ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ವರ್ ಡೌನ್: ನಮ್ಮ ಮೆಟ್ರೋದಲ್ಲಿ ಪೇಟಿಯಂ ಪಾವತಿಗೆ ಅಡಚಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 20: ಮೆಟ್ರೋದಲ್ಲಿ ಪೇಟಿಎಂ ಹಾಗೂ ಡೆಬಿಟ್‌, ಕ್ರೆಡಿಟ್ ಕಾರ್ಡ್ ಮೂಲಕ ಸ್ಮಾರ್ಟ್‌ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳುವವರಿಗೆ ಅಡಚಣೆ ಉಂಟಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಪೇಟಿಎಂ ಮೂಲಕ ಸ್ಮಾರ್ಟ್‌ಕಾರ್ಡ್ ರೀಚಾರ್ಜ್ ಸೇವೆ ಒದಗಿಸಿದ್ದರೂ ಅನೇಕ ವೇಳೆ ನೆಟ್‌ವರ್ಕ್ ಸಮಸ್ಯೆಯಿಂದ ಪೇಟಿಎಂ ಪಾವತಿಯಾಗದೇ ಇರುವುದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ರೀಚಾರ್ಜ್ ವೇಳೆ ಸರ್ವರ್ ಡೌನ್

ರೀಚಾರ್ಜ್ ವೇಳೆ ಸರ್ವರ್ ಡೌನ್

ಮೆಟ್ರೋ ನಿಲ್ದಾಣಗಳಲ್ಲಿ ನಿರಂತರವಾಗಿ ನೆಟ್‌ವರ್ಕ್ ಲಭ್ಯವಾಗುವಂತೆ ಬಿಎಂಆರ್‌ಸಿಎಲ್ ಏರ್‌ಟೆಲ್ ಮತ್ತು ಜಿಯೋ ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆ. ಎತ್ತರಿಸಿದ ಮೆಟ್ರೋ ಮಾರ್ಗ ಮತ್ತು ನಿಲ್ದಾಣಗಳಲ್ಲಿ ಬಹುತೇಕ ನೆಟ್‌ವರ್ಕ್ ಸಮಸ್ಯೆ ಇಲ್ಲ ಎನ್ನಬಹುದು. ಆದರೆ, ಕೆಲವು ಸಂದರ್ಭಗಳಲ್ಲಿ ಸರ್ವರ್ ಡೌನ್ ಸಮಸ್ಯೆಯಿಂದ ನಿಗದಿತ ಅವಧಿಯಲ್ಲಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಆಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗದೆ ಆತಂಕ ಹೆಚ್ಚುತ್ತಿದೆ ಎಂಬುದು ಪ್ರಯಾಣಿಕರ ಆರೋಪವಾಗಿದೆ.

ಗ್ರೀನ್ ಲೈನ್ ಗೆ ಆರು ಬೋಗಿಯ ಮತ್ತೆರಡು ಮೆಟ್ರೋ ಟ್ರೈನ್ಗ್ರೀನ್ ಲೈನ್ ಗೆ ಆರು ಬೋಗಿಯ ಮತ್ತೆರಡು ಮೆಟ್ರೋ ಟ್ರೈನ್

