ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಮುಂದಾದವರಿಗೆ ಬಿಗ್ ಶಾಕ್..!

|
Google Oneindia Kannada News

ಬೆಂಗಳೂರು, ಡಿ. 25: ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಹಿಂದಕ್ಕೆ ಪಡೆದಿದ್ದರಿಂದ, ಹೊಸ ವರ್ಷಾಚರಣೆ ಸಂದರ್ಭದಲ್ಲಿ ಭರ್ಜರಿ ಪಾರ್ಟಿ ಮಾಡುವ ಉಮೇದಿನಲ್ಲಿದ್ದ ಬೆಂಗಳೂರಿಗರಿಗೆ ಗೃಹ ಸಚಿವರು ಶಾಕ್ ಕೊಟ್ಟಿದ್ದಾರೆ. ಇಂಗ್ಲೆಂಡ್‌ನಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡು ಮತ್ತಷ್ಟು ವೇಗವಾಗಿ ಹರಡುವ ಗುಣಗಳನ್ನು ಬೆಳೆಸಿಕೊಂಡಿದೆ. ಈಗಾಗಲೇ ಇಂಗ್ಲೆಂಡ್‌ನಿಂದ ಸಾವಿರಾರು ಜನರು ರಾಜ್ಯಕ್ಕೆ, ಅದರಲ್ಲೂ ಬೆಂಗಳೂರಿಗೆ ಬಂದಿದ್ದಾರೆ. ಅವರಲ್ಲಿ ಬಹುತೇಕರು ಕೋವಿಡ್ ನೆಗಟಿವ್ ಪರೀಕ್ಷಾ ವರದಿಯನ್ನೂ ಸಲ್ಲಿಸಿರಲಿಲ್ಲ. ಹೀಗಾಗಿ ಗೊಂದಲಕ್ಕೆ ಬಿದ್ದಿದ್ದ ಆರೋಗ್ಯ ಇಲಾಖೆ, ಏಕಾಏಕಿ ನೈಟ್ ಕರ್ಫ್ಯೂ ಹಾಕಲು ಮುಂದಾಗಿತ್ತು.

ಹೀಗಾಗಿ ವರ್ಷಾಚರರಣೆ ಪಾರ್ಟಿ ಮಾಡುವ ಹುಮ್ಮನಸ್ಸಿನಲ್ಲಿದ್ದವರಿಗೆ ನಿರಾಸೆಯಾಗಿತ್ತು. ಬಳಿಕ ಸರ್ಕಾರ ನೈಟ್‌ ಕರ್ಫ್ಯೂ ಹಿಂದಕ್ಕೆ ಪಡೆದಿದ್ದರಿಂದ ಮತ್ತೆ ಪಾರ್ಟಿ ಪ್ರಿಯರು ಸಂತಸಗೊಂಡಿದ್ದರು. ಆದರೆ ಹೊಸ ವರ್ಷಾಚರಣೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪಾರ್ಟಿ ಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ.

ಕಮಿಷನರ್‌ಗೆ ಸೂಚನೆ

ಕಮಿಷನರ್‌ಗೆ ಸೂಚನೆ

ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಮುಂದಾದವರಿಗೆ ಬಿಗ್ ಶಾಕ್ ಕಾದಿದೆ. ಇಷ್ಟ ಬಂದಂತೆ ವರ್ಷಾಚರಣೆಗೆ ಅವಕಾಶ ಇಲ್ಲ. ನೈಟ್ ಕರ್ಪ್ಯೂ ಇಲ್ಲ ಅಂದರೂ, ಬೆಂಗಳೂರಿಗೆ ಹೊಸ ಮಾರ್ಗಸೂಚಿ ಜಾರಿಯಾಗಲಿದೆ. ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ತರಲು ಗೃಹ ಇಲಾಖೆ ನಿರ್ಧಾರ ಮಾಡಿದೆ. ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ಸಿದ್ಧಮಾಡಲು ಮಹಾನಗರ ಪೊಲೀಸ್ ಆಯುಕ್ತರಿಗೆ ರಾಜ್ಯ ಗೃಹ ಇಲಾಖೆ ಸೂಚಿಸಿದೆ.

