ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾರ್ಚ್ 15 ವಿಶ್ವ ಗ್ರಾಹಕರ ದಿನ, ಟ್ವಿಟ್ಟರ್ ಅಭಿಯಾನದಲ್ಲಿ ಪಾಲ್ಗೊಳ್ಳಿ

By Prasad
|
Google Oneindia Kannada News

ಬ್ಯಾಂಕಲ್ಲಿ, ಚಿತ್ರಮಂದಿರದಲ್ಲಿ, ಬೃಹತ್ ಮಳಿಗೆಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲಿ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಮಹಾತ್ಮಾ ಗಾಂಧಿ ರಸ್ತೆಯಲ್ಲಿ, ಪಬ್ಬುಗಳಲ್ಲಿ ನಮಗೆ ಬೇಕಾದ ವಸ್ತುಗಳನ್ನು ಕನ್ನಡದಲ್ಲಿಯೇ ಕೇಳುತ್ತಿರಬೇಕು. ಆಗ ಮಾತ್ರ ನಾವು ಕನ್ನಡಕ್ಕಾಗಿ ಮಾಡುತ್ತಿರುವ ಹೋರಾಟಕ್ಕೆ ಒಂದು ಅರ್ಥವಿರುತ್ತದೆ.

ಕನ್ನಡದಲ್ಲಿ ಮಾಹಿತಿ ನೀಡಿದರೆ ಮಾತ್ರ ಉತ್ಪನ್ನಗಳನ್ನು ಕೊಳ್ಳುತ್ತೇನೆ, ಇಲ್ಲದಿದ್ದರೆ ನೀನುಂಟು ನಿನ್ನ ಉತ್ಪನ್ನವುಂಟು ಎಂದು ಕೈಝಾಡಿಸಿಕೊಂಡು ಕನ್ನಡಿಗರು ಬರುತ್ತಿರಬೇಕು. ಕನ್ನಡಿಗರೆಲ್ಲ ಕಟಿಬದ್ಧರಾಗಿ ಇದನ್ನು ಜಾರಿಗೆ ತರಲು ಯತ್ನಿಸುತ್ತಲೇ ಇರಬೇಕು.[ಕನ್ನಡದಲ್ಲೇ ಮಾಹಿತಿ ನೀಡಿದ್ರೆ ಮಾತ್ರ ಉತ್ಪನ್ನ ಕೊಳ್ತೇನೆ!]

ServeInMyLanguage twitter campaign by Kannada Grahakara Koota

ವಿಶ್ವ ಗ್ರಾಹಕರ ದಿನ, ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯುವ ದಿನವೆಂದು ಪರಿಗಣಿಸಲಾಗುತ್ತದೆ. ಆದರೆ ಗ್ರಾಹಕರ ಹಕ್ಕುಗಳು ಕೇವಲ ಅಳತೆ, ತೂಕ, ಗುಣಮಟ್ಟಕ್ಕೆ ಸೀಮಿತವಲ್ಲ. ನಮ್ಮ ನಮ್ಮ ನುಡಿಗಳಲ್ಲಿ ಗ್ರಾಹಕ ಸೇವೆಯನ್ನು ಪಡೆಯುವುದು ಗ್ರಾಹಕರಾಗಿ ನಮ್ಮ ಹಕ್ಕೇ ಆಗಿದೆ.

ಭಾರತ ದೇಶದ ಗ್ರಾಹಕ ಹಕ್ಕು ಕಾನೂನುಗಳಲ್ಲಿ ನುಡಿಯ ಆಯಾಮ ಸೇರಿಕೊಳ್ಳಬೇಕಿದೆ. ಮಾರುಕಟ್ಟೆಯಲ್ಲಿ ನಮ್ಮ ನುಡಿಗಳಲ್ಲಿ ಗ್ರಾಹಕಸೇವೆ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಗ್ರಾಹಕರಾಗಿ ನಮ್ಮ ದನಿ ಎತ್ತಬೇಕಿದೆ.

ಡಿಸೆಂಬರ್ 24, 2016 ರಂದು ರಾಷ್ಟ್ರೀಯ ಗ್ರಾಹಕ ದಿನದ ಅಂಗವಾಗಿ ಕನ್ನಡ ಗ್ರಾಹಕರ ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ #‌ServeInMyLanguage ಟ್ವಿಟ್ಟರ್ ಅಭಿಯಾನದಂತೆಯೇ ಇದೇ ಮಾರ್ಚ್ 15 ವಿಶ್ವ ಗ್ರಾಹಕರ ದಿನದಂದು ಸಂಜೆ 5ರಿಂದ ಟ್ವಿಟ್ಟರಿನಲ್ಲಿ ನಮ್ಮ ನುಡಿಗಳಲ್ಲಿ ಎಲ್ಲ ಹಂತದ ಗ್ರಾಹಕ ಸೇವೆಗೆ ಆಗ್ರಹಿಸಿ ಕನ್ನಡ ಗ್ರಾಹಕರ ಕೂಟ ಮತ್ತೊಮ್ಮೆ #‌ServeInMyLanguage ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದೆ.

ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ನುಡಿ ಕೇಂದ್ರಿತ ಗ್ರಾಹಕ ಚಳವಳಿಯ ಬಗ್ಗೆ ಜಾಗೃತಿ ಮೂಡಿಸೋಣ ಮತ್ತು ಆ ಮೂಲಕ ನಮ್ಮ ನಮ್ಮ ನುಡಿಗಳಲ್ಲಿ ಎಲ್ಲ ಹಂತದ ಸೇವೆ ಪಡೆಯುವತ್ತ ಹೆಜ್ಜೆ ಹಾಕೋಣ.

English summary
World Consumer Day : #ServeInMyLanguage twitter campaign by Kannada Grahakara Koota on March 15th. Lets join hands together & ask Govt, private companies to #ServeInMyLanguage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X