 ವೈಫೈ ಕನೆಕ್ಷನ್ ಕೂಡ ಸಾಧ್ಯವಾಗುತ್ತಿಲ್ಲ

ವೈಫೈ ಕನೆಕ್ಷನ್ ಕೂಡ ಸಾಧ್ಯವಾಗುತ್ತಿಲ್ಲ

ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಸೌಲಭ್ಯ ಇರುವಂತೆ ಈ ಹಿಂದೊಮ್ಮೆ ಮೆಟ್ರೋ ರೈಲಿನಲ್ಲಿ ವೈಫೈ ಒದಗಿಸುವ ಬಗ್ಗೆ ಪ್ರಾಯೋಗಿಕ ಪ್ರಯತ್ನವನ್ನು ಮೆಟ್ರೋ ನಿಗಮ ಮಾಡಿತ್ತು. ಆದರೆ, ಪ್ರತಿ 5ರಿಂದ 7 ನಿಮಿಷಕ್ಕೊಮ್ಮೆ ಮೆಟ್ರೋ ರೈಲು ಮತ್ತು 10 ನಿಮಿಷದೊಳಗೆ ಮುಂದಿನ ನಿಲ್ದಾಣಗಳು ಬರುವುದರಿಂದ ವೈಫೈ ಕನೆಕ್ಷನ್ ಸಾಧ್ಯವಾಗುತ್ತಿರಲಿಲ್ಲ. ಇದರಿಂದ ವೈಫೈ ಯೋಜನೆ ಕೂಡ ಯಶಸ್ವಿಯಾಗದೆ ಇರುವುದು ಗೋಚರಿಸುತ್ತದೆ.

 ಕ್ರೆಡಿಟ್, ಡೆಬಿಟ್ ಕಾರ್ಡ್‌ಗಿಂತ ಪೇಟಿಯಂ ಸುಲಭ

ಕ್ರೆಡಿಟ್, ಡೆಬಿಟ್ ಕಾರ್ಡ್‌ಗಿಂತ ಪೇಟಿಯಂ ಸುಲಭ

ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಬಳಸಿ ಹಣ ಪಾವತಿ ಮಾಡುವುದಕ್ಕಿಂತ ಪೇಟಿಯಂ ಮೂಲಕ ಸುಲಭವಾಗಿ ಹಣ ಪಾವತಿ ಮಾಡಲು ಸಾಧ್ಯ. ಅಲ್ಲದೇ ಸ್ಮಾರ್ಟ್ ಕಾರ್ಡ್‌ನಲ್ಲಿ ಕನಿಷ್ಠ 50 ರೂ. ರೀಚಾರ್ಜ್ ಇರಲೇಬೇಕು ಎಂಬ ನಿಯಮ ನಮ್ಮ ಮೆಟ್ರೋ ಸಂಸ್ಥೆಯಾಗಿದ್ದು ಆಗಿದೆ.

 ಏರ್‌ಟೆಲ್‌-ಜಿಯೋ ಜೊತೆಗೆ ಒಪ್ಪಂದ

ಏರ್‌ಟೆಲ್‌-ಜಿಯೋ ಜೊತೆಗೆ ಒಪ್ಪಂದ

40 ಮೆಟ್ರೋ ನಿಲ್ದಾಣಗಳಲ್ಲಿ ಉತ್ತಮ ನೆಟ್‌ವರ್ಕ್ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್ ಜಿಯೋ ಮತ್ತು ಏರ್‌ಟೆಲ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಎತ್ತರಿಸಿದ ನಿಲ್ದಾಣ ಮತ್ತು ಮೆಟ್ರೋ ಮಾರ್ಗದಲ್ಲಿ ಏರ್‌ಟೆಲ್ ಮತ್ತು ಜಿಯೋ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಆದರೆ, ನೆಲದಾಳದಲ್ಲಿ ಇರುವ ಮೆಜೆಸ್ಟಿಕ್, ಎಂಜಿ ರಸ್ತೆ ಮತ್ತು ಮೆಜೆಸ್ಟಿಕ್ -ಮಾಗಡಿ ರಸ್ತೆ, ಮೆಜೆಸ್ಟಿಕ್-ನ್ಯಾಷನಲ್ ಕಾಲೇಜು ವರೆಗಿನ ಮಾರ್ಗಗಳಲ್ಲಿ ಜಿಯೋ ಟೆಲಿಕಾಂ ಸಂಸ್ಥೆಯ ನೆಟ್‌ವರ್ಕ್ ಮಾತ್ರ ಸಿಗುತ್ತದೆ.

English summary
The Namma Metro has information that Paytm and debit, credit card payment interrupted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X