಲಕ್ಷ ಮಾಸ್ಕ್ ವಿತರಿಸಿದರು. 60,000 ಯೂನಿಟ್ ರಕ್ತದಾನ ನಡೆಯಿತು. 30 ಲಕ್ಷ ವಲಸೆ ಕಾರ್ಮಿಕರಿಗೆ ಸಹಾಯ ಮಾಡಲಾಯಿತು. ಸಂಘದ ಜತೆಗೆ ನೂರಾರು ಮಠಮಂದಿರಗಳು, ಅನೇಕ ಸಂಘ ಸಂಸ್ಥೆಗಳು ಕೊರೊನಾದಿಂದ ತೊಂದರೆಗೊಳಗಾದವರ ಸೇವೆ ಮಾಡಿವೆ.

ಕೊರೊನಾ ಸಂದರ್ಭದಲ್ಲಿ ಸಂಪೂರ್ಣ ಸಮಾಜ ಜೊತೆಗೂಡಿ ಸೇವೆಯಲ್ಲಿ ತೊಡಗಿತ್ತು. ಸಮಾಜ ತೋರಿಸಿದ ಈ ಏಕತೆ ಮತ್ತು ಸೇವಾಭಾವ ಅಭಿನಂದನೀಯವಾದದ್ದು. ಇದರ ಬಗ್ಗೆ ಚರ್ಚೆ ನಡೆದು ಸಭೆ ನಿರ್ಣಯ ಕೈಗೊಳ್ಳಲಿದೆ.

ದೇಶದಲ್ಲಿ ನಡೆಯುತ್ತಿರುವ ಒಟ್ಟು ಶಾಖೆಗಳಲ್ಲಿ 89% ಶಾಖೆಗಳಲ್ಲಿ ಯುವಕರು ಮತ್ತು ಬಾಲಕರು ಭಾಗವಹಿಸುವ ಶಾಖೆಗಳಿವೆ. 11% ನಷ್ಟು ಶಾಖೆಗಳು 40 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳು ಹಾಜರಿರುವ ಶಾಖೆಗಳಿವೆ ಎಂದು ಅವರು ತಿಳಿಸಿದರು.

ಹಾಗೆಯೇ, ಇತ್ತೀಚೆಗೆ ದೇಶಾದ್ಯಂತ ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಈ ಅಭಿಯಾನದಲ್ಲಿ 5,45,737 ಗ್ರಾಮನಗರಗಳನ್ನು 20 ಲಕ್ಷ ಕಾರ್ಯಕರ್ತರು ತಲುಪಿದ್ದಾರೆ. ಈ ವಿಷಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

Recommended Video

ಕೇವಲ 24 ಗಂಟೆಗೆ ಎಷ್ಟ್ ಕೇಸ್ ದಾಖಲಾಗಿದೆ ಗೊತ್ತಾ ? | Corona Update | Oneindia Kannada

ಇಂದು ಸಮಾಜದಲ್ಲಿ ಸಂಘದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಉತ್ಸಾಹವಿದೆ. ಸಂಘದೊಂದಿಗೆ ಸೇರಿ ಕೆಲಸ ಮಾಡುವ ಯುವಸಮೂಹದ ಸಂಖ್ಯೆಯೂ ಕೂಡಾ ಹೆಚ್ಚಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಶಾಖೆಗಳ ಸಂಖ್ಯೆ, ಗುಣಮಟ್ಟ ಹೆಚ್ಚಿಸುವ ಬಗ್ಗೆ, ಯುವಕರನ್ನು ಜೋಡಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕೃಪೆ(ಸಂವಾದ)

English summary
Service during Corona and Ram Mandir Abhiyan showcased the resilience and cultural unity of the Bharatiya society”- Manmohan Vaidya, Sah Sarkaryavah, RSS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X