ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಓಲಾ, ಊಬರ್‌ ಕ್ಯಾಬ್‌ಗಳಿಗಾಗಿಯೇ ಪ್ರತ್ಯೇಕ ಪಾರ್ಕಿಂಗ್ ಬೇಕು

|
Google Oneindia Kannada News

ಬೆಂಗಳೂರು, ಜುಲೈ 5: ನಗರದಲ್ಲಿ ಓಲಾ, ಊಬರ್ ಕ್ಯಾಬ್‌ಗಳ ಬಳಕೆದಾರರು ಶೇ.90ರಷ್ಟಿದ್ದಾರೆ. ಈ ಕ್ಯಾಬ್‌ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿಕೊಂಡಿರುತ್ತಾರೆ. ಹಾಗಾಗಿ ಪ್ರತ್ಯೇಕ ನಿಲುಗಡೆ ಬೇಕು ಎಂದು ಸಂಚಾರ ಪೊಲೀಸರು ಒತ್ತಾಯಿಸಿದ್ದಾರೆ.

ಪೊಲೀಸ್ ಅಸಿಸ್ಟೆಂಟ್ ಕಮಿನರ್ ಓಲಾ ಹಾಗೂ ಊಬರ್‌ಗೆ ಸಂಬಂಧಪಟ್ಟವರನ್ನು ಭೇಟಿಯಾದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದಾರೆ.

ಕೇಂದ್ರ ಕಾನೂನುಬದ್ಧಗೊಳಿಸದರೆ ಮಾತ್ರ ಕಾರು ಪೂಲಿಂಗ್‌ಗೆ ಅವಕಾಶ ಎಂದ ರಾಜ್ಯಕೇಂದ್ರ ಕಾನೂನುಬದ್ಧಗೊಳಿಸದರೆ ಮಾತ್ರ ಕಾರು ಪೂಲಿಂಗ್‌ಗೆ ಅವಕಾಶ ಎಂದ ರಾಜ್ಯ

ಕರ್ನಾಟಕ ಸಾರಿಗೆ ಇಲಾಖೆಯು ಓಲಾ, ಊಬರ್ ಕ್ಯಾಬ್‌ನ ಶೇರ್ ಸೇವೆಯನ್ನು ನಿಷೇಧಿಸುವಂತೆ ನಿರ್ಧಾರ ತೆಗೆದುಕೊಂಡ ಬಳಿಕ ಈ ಸಭೆ ನಡೆದಿದೆ.

Separate parking for OLA and Uber cabs

ಓಲಾ, ಊಬರ್‌ಗೆ ಪ್ರತ್ಯೇಕ ನಿಲುಗಡೆ ಕಲ್ಪಿಸಿಕೊಡಿ ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು.

ಸೆಂಟ್ರಲ್ ಬಿಜಿನೆಸ್ ಡಿಸ್ಟ್ರಿಕ್ಟ್ಸ್, ಕೋರಮಂಗಲ, ಜಯನಗರ ಇಂತಹ ಪ್ರದೇಶಗಳಲ್ಲಿ ನಿಲುಗಡೆ ಬೇಕಾಗಿದೆ. ಪ್ರಯಾಣಿಕರ ಭದ್ರತೆ ಕಡೆಗೂ ಒತ್ತು ನೀಡಬೇಕಾಗುತ್ತದೆ. ಪಾರ್ಕಿಂಗ್ ಪ್ರದೇಶ ನೀಡುವುದರಿಂದ ವಾಹನ ದಟ್ಟಣೆಯೂ ಕಡಿಮೆಯಾಗುತ್ತದೆ. ಎಲ್ಲೆಂದರಲ್ಲಿ ಕ್ಯಾಬುಗಳನ್ನು ನಿಲ್ಲಿಸುವ ಪರಿಸ್ಥಿತಿಯೂ ಬರುವುದಿಲ್ಲ.

ನಾವು ವಾಹನಗಳ ದಟ್ಟಣೆ ಕಡಿಮೆ ಮಾಡುವ ಹಾಗೂ ಪ್ರಯಾಣಿಕರಿಗೆ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಶೇರ್ ಸೇವೆ ಆರಂಭಿಸಿದ್ದೆವು. ಓಲಾ ಶೇರ್ ಹಾಗೂ ಓಲಾ ಬೈಕ್‌ಗಳು ನಗರದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುತ್ತಿದ್ದವು.

English summary
Bengaluru traffic police want Separate parking for OLA and Uber cabs because Ola and Uber cab drivers have their vehicles parked along the roadsides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X