ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಪ್ರತ್ಯೇಕ ಕೋವಿಡ್ 19 ನಿಯಮ ಜಾರಿ: ಸಚಿವ ಅಶೋಕ್

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪ್ರತ್ಯೇಕ ಕೋವಿಡ್ ನಿಯಮ ಜಾರಿ ಮಾಡಲಾಗುತ್ತದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

Recommended Video

'ಬೆಂಗಳೂರಿನ ಸ್ಥಿತಿ ಭೀಕರವಾಗಿದೆ, ದಯವಿಟ್ಟು ಮನೆಯಿಂದ ಹೊರಬರಬೇಡಿ...' ಕಣ್ಣೀರು ಹಾಕಿ ವಿನಂತಿಸಿಕೊಂಡ ಸ್ವಯಂ ಸೇವಕ | Oneindia Kannada

ಇಂದು ಸಂಜೆಯೊಳಗೆ ಹೊಸ ನಿಯಮ ಜಾರಿಯಾಗಲಿದೆ, ನಾವು ಸುಧಾಕರ್ , ಸಿಎಂ ಜತೆ ಸಭೆ ನಡೆಸಿದ್ದೇವೆ, ಹಾಸಿಗೆಗಳ ಕೊರತೆ ಬಗ್ಗೆ ಗಮನಹರಿಸಿದ್ದೇವೆ, ಇಂದು ಕೆಲವು ಸಭೆಗಳನ್ನು ಮುಂದುವರೆಸಲಿದ್ದೇವೆ, ರಾಜ್ಯಪಾಲರ ಸಲಹೆ ಮೇರೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವುಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು

ರಾಜ್ಯಪಾಲರು ಇಂದು ವರ್ಚ್ಯುವಲ್ ಸಭೆ ಕರೆದಿದ್ದಾರೆ, ಸಿಎಂ, ಪ್ರತಿಪಕ್ಷ ನಾಯಕರು ಭಾಗಿಯಾಗಲಿದ್ದಾರೆ, ರಾಜ್ಯಪಾಲರಿಗೆ ಕೇಂದ್ರವೇ ಸೂಚನೆ ನೀಡಿದೆ.

Separate Covid19 Rules For Bengaluru Says Minister R Ashok

ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ರಾಜ್ಯಪಾಲರೊಂದಿಗೆ ಚರ್ಚೆ ನಡೆಯುತ್ತಿದೆ, ಇದನ್ನು ಕಾಂಗ್ರೆಸ್ ಅಪಾರ್ಥ ಮಾಡಿಕೊಳ್ಳುವುದು ಬೇಡ, ಕೊರೊನಾ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.

ಖಾಸಗಿಯವರಿಗೂ ಸರ್ಕಾರವೇ ಆಕ್ಸಿಜನ್ ಪೂರೈಸಲಿದೆ, ನಮ್ಮಲ್ಲಿ ಆಕ್ಸಿಜನ್ ಲಭ್ಯವಿದೆ ಆದರೆ ಖಾಲಿ ಸಿಲಿಂಡರ್ ಕೊರತೆ ಇದೆ ಎಂದಿದ್ದಾರೆ. ಬೆಂಗಳೂರಿಗೆ ಲಾಕ್ ಡೌನ್ ಅವಶ್ಯಕತೆ ಇಲ್ಲ. ಸರ್ಕಾರದ ಮುಂದೆಯೂ ಲಾಕ್ ಡೌನ್ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಲಾಕ್ ಡೌನ್ ನಿಂದ ಈಗಾಗಲೇ ತುಂಬಾ ಸಮಸ್ಯೆ ಆಗಿದೆ. ಲಾಕ್ ಡೌನ್ ಹೊರತು ಪಡಿಸಿ ಬಿಗಿ ಕ್ರಮ ಜಾರಿ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಸಭೆಯ ನಂತರ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ ಮಾಡುತ್ತೇವೆ ಎಂದು ಹೇಳಿದರು.

English summary
Minister R Ashok said that If we want to reduce Covid 19 cases in Karnataka we have to introduce separate covid19 rules for Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X