ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಪ್ರತ್ಯೇಕ ಬಸ್ ಪಥ; ನವೆಂಬರ್‌ 1 ರಿಂದ ಜಾರಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 02 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಪಥ ನಿರ್ಮಾಣವಾಗಲಿದೆ. ಪ್ರಾಯೋಗಿಕವಾಗಿ ನಗರದ 12 ಮಾರ್ಗದಲ್ಲಿ ಬಸ್ ಲೇನ್ ನಿರ್ಮಾಣಗೊಳ್ಳುತ್ತಿದೆ.

ಬಿಬಿಎಂಪಿ, ಬಿಎಂಟಿಸಿ, ಬೆಂಗಳೂರು ಸಂಚಾರಿ ಪೊಲೀಸ್ ಮತ್ತು ಡಲ್ಟ್‌ ಸಂಸ್ಥೆಗಳು ಒಟ್ಟಾಗಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದ್ದವು. ನವೆಂಬರ್ 1ರಿಂದ ಪ್ರಾಯೋಗಿಕವಾಗಿ ಬಸ್ ಪಥದಲ್ಲಿ ಬಿಎಂಟಿಸಿ ಸಂಚಾರ ನಡೆಸಲಿವೆ.

ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ? ಓಲಾ ಮಾದರಿ ಸೇವೆ ನೀಡಲು ಬಿಎಂಟಿಸಿ ಸಿದ್ಧತೆ, ಹೇಗೆ ವ್ಯವಸ್ಥೆ?

ಎಂ. ಜಿ. ರಸ್ತೆಯಿಂದ ವೆಲ್ಲಾರ ಜಂಕ್ಷನ್ ಮಾರ್ಗವಾಗಿ ಕೆ. ಆರ್. ಪುರ ಮತ್ತು ಸಿಲ್ಕ್ ಬೋರ್ಡ್ ತನಕ 30 ಕಿ. ಮೀ. ಉದ್ದದ ಮೊದಲ ಬಸ್ ಪಥ ನಿರ್ಮಾಣವಾಗಲಿದೆ. ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥಕ್ಕೆ ಬ್ಯಾರಿಕೇಡ್ ಹಾಕಲಾಗುತ್ತದೆ.

ಸೌರಶಕ್ತಿ ಮೊರೆ ಹೋದ ಬಿಎಂಟಿಸಿ; 4.32 ಕೋಟಿ ವಿದ್ಯುತ್ ಬಿಲ್ ಉಳಿತಾಯ ಸೌರಶಕ್ತಿ ಮೊರೆ ಹೋದ ಬಿಎಂಟಿಸಿ; 4.32 ಕೋಟಿ ವಿದ್ಯುತ್ ಬಿಲ್ ಉಳಿತಾಯ

ಬಸ್ ಪಥ ನಿರ್ಮಾಣ ಕಾರ್ಯವನ್ನು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಬುಧವಾರ ಬೆಳಗ್ಗೆ ಪರಿಶೀಲನೆ ನಡೆಸಿದರು. ಕೆ. ಆರ್. ಪುರ ಟಿನ್ ಫ್ಯಾಕ್ಟರಿಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ತನಕ ಅವರು ಬಸ್‌ನಲ್ಲಿ ಸಂಚಾರ ನಡೆಸಿ ಪಥವನ್ನು ವೀಕ್ಷಿಸಿದರು.

ಕೆಎಸ್‌ಆರ್‌ಟಿಸಿ ಐರಾವತದಲ್ಲಿ 699 ಬೆಳ್ಳಿದೀಪ ಪತ್ತೆ ಕೆಎಸ್‌ಆರ್‌ಟಿಸಿ ಐರಾವತದಲ್ಲಿ 699 ಬೆಳ್ಳಿದೀಪ ಪತ್ತೆ

12 ಮಾರ್ಗದಲ್ಲಿ ಬಸ್ ಪಥ ನಿರ್ಮಾಣ

12 ಮಾರ್ಗದಲ್ಲಿ ಬಸ್ ಪಥ ನಿರ್ಮಾಣ

ಬೆಂಗಳೂರು ನಗರದ 12 ಮಾರ್ಗದಲ್ಲಿ ಪ್ರಾಯೋಗಿಕವಾಗಿ ಬಸ್ ಪಥ ನಿರ್ಮಾಣವಾಗಲಿದೆ. ಹೊರವರ್ತುಲ ರಸ್ತೆ, ಬನ್ನೇರುಘಟ್ಟ ರಸ್ತೆ, ಹಳೆ ಮದ್ರಾಸ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, ಮಾಗಡಿ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಪ್ರತ್ಯೇಖ ಬಸ್ ಪಥವನ್ನು ನಿರ್ಮಿಸಲಾಗುತ್ತಿದೆ.

3.5 ಮೀಟರ್ ಅಗಲ

3.5 ಮೀಟರ್ ಅಗಲ

ಪ್ರತ್ಯೇಕ ಬಸ್ ಪಥ 3.5 ಮೀಟರ್ ಅಗಲ ಹೊಂದಿರಲಿದೆ. ಈಗಿರುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಪ್ರತ್ಯೇಕ ಪಥವನ್ನು ನಿರ್ಮಾಣ ಮಾಡಲಾಗುತ್ತದೆ. ಬಿಎಂಟಿಸಿ ಬಸ್‌ಗಳು ಇನ್ನು ಮುಂದೆ ಪ್ರತ್ಯೇಕ ಪಥದಲ್ಲಿ ಮಾತ್ರ ಸಂಚಾರ ನಡೆಸಲಿವೆ. ಬೇರೆ ವಾಹನಗಳು ಸಂಚಾರ ನಡೆಸುವ ರಸ್ತೆಯಲ್ಲಿ ಚಲಿಸುವುದಿಲ್ಲ.

ಸಂಚಾರ ದಟ್ಟಣೆ ಕಡಿಮೆ

ಸಂಚಾರ ದಟ್ಟಣೆ ಕಡಿಮೆ

ಬಿಎಂಟಿಸಿಯಲ್ಲಿ ಸುಮಾರು 6000 ಬಸ್‌ಗಳಿವೆ. ಪ್ರತಿದಿನ ಇಷ್ಟು ಬಸ್ ರಸ್ತೆಗಿಳಿಯುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ರಸ್ತೆಯಲ್ಲಿ ಎಲ್ಲಾ ವಾಹನಗಳ ಜೊತೆಗೆ ಬಸ್ ಸಂಚಾರ ನಡೆಸುವುದರಿಂದ ಸಂಚಾರ ದಟ್ಟಣೆಯಲ್ಲಿ ಸಿಲುಕುತ್ತವೆ. ಇದನ್ನು ತಪ್ಪಿಸಲು ಬಸ್ ಪಥ ನಿರ್ಮಿಸಲಾಗುತ್ತಿದೆ.

ಅವಳಿ ನಗರದಲ್ಲಿ ಜಾರಿಯಲ್ಲಿದೆ

ಅವಳಿ ನಗರದಲ್ಲಿ ಜಾರಿಯಲ್ಲಿದೆ

ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ಬಿಆರ್‌ಟಿಎಸ್‌ಗೆ ಪ್ರತ್ಯೇಕ ಪಥವನ್ನು ರಚನೆ ಮಾಡಲಾಗಿದೆ. ಈ ಮಾರ್ಗದಲ್ಲಿ ಬೇರೆ ವಾಹನಗಳು ಸಂಚಾರ ನಡೆಸುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

English summary
Separated bus lanes to be created in 12 roads of Bengaluru city soon. Bangalore Metropolitan Transport Corporation (BMTC) bus will run in separated lane from November 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X