ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಯೋಜನೆ ವಿಳಂಬಕ್ಕೆ ಕಾರಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ನಮ್ಮ ಮೆಟ್ರೋ ಎರಡನೇ ಹಂತದ ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಯೋಜನೆ ವಿಳಂಬವಾಗುತ್ತಿದೆ ಎನ್ನುವ ಕೂಗು ಕೇಳಿಬರುತ್ತಿದೆ ಆದರೆ ಅದಕ್ಕೆ ಕಾರಣವೇನೆಂಬುದು ಇದೀಗ ಬಹಿರಂಗವಾಗಿದೆ.

ಒಟ್ಟು 8.74 ಕಿ.ಮೀ ಉದ್ದದ ಮಾರ್ಗದಲ್ಲಿ 18 ತಿರುವುಗಳಿವೆ. ಇದರಿಂದಾಗಿ ಮೆಟ್ರೋ ರೈಲಿನ ವೇಗ ಸರಾಸರಿ 40-50 ಕಿ.ಮೀನಿಂದ 15-20ಕ್ಕೆ ಇಳಿಕೆಯಾಗಲಿದೆ.

ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ ಹಸಿರು ಮಾರ್ಗದಲ್ಲಿ ಜನವರಿ 28ರಿಂದ ಆರು ಬೋಗಿಯ ಮೆಟ್ರೋ ಸಂಚಾರ

ಮೆಟ್ರೋ ಮೊದಲನೇ ಹಂತದಲ್ಲಿದ್ದ ತಿರುವುಗಳು

ಮೆಟ್ರೋ ಮೊದಲನೇ ಹಂತದಲ್ಲಿದ್ದ ತಿರುವುಗಳು

ಮೆಟ್ರೋ ಮೊದಲನೇ ಹಂತದಲ್ಲಿ ರಾಜಾಜಿನಗರ, ಬನಶಂಕರಿ, ಶ್ರೀರಾಂಪುರ, ಲಾಲ್‌ಬಾಗ್‌ ಹಾಗೂ ಹಲಸೂರು ಬಳಿ ಸಂಕೀರ್ಣ ತಿರುವುಗಳಿವೆ.

ಕಾಮಗಾರಿಯೂ ಒಂದು ಸವಾಲು

ಕಾಮಗಾರಿಯೂ ಒಂದು ಸವಾಲು

ನಾಯಂಡಹಳ್ಳಿಯಿಂದ ಪಟ್ಟಣಗೆರೆವರೆಗೆ 3.94 ಕಿ.ಮೀ ಮಾರ್ಗದ ಗುತ್ತಿಗೆಯನ್ನು ಐಎಲ್ ಅಂಡ್ ಎಫ್‌ಎಸ್ ಕಂಪನಿಗೆ ನೀಡಲಾಗಿದೆ. ಪಟ್ಟಣಗೆರೆಯಿಂದ ಚಲ್ಲಘಟ್ಟ ಡಿಪೋದವರೆಗೆ 4.8 ಕಿ.ಮೀ ಮಾರ್ಗದ ಗುತ್ತಿಗೆಯನ್ನು ಸೋಮಾ ಎಂಟರ್‌ಪ್ರೈಸಸ್ ಗೆ ನೀಡಲಾಗಿದೆ.

ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ. ಯಾವುದೇ ಮೆಟ್ರೋ ನಿಲ್ದಾಣದಿಂದ ಲಾಲ್ ಬಾಗ್‌ಗೆ 30 ರೂ.

2015ರ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು

2015ರ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭವಾಗಬೇಕಿತ್ತು

2015ರ ಏಪ್ರಿಲ್‌ನಲ್ಲಿ ಈ ಮಾರ್ಗದ ಕಾಮಗಾರಿ ಆರಂಭವಾಗಿತ್ತು. 2017ರ ಜುಲೈಗೆ ಸಿವಿಲ್ ಕಾಮಗಾರಿ ಪೂರ್ಣಕ್ಕೆ ನಿಗಮ ಗಡುವು ನೀಡಿತ್ತು. ಹಲವು ಕಾರಣಗಳಿಂದ ಕಂಪನಿಗಳು ಈ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಲು ವಿಫಲವಾಗಿದೆ. ಪ್ರಸ್ತುತ ವರ್ಷಾಂತ್ಯಕ್ಕೆ ಈ ಮಾರ್ಗ ಪೂರ್ಣಗೊಳಿಸಬೇಕು ಎಂದು ನಿರ್ಧರಿಸಲಾಗಿದೆ. ಹೆಚ್ಚಿನ ತುರುವುಗಳೂ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.

ಅಂತಿಮ ಹಂತದಲ್ಲಿ ಕಾಮಗಾರಿ

ಅಂತಿಮ ಹಂತದಲ್ಲಿ ಕಾಮಗಾರಿ

ಲಾಂಚ್ ಗ್ರಿಡ್ಡರ್ ಸಹಾಯದಿಂದ ಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಸಾಗುವ ಮಾರ್ಗದ ನಿರ್ಮಾಣ ಮಾಡಲಾಗುತ್ತಿದೆ. ಹೆಚ್ಚಿನ ತಿರುವುಗಳು ಇದ್ದ ಕಾರಣ ಲಾಂಚ್ ಗ್ರಿಡ್ಡರ್‌ಗಳನ್ನೂ ಜಾಗರೂಕತೆಯಿಂದ ಮುಂದುವರೆಸಬೇಕಾಗಿತ್ತು.

English summary
There are 18 curves in kengari Nayandahalli metro lane. It will be challenging for BMRCL.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X