ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಗರ್ಭಿಣಿಯರಿಗೆ ಪ್ರತ್ಯೇಕ ಗೇಟ್

|
Google Oneindia Kannada News

ಬೆಂಗಳೂರು, ಜನವರಿ 5: ಗರ್ಭಿಣಿಯರ ಆರೋಗ್ಯದ ಹಿರದೃಷ್ಟಿಯಿಂದ ಅವರಿಗೆ ಪ್ರತ್ಯೇಕ ಗೇಟ್ ವ್ಯವಸ್ಥೆಯನ್ನು ಬಿಎಂಆರ್‌ಸಿಎಲ್ ಕಲ್ಪಿಸಿದೆ.

ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ! ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಸಂಚಾರಕ್ಕೆ 2 ವರ್ಷ ಕಾಯ್ಬೇಕಂತೆ!

ಕೆಲವು ಮಹಿಳೆಯರು ಬಿಎಂಆರ್‌ಸಿಎಲ್ ಬಳಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಗರ್ಭಿಣಿಯರಿಗಾಗಿಯೇ ಮೆಟ್ರೋ ನಿಲ್ದಾಣಕ್ಕೆ ಬರುವ ಹಾಗೂ ಹೊರ ಹೋಗಲು ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈಗಿರುವ ದ್ವಾರದಲ್ಲಿ ಯಾವುದೇ ದೋಷಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡನೇ ಆರು ಬೋಗಿಗಳ ಮೆಟ್ರೋ ಸೇವೆಗೆ ಎಚ್ಡಿಕೆ ಚಾಲನೆ ಎರಡನೇ ಆರು ಬೋಗಿಗಳ ಮೆಟ್ರೋ ಸೇವೆಗೆ ಎಚ್ಡಿಕೆ ಚಾಲನೆ

ಇಷ್ಟುದಿನ ಕಾರ್ಡ್ ಅಥವಾ ಟೋಕನ್‌ಗಳನ್ನು ಆಟೋಮೆಟಿಕ್ ಫೇರ್ ಕಲೆಕ್ಷನ್ ಗೇಟುಗಳಲ್ಲಿ ಹಾಕುತ್ತಿದ್ದರು ಆದರೆ ಇನ್ನು ಮುಂದಿನ ದಿನಗಳಲ್ಲಿ ಸರ್ವೀಸ್‌ ಗೇಟುಗಳ ಮೂಲಕ ಅವರಿಗೆ ಹೋಗಲು ಅವಕಾಶ ಮಾಡಿಕೊಟ್ಟರೆ ಅವರಿಂದ ಹಣ ಪಡೆಯುವುದು ಹೇಗೆ ಎನ್ನುವ ಬಗ್ಗೆ ಚಿಂತನೆ ನಡೆಸಿದ್ದಾರೆ.

Separate gates for pregnant women at Metro stations

ಒಎಫ್‌ಸಿ ಗೇಟ್ ಮೂಲಕ ತೆರಳಬೇಕಿದ್ದರೆ ಕಾರ್ಡ್ ಸ್ವೈಪ್ ಮಾಡಬೇಕು ಇಲ್ಲವೇ ಟೋಕನ್‌ ಇಡಬೇಕಾಗುತ್ತದೆ, ಒಂದೊಮ್ಮೆ ಚೂರು ಹೆಚ್ಚು ಕಡಿಮೆಯಾದರೂ ಅದು ಬಾಗಿಲು ಹಾಕಿಕೊಳ್ಳುತ್ತದೆ ಅದರಿಂದ ಅಪಾಯವಾಗುತ್ತದೆ ಎಂದು ಕೆಲವರು ದೂರಿದ್ದಾರೆ.

ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು ಮೆಟ್ರೋ ರೈಲಿನಲ್ಲಿ ತಾಂತ್ರಿಕ ಸಮಸ್ಯೆ: ಗಾಬರಿಗೊಂಡ ಪ್ರಯಾಣಿಕರು

ಆದರೆ ವೈದ್ಯರು ಹೇಳುವ ಪ್ರಕಾರ ಮೆಟಲ್ ಡಿಟೆಕ್ಷನ್‌ ಅಷ್ಟೇ, ಯಾವುದೇ ತೊಂದರೆಯಿಲ್ಲ, ಅದರಲ್ಲಿ ಎಕ್ಸ್‌ರೇ ಇರುವುದಿಲ್ಲ, ಅದು ಕೇವಲ ಸೆನ್ಸರ್‌ ಅಷ್ಟೇ ಎಂದು ತಿಳಿಸಿದ್ದಾರೆ. ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ನಿತ್ಯ 15ಕ್ಕೂ ಹೆಚ್ಚು ಗರ್ಭಿಣಿಯರು ಸರ್ವೀಸ್ ಗೇಟ್ ಮೂಲಕ ಪ್ರವೇಶಿಸುತ್ತಿದ್ದಾರೆ.

English summary
The Bangalore Metro Rail Corporation Limited (BMRCL) has decided to allow pregnant woman to use separate entry and exit gates at all its Metro stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X