ಬೇಕಾಬಿಟ್ಟಿ ಓಡಾಡುವಂತಿಲ್ಲ

ಬೇಕಾಬಿಟ್ಟಿ ಓಡಾಡುವಂತಿಲ್ಲ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರತ್ಯೇಕ ಮಾರ್ಗಸೂಚಿಸಿ ರಚಿಸಿ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಡಿಸೆಂಬರ್ 31ರಂದು ಬೇಕಾಬಿಟ್ಟಿ ಓಡಾಟ ಸೇರಿದಂತೆ ಕಾನೂನು ಸುವ್ಯಸ್ಥೆಗೆ ಅಡ್ಡಗಾಲು ಹಾಕುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಹೀಗಾಗಿ

ಬೆಂಗಳೂರಿಗೆ ಪ್ರತ್ಯೇಕ ಗೈಡ್‌ಲೈನ್ಸ್‌ ತರಲು ಸಿದ್ಧತೆ ನಡೆದಿದೆ.

ಬೆಂಗಳೂರಿಗೆ ಮಾರ್ಗಸೂಚಿ

ಬೆಂಗಳೂರಿಗೆ ಮಾರ್ಗಸೂಚಿ

ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಹೊಸ ವರ್ಷಾಚರಣೆ ಹಿಂದಿನ ದಿನಕ್ಕೆ ಸಂಬಂಧಿಸಿದಂತೆ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ ತರಲು ಸೂಚಿಸಿದ್ದೇನೆ. ಮಹಾನಗರ ಪೊಲೀಸ್ ಆಯುಕ್ತರು ಮಾರ್ಗಸೂಚಿಸಿ ರಚಿಸಿ ಜಾರಿ ಮಾಡುತ್ತಾರೆ. ನಾಳೆ ಅಥವಾ ನಾಡಿದ್ದು ಮಾರ್ಗಸೂಚಿ ಜಾರಿಗೆ ಬರಲಿದೆ ಎಂದು ಹೇಳಿಕೆ ನೀಡಿದ್ದಾರೆ.

Recommended Video

ಬೆಂಗಳೂರು: ರಿಲಯನ್ಸ್ ಡಿಜಿಟಲ್ ಶಾಪ್ ನಲ್ಲಿ ಕಳ್ಳರ ಕರಾಮತ್ತು | Reliance digital | Oneindia Kannada
ಸಂಭ್ರಮಾಚರಣೆಗೆ ಅವಕಾಶವಿಲ್ಲ

ಸಂಭ್ರಮಾಚರಣೆಗೆ ಅವಕಾಶವಿಲ್ಲ

ಬೆಂಗಳೂರಿನ ಎಂ.ಜಿ. ರೋಡ್, ಬ್ರಿಗೇಡ್ ರಸ್ತೆಗಳಲ್ಲಿ ಕಳೆದ ವರ್ಷದಂತೆ ಯಾವುದೇ ಸಂಭ್ರಮಾಚರಣೆಗೆ ಅವಕಾಶವಿಲ್ಲ ಎಂದು ಈಗಾಗಲೇ ಪೊಲೀಸ್ ಇಲಾಖೆ ಸ್ಷಷ್ಟಪಡಿಸಿದೆ. ಜೊತೆಗೆ ಪಬ್, ಕ್ಲಬ್, ರೆಸ್ಟೊರೆಂಟ್, ಫೈವ್ ಸ್ಟಾರ್ ಹೋಟೆಲ್ ಸೇರಿದಂತೆ ಉಳಿದೆಲ್ಲ ಕಡೆಗಳಲ್ಲಿ ಡಿಸೆಂಬರ್ 31 ರಂದು ಏನೆಲ್ಲಾ ನಿರ್ಬಂಧಗಳು ಇರುತ್ತವೆ ಎಂಬುದು ಪೊಲೀಸ್ ಆಯುಕ್ತರು ಹೊರಡಿಸುವ ಹೊಸ ಮಾರ್ಗಸೂಚಿಯ ಮೇಲೆ ಅವಲಂಬಿತವಾಗುತ್ತದೆ. ಒಟ್ಟಾರೆ ನೈಟ್‌ಕರ್ಫ್ಯೂ ಇಲ್ಲ, ಸರ್ಕಾರ ತನ್ನ ಆದಾಯಕ್ಕೆ ಕತ್ತರಿ ಹಾಕಿಕೊಳ್ಳುವುದಿಲ್ಲ. ಹೀಗಾಗಿ ನಾವು ನಮ್ಮ ಪಾರ್ಟಿ ಮಾಡಬಹುದು ಎಂದು ಕೊಂಡಿದ್ದರಿಗೆ ಗೃಹ ಸಚಿವರ ಹೇಳಿಕೆ ಶಾಕ್ ನೀಡಿದೆ.

English summary
The Home Department has given a big shock to those who celebrate New Year's Eve in Bengaluru. I have suggested to bring a separate sop to Bengaluru for the New Year's Eve. The Metropolitan Police Commissioner shall give and enforce the guidelines. Home Minister Basavaraj Bommai has said that the guidelines will be implemented tomorrow. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X